Showing posts with label ಅಡಿಗಡಿಗೆ ಭಕ್ತರನ vijaya vittala suladi ಕಂಚಿ ವರದರಾಜ ಸುಳಾದಿ ADIGADIGE BHAKTARANA KANCHI VARADARAJA SULADI. Show all posts
Showing posts with label ಅಡಿಗಡಿಗೆ ಭಕ್ತರನ vijaya vittala suladi ಕಂಚಿ ವರದರಾಜ ಸುಳಾದಿ ADIGADIGE BHAKTARANA KANCHI VARADARAJA SULADI. Show all posts

Monday 9 December 2019

ಅಡಿಗಡಿಗೆ ಭಕ್ತರನ vijaya vittala suladi ಕಂಚಿ ವರದರಾಜ ಸುಳಾದಿ ADIGADIGE BHAKTARANA KANCHI VARADARAJA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಕಂಚಿ ವರದರಾಜ ಸುಳಾದಿ 

 ರಾಗ ಕೇದಾರಗೌಳ 

 ಧ್ರುವತಾಳ 

ಅಡಿಗಡಿಗೆ ಭಕ್ತರನ ನೋಡುವ ರಾಜಾ 
ಎಡಿಗೆಡಿಗೆ ಭಕ್ತರನ ಪಾಲಿಸುವ ರಾಜಾ 
ನುಡಿನುಡಿಗೆ ಭಕ್ತರನ ನುಡಿಸುವ ರಾಜಾ 
ನಡಿಗಡಿಗೆ ಭಕುತರನು ಬಿಡದಿಪ್ಪ ರಾಜಾ 
ಜಡಿತಾಭರಣದಲ್ಲಿ ಝಗಝಗಿಪ ರಾಜಾ 
ಮುಡಿಗೆ ಪರಮಳ ಕುಸುಮಾ ಮುಡದಿದ್ದ ರಾಜಾ 
ಕುಡತಿಪಾಲ ವಲಿಗೆ ವಲಿದ ವರದರಾಜಾ 
ಪಡಿಗಾಣೆ ಕಡೆಗಾಣೆ ಈತನ ವೈಭವಕ್ಕೆ 
ಪೊಡವಿಯೊಳಗೀತನ ಒಡೆತನಕ್ಕೆ 
ಒಡಒಡನಾಡುವ ವಿಜಯವಿಠ್ಠಲನೀತ 
ಬಡವರಾಧಾರ ಕಂಚಿ ವರದರಾಜಾ ॥ 1 ॥

 ಮಟ್ಟತಾಳ 

ರಾಜಾಧಿರಾಜಾ ರಾಜವಿರಾಜಿತ 
ರಾಜಪೂಜಿತ ರಾಜ ಶಿರೋಮಣಿ 
ರಾಜ ರಾಜಾಧೀಶ ರಾಜವಿಗ್ರಹ ಪೂರ್ಣ 
ರಾಜಮಂಡಲವದನಾ ರಾಜರಾಜವಿನುತಾ 
ರಾಜಶೇಖರ ತಾತಾ ರಾಜರಾಜಾಗ್ರಣಿಯೆ 
ರಾಜೀವದಳನಯನ ರಾಜಮೂರುತಿ ಖಗ -
ರಾಜಗಮನ ಕರಿರಾಜವರದ ದೇವ 
ರಾಜ ವಿಜಯವಿಠ್ಠಲ ರಾಜ ಕಾಂಚೀನಗರ 
ರಾಜ ವರದರಾಜಾ ರಾಜರಾಜೋತ್ತುಮಾ 
ರಾಜ ರಾಜ ರಾಜಾ ॥ 2 ॥

 ರೂಪಕತಾಳ 

ಒಂದು ದಿನ ವೈಕುಂಠ ಮಂದಿರದಲಿ ಹರಿ 
ಇಂದಿರಾ ಸಹಿತದಲಿ ವಂದಾಗಿ ಇರುತಿದ್ದು 
ಮಂದಹಾಸದಲಿ ವಸುಂಧರೆಯೊಳಗಿಂಥ 
ಮಂದಿರಾ ರಚಿಸಬೇಕೆಂದು ಮನದಲ್ಲಿ ತಿಳಿದೂ 
ಸುಂದರ ವಿಜಯವಿಠ್ಠಲರೇಯಾ ಕಾಂಚಿಯಾ 
ಮಂದಿರ ವರದ ತಾನೆಂದು ಮೆರೆವೆನೆಂದು ॥ 3 ॥

