ಸುವ್ವಿ ಸುವ್ವಿ ಉರಗಾದ್ರಿವಾಸ ಶ್ರೀ ವೆಂಕಟೇಶ ಸುವ್ವಿ
ಶ್ರೀ ಸಚ್ಚಿದಾನಂದಾತ್ಮಕಾನೆ ಸುವ್ವಿ
ಮೂಲನಾರಾಯಣ ಮೂಲಪ್ರಕೃತಿಯನ್ನು
ಮೂರುಭಾಗಗೈಸಿ ಸೃಷ್ಟಿಮಾಡಿದನೆ ಸುವ್ವಿ
ಸೃಷ್ಟಿಯೊಳು ಗುಣವ್ಯಷ್ಟಿಸಮಷ್ಟಿಯಿಂದ
ಸೃಷ್ಟಿಸಿದ ಜಗಸಂಸೃಷ್ಟನೆನಿಸಿದ ಸುವ್ವಿ
ಸತ್ವರಜತಮ ಸಂಯುಕ್ತದಿಂದ ಕರ್ಮ
ಮುಕ್ತಿ ಪರ್ಯಂತ ಜನ್ಮಕರ್ಮಂಗಳು ಸುವ್ವಿ
ಕರ್ಮಂಗಳು ಸವೆದು ಉತ್ಕ್ರಾಂತ ಮಾರ್ಗ ಪಿಡಿದು
ತಮ್ಮ ಸ್ವರೂಪ ಕರ್ಮನೆಸಗುವರೋ ಸುವ್ವಿ
ಮಹದಹಂಕಾರದಿಂದ ವೈಕಾರಿಕದಿಂದ ವ್ಯಸ್ತ-
ರಾದರು ತತ್ವದೇವತೆಗಳು ಸುವ್ವಿ
ದೇವತೆಗಳಾದರು ಮೇಲೆ ರಾಜಸಾಹಂಕಾರದಿಂದ
ಇಂದ್ರಿಯಾದಿಗಳೆಲ್ಲ ಸೃಷ್ಟಿಯಾದವು ಸುವ್ವಿ
ಭೂತಪಂಚಕವು ತನ್ಮಾತ್ರಪಂಚಕಗಳು ತಾಮ-
ಸಾಹಂಕಾರಗಳುದಿಸಿದವೆನ್ನು ಸುವ್ವಿ
ಉದಿಸಿದಹಂಕಾರತ್ರಯದೊಳು ಬಂದು ಸರ್ವಸೃಷ್ಟಿ
ಅದುಭುತವಾದುದು ಅನಿರುದ್ಧನಿಂದ ಸುವ್ವಿ.........
********
ವೈಕಾರಿಕ ತೈಜಸ ತಾಮಸವೆಂಬ
ತ್ರೈತತ್ವಗಳೆಂಬ....
ತಾಮಸ ಅಹಂಕಾರದಿಂದ ಪಂಚ ಮಹಾಭೂತಗಳ ಸೃಷ್ಟಿಯ ಪೂರ್ವದಲ್ಲಿ ಮೊದಲು ಪಂಚ ತನ್ಮಾತ್ರಗಳ ಸೃಷ್ಟಿ ಅರ್ಥತ್ ಸೂಕ್ಷ್ಮ ರೂಪದಲ್ಲಿದ್ದ ತತ್ವಗಳು ವಿಸ್ತೃತವಾಗಿ ತದನಂತರದಲ್ಲಿ ಪಂಚ ಮಹಾಭೂತಗಳ ಸೃಷ್ಟಿ ಆಯಿತು
ಇದಕ್ಕೂ ಪೂರ್ವದಲ್ಲಿ
ವೈಕಾರಿಕ ಅಹಂಕಾರದಿಂದ ದೇವತೆಗಳ ಸೃಷ್ಟಿ , ಮನಸ್ಸು , ಬುದ್ಧಿ ಮತ್ತು ಚಿತ್ತಗಳ ಸೃಷ್ಟಿ ಆಯಿತು.
*******