Showing posts with label ರಾಮ ರಾಮ ರಘುನಾಥನೆ ಸುರಸ್ತೋಮ prasannavenkata. Show all posts
Showing posts with label ರಾಮ ರಾಮ ರಘುನಾಥನೆ ಸುರಸ್ತೋಮ prasannavenkata. Show all posts

Saturday, 16 November 2019

ರಾಮ ರಾಮ ರಘುನಾಥನೆ ಸುರಸ್ತೋಮ ankita prasannavenkata

by ಪ್ರಸನ್ನವೆಂಕಟದಾಸರು
ರಾಮ ರಾಮ ರಘುನಾಥನೆ ಸುರಸ್ತೋಮತಿಲಕ ವಿಶ್ವಕರ್ತನೆ ದಿವ್ಯಸ್ವಾಮಿ ಪುಷ್ಕರತೀರವಾಸನೆ ನನ್ನಸ್ವಾಮಿವರಾಹವೆಂಕಟೇಶನೆ ಪ.

ಕಾಯೊ ಕಾಯೊ ಮಧುಮರ್ದನಭವಸಾಯಕದೂರ ಜನಾರ್ದನ ಯದುನಾಯಕಧೃತಗೋವರ್ಧನ ನಾರಾಯಣ ನಿಜಜನವರ್ಧನ 1

ಹೊಂದಿದಭಟಕಲ್ಪವೃಕ್ಷನೆ ನನ್ನತಂದೆ ತಾಯಿ ವಿಶ್ವಕುಕ್ಷನೆಕ್ಷೀರಸಿಂಧುಮಂದಿರ ಅಧ್ಯಕ್ಷನೆ ನಿನ್ನಿಂದಾರುಗತಿ ಪದುಮಾಕ್ಷನೆ 2

ಅಡಿಗಡಿಗೊದಗದ ತಪ್ಪನೆ ಇಕ್ಕಡಿಮಾಡುದೇವ ತಿಮ್ಮಪ್ಪನೆಮಾಯಾಸಡಕ ತಪ್ಪಿಸು ಸುಪ್ರದೀಪನೆನಿತ್ಯಬಿಡದೆ ಕ್ರೀಡಾದ್ರಿಯೊಳಿಪ್ಪನೆ 3

ಲೇಶಭಕ್ತಿಗೆ ಮನ ಹಾರಿತು ವಿಷಯಾಸೆಯಟವಿಯನೆ ಸೇರಿತು ಈಹೇಸಿ ಚಂಚಲಚಿತ್ತ ಹೋರಿತು ತವದಾಸರ ಸಂಗಕೆ ಜಾರಿತು 4

ಕುಸುಮಶರನಂತ:ತೇಜನೆ ಮಹಮಿಸುನಿವೆಟ್ಟದ ಕಲ್ಪಭೂಜನೆ ಅಜÕನಿಶಾಕುಲ ಉಡುಗಣರಾಜನೆ ಶ್ರೀಪ್ರಸನ್ವೆಂಕಟ ರಾಜಾಧಿರಾಜನೆ 5
*******