 ಝಂಪೆತಾಳ 

ಲೋಕೇಶನಿಂದಲಾರ್ಚನೆಗೊಂಬೆ ಮಿಗಿಲಾಗಿ 
ವೈಕುಂಠನಗರಕ್ಕೆ ಸರಿ ಎಂದೆನಿಸುವೇನೂ ಭೂ -
ಲೋಕದೊಳಗೆ ಚಿತ್ರಮಯವಾಗಿ ವಿರಚಿಸಿ 
ಶ್ರೀ ಕಾಂಚಿ ಎಂಬ ಅಭಿಧಾನದಲ್ಲೀ 
ಲೋಕೇಶಾದ್ಯರು ಪೊಗಳಲಾಶ್ಚರ್ಯವಾಗಿ ಅ -
ಲೌಕಿಕವೆಂದು ತಲೆದೂಗುವಂತೆ 
ಸಾಕಾರ ಕಾಂಚೀವರದ ವಿಜಯವಿಠ್ಠಲಾ -
ನೇಕ ದಿನಕ್ಕೆ ಅಜನಿಂದಲರ್ಚನೆಗೊಂಡಾ ॥ 4 ॥

 ತ್ರಿವಿಡಿತಾಳ 

ಇಂದಿರಾ ಭೂದುರ್ಗಾ ಭಾಗ ಏರ್ಪಾಟಿಸಿ 
ಒಂದೊಂದು ಅಧಿಕಕ್ಕೆ ಅಧಿಕ ಸೋಪಾನವು 
ಒಂದೆಂಟು ಚತುರವಿಂಶತಿ ದಶಾಪರಿಮಿತ 
ಕುಂದಣ ಬಲು ಮಣಿಗಳಿಂದಲಿ ಥಳಥಳಿಸಿ 
ಒಂದೊಂದು ಸೋಪಾನ ಮೆಟ್ಟಿಪೋಗಲು ಅವನ 
ನಂದಕ್ಕೆ ಸುರರು ವರ್ಣಿಸಲಾರರೂ 
ತಂದುಕೊಡುವದು ಜ್ಞಾನ ಭಕುತಿ ವೈರಾಗ್ಯವ 
ಹಿಂದಾಗುವದು ತಮೋ ರಾಜಸ ಗುಣವು 
ಪೊಂದುವಾದು ಸತ್ವಗುಣ ಸಾಧ್ಯವಾಗುವದು 
ಇಂದಿರಾಪತಿಯ ಸಂದರುಶನಕ್ಕೆ 
ಸಿಂಧುರಾದ್ರಿ ಕಾಂಚಿವರದ ವಿಜಯವಿಠ್ಠಲ 
ಬಂದಾಡಿದ ಸಕಲ ವೇದಾ ತುತಿಸುತಿರಲೂ ॥ 5 ॥

 ಧ್ರುವತಾಳ 

ಸುತ್ತಲು ಪಾವನವಂತರಿಕ್ಷಕ್ಕೆ ತುಳ -
ಕುತ್ತಲಿವೆ ನಾನಾ ವೃಕ್ಷಂಗಳೂ 
ಮತ್ತೆ ಸರೋವರ ಮಹಾನಿರ್ಮಳವಾಗಿ 
ಚಿತ್ತಕ್ಕೆ ಮನೋಹರವಾಗುತಿದೆ 
ಎತ್ತ ನೋಡಿದರತ್ತ ಪ್ರಾಕಾರ ಗೋಪುರ 
ಕತ್ತಲೆ ಬಡೀದು ಅಂಜಿಸೂತಿದೆ 
ತೆತ್ತಿಸಕೋಟಿ ದೇವತ್ತಿಗಳು ನೆರೆದು 
ಚಿತ್ತವಧಾರೆಂದು ಪೇಳುತಿದೆ 
ಎತ್ತಿ ಪಿಡಿದ ಪತಾಕಿ ಸೂರೆ ನಾನಾ 
ಮುತ್ತಿನ ಸತ್ತಿಗೆ ಪೊಳೆವುತಿದೆ 
ನರ್ತನೆ ಊರ್ವಶಿ ರಂಭಾದಿಗಳು ನಿಂದು 
ತತ್ತ ತ್ತಥೈ ಎಂದು ವೊಪ್ಪುತಿದೆ
ಜತ್ತಾಗಿ ಸ್ವರದಿಂದ ತುಂಬುರ ನಾರದ 
ರಿತ್ತಂಡ ಬಿಡದಲೆ ಪಾಡುತಿದೆ 
ಉತ್ತಮರರಸೆ ಕಾಂಚಿ ವರದಾ ವಿಜಯವಿಠ್ಠಲಾ 
ದೈತ್ಯರಿಗೆ ಭಯಭೀತಿ ಮೆರೆವಾ ದೇವ ॥ 6 ॥

