ರಾಗ: [ಪಂತುವರಾಳಿ] ತಾಳ: [ಆದಿ]
ನೀ ಕರುಣಿಸದಿರೆ ಸಾಕುವರ್ಯಾರು ದ-
ಯಾಕರ ಮೂರುತಿ ರಾಘವೇಂದ್ರ ಪ
ಪಾರು ಮಾಡೊ ಸಂಸಾರ ಭವದಿ ಅ-
ಪಾರ ಮಹಿಮ ಗುರು ರಾಘವೇಂದ್ರಾ
ದೂರ ನೋಡದಲೆ ಬಿಡಿಸೊ ತವ ಚರ-
ಣಾರವಿಂದಕೆ ಕೊರಳನು ಕಟ್ಟಿಸೊ 1
ಒಡವೆ ವಸ್ತುಗಳ ಮಡದಿ ಮಕ್ಕಳ
ಕೊಡು ಎನುತಲಿ ಬೇಡುವುದಿಲ್ಲ
ಒಡೆÉಯನೆ ನಿನ್ನಯ ಅಡಿಗಳಲಿ
ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ 2
ನರರ ಸೇವೆಯಾ ಬಿಡಿಸೊ
ಹರಿವಾಯುಗಳ ಸೇವೆಯಾ ಹಿಡಿಸೊ
ವರದ ಹನುಮೇಶವಿಠಲನಾ
ಸರ್ವೋತ್ತಮನೆಂದು ಕರೆದವನೆ 3
***