Showing posts with label ಆರುತಿ ಮಾಡೆ ನೀರೆ ಭಾರತಿ bheemesha krishna. Show all posts
Showing posts with label ಆರುತಿ ಮಾಡೆ ನೀರೆ ಭಾರತಿ bheemesha krishna. Show all posts

Friday, 27 December 2019

ಆರುತಿ ಮಾಡೆ ನೀರೆ ಭಾರತಿ ankita bheemesha krishna

by ಹರಪನ ಹಳ್ಳಿ ಭೀಮವ್ವ
ಆರತಿ ಮಾಡೆ ನೀರೆ ಭಾರತಿ-
ಗಾರತಿ ಮಾಡೆ ನೀರೆ
ಮಾರುತಿ ಸತಿಯಾದ ದ್ರೌಪದಿದೇವ್ಯೇರಿ -
ಗಾರತಿ ಮಾಡೆ ನೀರೆ ||ಪ||

ಅರಸು ಭೀಮರಾಯಗ್ಹೊಂದಿ ಕುಳಿತ ಕೃಷ್ಣೆ
ಅರಿಷಿಣ ಕುಂಕುಮ  ಹಚ್ಚಿ ಹರುಷದಿ ದ್ರೌಪದಿ ||೧||

ಸುಂದರ ಭೀಮಸೇನ ತಂದ ಸುಗಂಧ ಕುಸುಮ
ಗಂಧ ಪರಿಮಳ ಹಚ್ಚಿ ಮುಡಿಸಿ ಮಲ್ಲಿಗೆ ಕೃಷ್ಣೆ    ||೨||

ವಾಸವಾಗಿ ಬೊಮ್ಮಗಟ್ಟಿಲಿ ಕುಳಿತ ಭೀ-
ಮೇಶಕೃಷ್ಣನ ದಯ ಪಡೆದ ಪಾಂಚಾಲಿ ಸತಿ ||೩||
**********