 ರೂಪಕತಾಳ 

ಚತುರಾಶ್ಯಾದಿಗಳು ಚತುರತನದಲ್ಲಿ 
ಚತುರಯುಗದಲ್ಲಿ ಚತುರ ತಪವ ಮಾಡಿ 
ಚತುರ ಪೆಸರಿನಲ್ಲಿ ಪ್ರತಿಪ್ರತಿನಾಮಾ ಪ - 
ರ್ವತವೆಂದೆನಿಸುತ್ತ ಕ್ಷಿತಿಯಾ ಜನರಿಗೆ 
ಗತಿಯ ಕರುಣಿಸುತ್ತ ಪತಿತ ಪಾವನ ಕಾಂಚೀ -
ಪತಿ ವರದರಾಜಾ ವಿಜಯವಿಠ್ಠಲ ಭೋಜಾ 
ಸತತ ನೆರೆವ ನಾಮಿತರ ಹೃದಯದಲ್ಲಿ ॥ 7 ॥

 ಝಂಪೆತಾಳ 

ಬಣ್ಣಿಸಲೆನ್ನಳವೆ ಭಕುತರಾಧಾರನ 
ಹೆಣ್ಣು ಶಿಶುವಿನ ಬಾಲಕನ ಮಾಡಿದಾ 
ಮುನ್ನ ಸೂಳಿಗೆ ವಲಿದು ಪ್ರತಿವರುಷ ದಯದಿಂದ 
ಚನ್ನ ರೂಪದಲಿ ಸಂಚರಿಸುತಿಪ್ಪ 
ಮನ್ನೆ ರಾವುತರಾಯ ಹೆಜ್ಜಿ ಹೆಜ್ಜಿಗೆ ಹಿಡಿ 
ಹೊನ್ನು ಕೊಡುವನು ತನ್ನ ನಂಬಿದಂಥ ಶಾ -
ರಣ್ಯರಾದವರಿಗೆ ಒಂದು ಘಳಿಗೆ ತಪ್ಪದಲೆ 
ಪುಣ್ಯಕೋಟಿರಾಜಾ ಅಮಿತತೇಜಾ 
ಪುಣ್ಯಕ್ಷೇತ್ರ ಕಾಂಚಿವರದ ವಿಜಯವಿಠ್ಠಲ 
ಕಣ್ಣಿಗೆ ತೋರಲು ಮಣಿವೆ ಕುಣಿವೆ ದಣಿವೆ ॥ 8 ॥

 ತ್ರಿವಿಡಿತಾಳ 

ಪಾಂಚಜನ್ಯ ಚಕ್ರಗಧಾ ಅಭಯಹಸ್ತಾ 
ಕಾಂಚಿಯ ವರದ ಹಿಮಂತದ ರಾಜಾ ಪ್ರ - 
ಪಂಚದಲ್ಲಿ ಲೋಕಾ ವಂಚಿಸುವ ಮೃಗ -
ಲಾಂಛನ ತಿಲುಕದಲಿ ಮಿಂಚುವ ರತುನಾ 
ಕಾಂಚಿಧಾಮನೆ ವಿರಂಚಿ ಗಿರಿಯವಾಸಾ 
ಕಾಂಚಿವರದರಾಯಾ ವಿಜಯವಿಠ್ಠಲರೇಯಾ 
ಪಂಚಾಶ್ಯ ವಿನುತಾ ವಿರಿಂಚಿಯ ತಾತಾ ॥ 9 ॥

