subudhendra teertha rayara mutt yati stutih
ರಚನೆ : ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ..
ಸುಯತೀಂದ್ರ ಕರಕಂಜ ಜಾತ ।
ಸಂಯಮೀ೦ದ್ರ ಸುಬುಧೇಂದ್ರ -
ಸುಧೇನಿಭನಯ್ಯ ।। ಪಲ್ಲವಿ ।।
ಸುಜಯೀ೦ದ್ರ ಸುತನ ಪೌತ್ರ ।
ಸುಜನ ಕುಮುದೇಂದು -
ದೇಶಿಕಮಣಿ ।। ಅ ಪ ।।
ಭಕುತರಿಗೆ ಅಮರತರುವಂತೆ ।
ಶ್ರೀಕಾಂತನ ಏಕಾಂತ ಭಕುತನ -
ದಯದಿ ಅಮರ್ದು ನೀಡುವೆ ।। ಚರಣ ।।
ಏಕ ಚತುರ ನವ ಗ್ರಂಥಗಳ -
ವಿಬುಧಮಣಿಯೇ ।
ಏಕಮೂರ್ತಿ ಬಾದರಾಯಣರ -
ಸಿದ್ಧಾಂತ ಸ್ಥಾಪಕ ।। ಚರಣ ।।
ಮಂತ್ರಾಲಯ ವಾಸ ಮಂತ್ರಾಲಯ-
ಪುರಾಧೀಶನ ಪ್ರೇಷ್ಠ ।
ಮಂತ್ರಮೇಯ ವೇಂಕಟ-
ನಾಥನ ಸೇವಿಪ ।
ಮಂತ್ರವಿದ ಸುಬುಧೇಂದ್ರ -
ಸುಧಾಹೃದ ಕಾಣೋ ।। ಚರಣ ।।
" ವಿವರಣೆ "
ಕರಕಂಜ ಜಾತ = ಕರ ಕಮಲದಿಂದ ಹುಟ್ಟಿದ
ಸಂಯಮೀ೦ದ್ರ = ಯತಿ ಶ್ರೇಷ್ಠ
ಸುಧೇನಿಭನಯ್ಯ = ಅಮೃತ ಸಮಾನಯ್ಯ
" ಸುಜನ ಕುಮುದೇಂದು "
ಸುಜ್ಜನರೆಂಬ ಕೆನ್ನೈದೆಲೆಗೆ ಚಂದ್ರನಂತಿರುವವರು
ಅಮರತರು = ಕಲ್ಪವೃಕ್ಷ
ಅಮರ್ದು = ಅಮೃತ
ಏಕ ಚತುರ ನವ ಗ್ರಂಥ = ಸರ್ವಮೂಲ
[ 1 + 4 x 9 = 37 ]
ವಿಬುಧ = ಜ್ಞಾನಿ
ಏಕಮೂರ್ತಿ = ಸರಿಯೇ ಸರ್ವೋತ್ತಮ
ಮಂತ್ರಮೆಯ = ಮಂತ್ರಗಳಿಂದ ತಿಳಿಯಲ್ಪಡುವವನು - ಶ್ರೀಹರಿ
ಮಂತ್ರವಿದ = ಮಂತ್ರವನು ತಿಳಿದವರು
ಸುಧಾಹೃದ = ಅಮೃತದ ಮಡು
by Nagaraju Haveri,
by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ.
****