Showing posts with label ಕಂಡೆನು ಹರಿಸತಿಯ ಸುರಚಿರ ದುಂಡ ಕಂಕಣ ಕೈಯ್ಯಾ ankita indiresha KANDENU HARISATIYA SURACHIRA DUNDA KANKANA KAIYAA. Show all posts
Showing posts with label ಕಂಡೆನು ಹರಿಸತಿಯ ಸುರಚಿರ ದುಂಡ ಕಂಕಣ ಕೈಯ್ಯಾ ankita indiresha KANDENU HARISATIYA SURACHIRA DUNDA KANKANA KAIYAA. Show all posts

Saturday, 11 December 2021

ಕಂಡೆನು ಹರಿಸತಿಯ ಸುರಚಿರ ದುಂಡ ಕಂಕಣ ಕೈಯ್ಯಾ ankita indiresha KANDENU HARISATIYA SURACHIRA DUNDA KANKANA KAIYAA

ಕಂಡೆನು ಹರಿಸತಿಯ ಸುರಚಿರದುಂಡ ಕಂಕಣ ಕೈಯ್ಯಾ
ಮಂದಾರ ಮಲ್ಲಿಗೆಯ ಹೆರಳಲಿ ದಂಡೆ ಮುಡಿದ ಪರಿಯ ಪ

ಪೈಜಣಯಿಟ್ಟಿಹಳು ಗಳದಿ ಕಟ್ಟಾಣಿಯ ಕಟ್ಟಿಹಳುಹಾಟಕ ಹಾರಗಳು ನೋಳ್ಪರ ನೋಟಕೆ ಹಬ್ಬಗಳು 1

ಕಾಲಕಡಗ ರುಳಿಯು ಕಲಕಲ ಹೇಮ ಪೈಜಣ ಧ್ವನಿಯುಮೇಲೆ ಕಂಚುಕ ಸಿರಿಯು ಪುತ್ಥಳಿ ಮಾಲೆ ತೂಗುವ ಕಟಿಯು 2

ಸರಸಿಜನುವ ಮುಖಿಯು ನಾಶಿಕ್ಹರಳು ಮುತ್ತಿನ ಗೊನೆಯುಹರಳು ಓಲೆಯ ಪ್ರಭೆಯು ಕರ್ಣದಿ ಕುರುಡು ದ್ರಾಕ್ಷಾಲತೆಯು 3

ಸುಂದರಿ ಶುಭಗಾತ್ರೆ ಸುಖಮಯ ಸಿಂಧೂರ ಪಟಾಕಾ ಮಾತ್ರೆಮುಂದೆ ಫಲದ ಪಾತ್ರೆ ಇಟ್ಟಳು ಬಂದು ಸರಸ ನೇರಿ4

ನಂದಬಾಲನ ಮಡದಿ ಸ್ವಪ್ನದಿ ಬಂದು ನಿಂತಳು ಭರದಿಆನಂದವಾಯ್ತು ಮನದಿ ಕಂಡೆನು ಇಂದಿರೇಶನ ದಯದಿ 5
**********