 ಅಟ್ಟತಾಳ 

ವರದಾನಂತಾ ಸರೋವರದ ತೀರದ ಕರಿ -
ವರದಾರಾಜಾ ಜೀವವರದ ಅಂಬರೀಷ 
ವರದಾ ಫಣಿವರದಾ ಭರದಿಂದ ಭಕ್ತರು 
ಕರದಬ್ಬರಕ್ಕೆ ವರಗರದು ಸುಖ ಸುರಿದ 
ಮೆರೆದಾ ಜಗದ ಕೂಡ ನೆರದ ದುರುಳರ 
ಜರಿದ ದುರಿತ ಪಾಶಾ ಪರಿದಾ ನಿಬ್ಬರದಾ 
ಪರಮಾದರದಾ ಕಾಂಚಿವರದಾ ವಿಜಯವಿಠ್ಠಲಾ 
ಧುರಧೀರಾ ವೈಕುಂಠಪುರದ ರಾಶಿರಂಗಾ ॥ 10 ॥

 ಆದಿತಾಳ 

ಈ ಸೊಗಸು ಈ ಸೊಂಪು ಈ ಸೊಬಗು 
ಈ ಸೌಭಾಗ್ಯ ಈಸು ಮಹಿಮೆ ಈಸು ಲೀಲೆ 
ಏಸೋ ಬಗೆ ಲೇಸುಲೇಸು ಈ ಸುಲಭಯಾತ್ರೆ ದೇಶ 
ದೇಶಾದೊಳಗೆ ಕಾಣಿಸೊ ಕಾಶಿಗಿಂದಧಿಕ ಫಲಾ 
ಸೂಸುವದು ಸಾಸಿರಕ್ಕೆ ಮೀಸಲ ಗತಿಗೆ ಮಾರ್ಗ 
ಸಾಸಿವಿನಿತು ಕೊರತೆ ಇಲ್ಲ 
ಶ್ರೀಶ ಕಾಂಚಿವರದ ದೋಷ ನಾಶಾ ವಿಜಯವಿಠ್ಠಲನು 
ವಾಸವಾಗಿ ಪುರಂದರದಾಸರ ಮಗನ ಪೊರೆದ ॥ 11 ॥

 ಜತೆ 

ವೇಗಾವತಿಯ ತೀರದೊಡಿಯನೆ ವೈಕುಂಠ - 
ದಾಗಾರಾ ವಿಜಯವಿಠ್ಠಲ ಕಾಂಚಿವರದಯ್ಯಾ ॥
********


ಕಂಚಿ ವರದರಾಜ ಸುಳಾದಿ 1

ರಾಗ ಕೇದಾರಗೌಳ
ಧ್ರುವತಾಳ

ಅಡಿಗಡಿಗೆ ಭಕ್ತರನ ನೋಡುವ ರಾಜಾ |
ಎಡಿಗೆಡಿಗೆ ಭಕ್ತರನ ಪಾಲಿಸುವ ರಾಜಾ |
ನುಡಿನುಡಿಗೆ ಭಕ್ತರನ ನುಡಿಸುವ ರಾಜಾ |
ಅಡಿಗಡಿಗೆ ಭಕುತರನು ಬಿಡದಿಪ್ಪ ರಾಜಾ |
ಜಡಿತಾಭರಣದಲ್ಲಿ ಝಗಝಗಿಪ ರಾಜಾ |
ಮುಡಿಗೆ ಪರಮಳ ಕುಸುಮಾ ಮುಡದಿಪ್ಪ ರಾಜಾ |
ಕುಡತಿಪಾಲವಲಿಗೆ ಒಲಿದ ವರದರಾಜಾ |
ಪಡಿಗಾಣೆ ಕಡೆಗಾಣೆ ಈತನ ವೈಭವಕ್ಕೆ |
ಪೊಡವಿಯೊಳಗೀತನ ಒಡೆತನಕ್ಕೆ |
ಒಡಒಡನಾಡುವ ವಿಜಯವಿಠಲ ನೀತ |
ಬಡವರಾಧಾರ ಕಂಚಿ ವರದರಾಜಾ ॥ 1 ॥

