RAO COLLECTIONS SONGS refer remember refresh render DEVARANAMA
ರಾಗ – : ತಾಳ –
ನರಹರಿಯೇ ಪಾಲಿಸೋ ll ಪ ll
ಪರಮ ಪುರುಷ ಪ್ರಹ್ಲಾದ ವರದ ll ಅ ಪ ll
ದನುಜ ತನ್ನ ಮಗನನು ಬಾಧಿಸುತಿರೆ
ಕನಲಿ ಕಂಬದಿಂದವತರಿಸಿದ ll 1 ll
ನಖದಿ ಉದರವನು ಸೀಳುತಲಿ ಹಿರ-
ಣ್ಯಕನ ಕೊಂದು ಕರುಳನು ಧರಿಸಿದ ll 2 ll
ಗುರುರಾಮವಿಟ್ಠಲ ಕಾಮಿತವರಗಳ
ಶರಣಗೆ ನೀಡುತ ಆದರಿಸಿದ ll 3 ll
***