Showing posts with label ಮಾಕಾಂತೆಯರಸನ ತೋರೆನಗಮ್ಮ ಸಾಕುವ ಸರಸನ ತೋರೆ hayavadana. Show all posts
Showing posts with label ಮಾಕಾಂತೆಯರಸನ ತೋರೆನಗಮ್ಮ ಸಾಕುವ ಸರಸನ ತೋರೆ hayavadana. Show all posts

Wednesday, 1 September 2021

ಮಾಕಾಂತೆಯರಸನ ತೋರೆನಗಮ್ಮ ಸಾಕುವ ಸರಸನ ತೋರೆ ankita hayavadana

 ..

ಮಾಕಾಂತೆಯರಸನ ತೋರೆನಗಮ್ಮ

ಸಾಕುವ ಸರಸನ ತೋರೆ ಪ.


ಕಣ್ಣೆರಡು ಸಾಸಿರುಳ್ಳವನಂಗದಿ

ಕಣ್ಣಮುಚ್ಚಿ ಮಲಗಿಪ್ಪನ

ಹೊನ್ನು ಮಣ್ಣಿನ ರಾಶಿಯಿಂದ ಕೂಡಿಪ್ಪನ

ಮಣ್ಣ ಕೂಡಿದ ದಿವ್ಯಕಾಯನ 1


ಮಣ್ಣಿನ ದೇವರ ಮುಖದಿಂದ

ಮಣ್ಣಿಗೆ ಸೆಣಸುವರ ಭುಜದಿಂದ

ಮಣ್ಣ ಪಾ(ನಾ?)ಡುವರ ತೊಡೆಯಲ್ಲಿ ಮೂಡಿ ಮತ್ತೆ

ಮಣ್ಣ ಚರಣದಿ ಪುಟ್ಟಿಸಿದನ 2


ಕಣ್ಣ ಮುಚ್ಚದನ ಕಣ್ಣ ತೋರದನ

ಹೆಣ್ಣಾಳಿನುರುಬಿನಲಿ ಮುಕ್ಕಣ್ಣನ

ಮಣ್ಣನಳೆದು ಮಣ್ಣಿನರಸನೊರೆಸಿದ

ಮಣ್ಣಿನ ಮಗಳನಾಳಿದನ 3


ಮಣ್ಣ ಪೊತ್ತನಧರಿಸಿದ ಚಿಣ್ಣನ

ಮಣ್ಣ ಮೆದ್ದ ಸಣ್ಣ ಬಾಯೊಳು

ಮಣ್ಣನೆ ತೋರಿದ ನಂದನರಾಣಿಗೆ

ತಲ್ಲಣ ಹಬ್ಬವ ಕೊಟ್ಟ ಧೀರ4


ಕನ್ನಗಳ್ಳರ ಕೊಂದು ಕಣ್ಣಿಲ್ಲದವರಿಗೆ

ಕಣ್ಣ ತರಿಸಿಕೊಟ್ಟ ಚದುರನ

ಕಣ್ಣಿಲ್ಲದವನಿಗೆ ಕಣ್ಣ ಕೊಟ್ಟನಂತ

ಕಣ್ಣುಳ್ಳ ರೂಪವ ತೋರ್ದನ 5


ಹೆಣ್ಣ ಮೋಹಿಸುವನ ಸುಟ್ಟುರಿ-

ಗಣ್ಣನ ಮರುಳು ಮಾಡಿದನ

ಹೆಣ್ಣನುಂಗುಟದಿ ಪಡೆದು ತಮ್ಮಣ್ಣನ

ಮಣ್ಣಿನೊಡೆಯ ಮಾಡಿಸಿದನ 6


ಮಣ್ಣಿಗಾಗಿ ಬಂದ ಮಣ್ಣನಾಳಿದ ದುರ್ಜನ

ದಾನವರ ಕೊಂದನ

ಹೆಣ್ಣು ಮಣ್ಣೊಲ್ಲದ ವಾದಿರಾಜನಿಗೆ

ಪ್ರಸನ್ನನಾದ ಹಯವದನನ 7

***