 ಮಟ್ಟತಾಳ

ರಾಜಾಧಿರಾಜಾ ರಾಜವಿರಾಜಿತ |
ರಾಜಪೂಜಿತ ರಾಜ ಶಿರೋಮಣಿ |
ರಾಜ ರಾಜಾಧೀಶ ರಾಜವಿಗ್ರಹ ಪೂರ್ಣ |
ರಾಜಮಂಡಲವದನಾ ರಾಜರಾಜವಿನುತಾ |
ರಾಜಶೇಖರ ತಾತಾ ರಾಜರಾಜಾಗ್ರಣಿಯೆ |
ರಾಜೀವದಳನಯನ ರಾಜಮೂರುತಿ ಖಗ |
ರಾಜಗಮನ ಕರಿರಾಜವರದ ದೇವ |
ರಾಜ ವಿಜಯವಿಠಲ ರಾಜ ಕಾಂಚೀನಗರ |
ರಾಜ ವರದರಾಜಾ ರಾಜರಾಜೋತ್ತುಮಾ |
ರಾಜ ರಾಜ ರಾಜಾ ॥ 2 ॥

 ರೂಪಕತಾಳ

ಒಂದು ದಿನ ವೈಕುಂಠ ಮಂದಿರದಲಿ ಹರಿ |
ಇಂದಿರಾ ಸಹಿತದಲಿ ವಂದಾಗಿ ಇರುತಿದ್ದು |
ಮಂದಹಾಸದಲಿ ವಸುಂಧರೆದೊಳಗಿಂಥ |
ಮಂದಿರಾ ರಚಿಸಬೇಕೆಂದು ಮನದಲ್ಲಿ ತಿಳಿದೂ |
ಸುಂದರ ವಿಜಯವಿಠಲ ರೇಯಾ ಕಾಂಚಿಯಾ |
ಮಂದಿರ ವರದ ತಾನೆಂದು ಮೆರೆವೆನೆಂದು ॥ 3 ॥

 ಝಂಪೆತಾಳ

ಲೋಕೇಶನಿಂದಲಾರ್ಚನೆಗೊಂಬೆ ಮಿಗಿಲಾಗಿ |
ವೈಕುಂಠನಗರಕ್ಕೆ ಸರಿ ಎಂದೆನಿಸುವೇ ಭೂ |
ಲೋಕದೊಳಗೆ ಚಿತ್ರಮಯವಾಗಿ ವಿರಚಿಸಿ |
ಶ್ರೀ ಕಾಂಚಿ ಎಂಬ ಅಭಿಧಾನದಲ್ಲೀ |
ಲೋಕೇಶಾದ್ಯರು ಪೊಗಳಲಾಶ್ಚರ್ಯವಾಗಿ ಅ |
ಲೌಕಿಕವೆಂದು ತಲೆದೂಗುವಂತೆ |
ಸಾಕಾರ ಕಾಂಚೀವರದ ವಿಜಯವಿಠಲ |
ಅನೇಕ ದಿನಕ್ಕೆ ಅಜನಿಂದಲಿ ಅರ್ಚನೆಗೊಂಡಾ ॥ 4 ॥

 ತ್ರಿವಿಡಿತಾಳ

ಇಂದಿರಾ ಶ್ರೀಭೂದುರ್ಗಾಭಾಗ ಏರ್ಪಾಡಿಸಿ |
ಒಂದೊಂದು ಅಧಿಕಕ್ಕೆ ಅಧಿಕ ಸೋಪಾನವು |
ಒಂದೆಂಟು ಚತುರವಿಂಶತಿ ದಶಾಪರಿಮಿತ |
ಕುಂದಣ ಬಲು ಮಣಿಗಳಿಂದಲಿ ಥಳಥಳಿಸಿ |
ಒಂದೊಂದು ಸೋಪಾನ ಮೆಟ್ಟಿಪೋಗಲು ಅವನ |
ನಂದಕ್ಕೆ ಸುರರು ವರ್ಣಿಸಲಾರರೂ |
ತಂದುಕೊಡುವದು ಜ್ಞಾನ ಭಕುತಿ ವೈರಾಗ್ಯವ |
ಹಿಂದಾಗುವದು ತಮೋ ರಾಜಸ ಗುಣವು |
ಪೊಂದುವದು ಸತ್ವಗುಣ ಸಾಧ್ಯವಾಗುವುದು |
ಇಂದಿರಾಪತಿಯ ಸಂದರುಶನಕ್ಕೆ |
ಸಿಂಧುರಾದ್ರಿ ಕಾಂಚಿವರದ ವಿಜಯವಿಠಲ |
ಬಂದಾಡಿದ ಸಕಲ ವೇದಾ ತುತಿಸುತಿರಲೂ ॥ 5 ॥

 ಧ್ರುವತಾಳ

ಸುತ್ತಲು ಪಾವನ ಅಂತರಿಕ್ಷಕ್ಕೆ ತುಳು |
ಕುತ್ತಲಿವೆ ನಾನಾ ವೃಕ್ಷಂಗಳೂ |
ಮತ್ತೆ ಸರೋವರ ಮಹಾನಿರ್ಮಳವಾಗಿ |
ಚಿತ್ತಕ್ಕೆ ಮನೋಹರವಾಗುತಿದೆ |
ಎತ್ತ ನೋಡಿದರತ್ತ ಪ್ರಾಕಾರ ಗೋಪುರ |
ಕತ್ತಲೆ ಬಡಿದು ಅಂಜಿಸೂತಿದೆ |
ತೆತ್ತಿಸಕೋಟಿ ದೇವತ್ತಿಗಳು ನೆರೆದು |
ಚಿತ್ತವಧಾರೆಂದು ಪೇಳುತಿದೆ |
ಎತ್ತಿ ಪಿಡಿದ ಪತಾಕಿ ಸೂರೆ ನಾನಾ |
ಮುತ್ತಿನ ಸತ್ತಿಗೆ ಪೊಳೆವುತಿದೆ |
ನರ್ತನೆ ಊರ್ವಶಿ ರಂಭಾದಿಗಳು ನಿಂದು |
ತತ್ತ ತ್ತಥೈ ಎಂದು ಒಪ್ಪುತಿದೇ |
ಜತ್ತಾಗಿ ಸ್ವರದಿಂದ ತುಂಬೂರ ನಾರದ |
ರಿತ್ತಂಡ ಬಿಡದಲೆ ಪಾಡುತಿದೆ |
ಉತ್ತಮರಸೆ ಕಾಂಚಿ ವರದಾ ವಿಜಯವಿಠಲ |
ದೈತ್ಯರಿಗೆ ಭಯಭೀತಿ ಮೆರೆವಾ ದೇವ ॥ 6 ॥

 ರೂಪಕತಾಳ

ಚತುರಾಸ್ಯಾದಿಗಳು ಚತುರತನದಲ್ಲಿ |
ಚತುರಯುಗದಲ್ಲಿ ಚತುರ ತಪವಮಾಡಿ |
ಚತುರ ಪೆಸರಿನಲ್ಲಿ ಪ್ರತಿಪ್ರತಿನಾಮಾ ಪ - |
ರ್ವತವೆಂದೆನಿಸುತ್ತ ಕ್ಷಿತಿಯಾ ಜನರಿಗೆ |
ಗತಿಯ ಕರುಣಿಸುತ್ತ ಪತಿತ ಪಾವನ ಕಾಂಚೀ |
ಪತಿ ವರದರಾಜಾ ವಿಜಯವಿಠಲ ಭೋಜಾ |
ಸತತ ನೆರೆವ ನಮಿತರ ಹೃದಯದಲ್ಲಿ ॥ 7 ॥

 ಝಂಪೆತಾಳ

ಬಣ್ಣಿಸಲೆನ್ನಳವೆ ಭಕುತರಾಧಾರನ |
ಹೆಣ್ಣು ಶಿಶುವಿನ ಬಾಲಕನ ಮಾಡಿದಾ |
ಮುನ್ನ ಸೂಳಿಗೆ ಒಲಿದು ಪ್ರತಿವರುಷ ದಯದಿಂದ |
ಚನ್ನ ರೂಪದಲಿ ಸಂಚರಿಸುತಿಪ್ಪ |
ಮನ್ನೆ ರಾವುತರಾಯ ಹೆಜ್ಜಿಹೆಜ್ಜಿಗೆ ಹಿಡಿ |
ಹೊನ್ನು ಕೊಡುವನು ತನ್ನ ನಂಬಿದಂಥ |
ಶರಣ್ಯರಾದವರಿಗೆ ಒಂದು ಘಳಿಗೆ ತಪ್ಪದಲೆ |
ಪುಣ್ಯಕೋಟಿ ರಾಜಾ ಅಮಿತ ತೇಜಾ |
ಪುಣ್ಯಕ್ಷೇತ್ರ ಕಾಂಚಿವರದ ವಿಜಯವಿಠಲ |
ಕಣ್ಣಿಗೆ ತೋರಲು ಮಣಿವೆ ಕುಣಿವೆ ದಣಿವೆ ॥ 8 ॥

 ತ್ರಿವಿಡಿತಾಳ

ಪಾಂಚಜನ್ಯ ಚಕ್ರಗಧಾ ಅಭಯಹಸ್ತಾ |
ಕಾಂಚಿಯ ವರದ ಹಿಮಂತದ ರಾಜಾ ಪ್ರ - |
ಪಂಚದಲ್ಲಿ ಲೋಕಾ ವಂಚಿಸುವ ಮೃಗ |
ಲಾಂಛನ ತಿಲುಕದಲಿ ಮಿಂಚುವ ರತುನಾ |
ಕಾಂಚಿಧಾಮನೆ ವಿರಂಚಿ ಗಿರಿಯವಾಸಾ |
ಕಾಂಚಿವರದರಾಯಾ ವಿಜಯವಿಠಲ ರೇಯಾ |
ಪಂಚಾಸ್ಯ ವಿನುತಾ ವಿರಿಂಚಿಯ ತಾತಾ ॥ 9 ॥

 ಅಟ್ಟತಾಳ

ವರದಾನಂತಾ ಸರೋವರದ ತೀರದ ಕರಿ |
ವರದಾರಾಜಾ ಜೀವವರದ ಅಂಬರೀಷ |
ವರದಾ ಫಣಿವರದಾ ಭರದಿಂದ ಭಕ್ತರು |
ಕರದಬ್ಬರಕ್ಕೆ ವರಗರೆದು ಸುಖ ಸುರಿದ |
ಮೆರೆದಾ ಜಗದ ಕೂಡ ನೆರೆದ ದುರುಳರ |
ಜರಿದ ದುರಿತ ಪಾಶಾ ಪರಿದಾ ನಿಬ್ಬರದಾ |
ಪರಮಾದರದಾ ಕಾಂಚಿವರದಾ ವಿಜಯವಿಠಲಾ |
ಧುರಧೀರಾ ವೈಕುಂಠಪುರದರಶಿ ರಂಗಾ ॥ 10 ॥

 ಆದಿತಾಳ

ಈ ಸೊಗಸು ಈ ಸೊಂಪು ಈ ಸೊಬಗು |
ಈ ಸೌಭಾಗ್ಯ ಈ ಸುಮಹಿಮೆ ಈಸು ಲೀಲೆ |
ಏಸೋ ಬಗೆ ಲೇಸುಲೇಸು ಈ ಸುಲಭಯಾತ್ರೆ ದೇಶ |
ದೇಶಾದೊಳಗೆ ಕಾಣಿಸೊ ಕಾಶಿಗಿಂದಧಿಕ ಫಲಾ |
ಸೂಸುವದು ಸಾಸಿರಕ್ಕೆ ಮೀಸಲಗತಿಗೆ ಮಾರ್ಗ |
ಸಾಸಿವಿನಿತು ಕೊರತೆ ಇಲ್ಲ ಶ್ರೀಶ ಕಾಂಚಿವರದ ।
ದೋಷ ನಾಶಾ ವಿಜಯವಿಠಲನು |
ವಾಸವಾಗಿ ಪುರಂದರದಾಸರ ಮಗನ ಪೊರೆದ ॥ 11 ॥

 ಜತೆ

ವೇಗಾವತಿಯ ತೀರದೊಡಿಯನೆ ವೈಕುಂಠ - ।
ದಾಗಾರಾ ವಿಜಯವಿಠಲ ಕಾಂಚಿವರದಯ್ಯಾ ॥
********