Showing posts with label ಆಟವಾಡಬೇಕು ಒಳ್ಳೇ ಊಟ ಮಾಡಬೇಕು prasanna. Show all posts
Showing posts with label ಆಟವಾಡಬೇಕು ಒಳ್ಳೇ ಊಟ ಮಾಡಬೇಕು prasanna. Show all posts

Friday 27 December 2019

ಆಟವಾಡಬೇಕು ಒಳ್ಳೇ ಊಟ ಮಾಡಬೇಕು prasanna

by ವಿದ್ಯಾಪ್ರಸನ್ನತೀರ್ಥರು
ಆಟವಾಡಬೇಕು ಒಳ್ಳೇ ಊಟ ಮಾಡಬೇಕು ||ಪ||
ಆಟ ಬಲ್ಲ ಮಾನವನಿಗೆ ರೋಗದ
ಕಾಟವಿರದೆ ತಾ ಊಟ ಮಾಡುವನು ||ಅ||

ಪಂಡಿತರಾಗಿ ಅಖಂಡ ಕಲೆಗಳನು
ಚಂಡಿನಂತೆ ಕರತಲದಲಿ ಪಿಡಿಯುತ ||೧||

ಕಣ್ಣಮುಚ್ಚಿ ಇಂದ್ರಿಯಗಳ ನಿಲ್ಲಿಸಿ
ಹೃನ್ಮಂದಿರದಲಿ ಹರಿಯನು ಹಿಡಿಯುವ ||೨||

ಈತ ಜೀವ ಜಡರೆಂಬೊ ಮೂವರಲಿ
ಈಶನೆ ಹಾಸೆಂದರಿಯುತ ಮೂರೆಲೆ ||೩||

ಹಿಂದಿನ ದಿನ ಹರಿದಿನ ಮರುದಿನಗಳು
ಇಂದಿರೆಯರಸನ ಕೂಡಿ ಏಕಾದಶಿ ||೪||

ಸಿಕ್ಕಿದ ಸ್ಥಾನವು ದಕ್ಕದೆಂಬುದಕೆ
ಭಕ್ತ ಪ್ರಸನ್ನ ತೋರಿದ ಕೊಕ್ಕಿನ ||೫||
*********

🌹ಪ್ರಸನ್ನ ದಾಸರ ಕೃತಿ ಚಿಂತನೆ🌹
ಶ್ರೀಸುಗುಣವಿಠಲ
🙏🌹🙏🌹🙏🌹🙏🌹🙏
     ಕೀರ್ತನೆ
ಆಟವಾಡಬೇಕು ಒಳ್ಳೇ ಊಟಮಾಡಬೇಕು||ಪ||
ಆಟ ಬಲ್ಲ ಮಾನವನಿಗೆ ರೋಗದ|
ಕಾಟವಿರದೆ ತಾ ಊಟಮಾಡುವನು||ಅ.ಪ.||

ಪಂಡಿತರಾಗಿ ಅಖಂಡ ಕಲೆಗಳನು|
ಚಂಡಿನಂತೆ ಕರತಲದಲಿ ಪಿಡಿಯುತ||೧||
*ಕಣ್ಣುಮುಚ್ಚಿ ಇಂದ್ರಿಯಂಗಳ ನಿಲ್ಲಿಸಿ|
ಹೃನ್ಮಂದಿರದಲಿ ಹರಿಯನು ಹಿಡಿಯುವ||೨||
ಈಶಜೀವಜಡರೆಂಬೋ ಮೂವರಲಿ|
ಈಶನೇ ಹಾಸೆಂದರಿಯುತ||೩||
ಹಿಂದಿನ ದಿನ ಹರಿದಿನ ಮರುದಿನಗಳು|
ಇಂದಿರೆಯರಸನ ಕೂಡಿ ಏಕಾದಶಿ||೪||
ಸಿಕ್ಕಿದ ಸ್ಥಾನವು ದಕ್ಕದೆಂಬುದಕೆ|
ಭಕ್ತ *ಪ್ರಸನ್ನನು ತೋರಿದ ಕೊಕ್ಕಿನ*||೫||
-------------------------
ಆಟವಾಡಬೇಕು = ಲೌಕಿಕ ದೃಷ್ಠಿಯಲ್ಲಿ ..ಹೇಳುವುದಾದರೇ..ಗೋಲಿ ,ಚೆಂಡು ,ಬಗುರಿ, ಇವೆಲ್ಲಾ ಹಳೇ ಆಟಗಳು ..ಇತ್ತೀಚಿನ ಹೊಸ ಆಟಗಳಲ್ಲಿ ..ಎಲ್ಲರಿಗೂ ಪ್ರಿಯವಾದ ಆಟ....ಕ್ರಿಕೆಟ್..
.ಮುಂತಾದುವು ..ಯಾವುದೇ ಆಟವಾಡೀದರೂ...ಅದು ದೇಹದ ಸಧೃಢತೆಯನ್ನು ಕಾಪಾಡಿ ..
..ಒಳ್ಳೆಯ ಊಟಮಾಡಲೂ ಹೆಚ್ಚು ಊಟಮಾಡಲು ಯೋಗ್ಯರನ್ನಾಗಿ ಮಾಡುತ್ತದೆ. ಅದೇ ಮೇಲ್ನೋಟದ ಹಿನ್ನಲೆಯ ಆಟದ ರುಚಿಯನ್ನು ತೋರಿಸಿ .....ಭಗವಂತನ ತಾತ್ವಿಕವಾದ ಅಧ್ಭತ ಚಿಂತನೆಯನ್ನು ಈ ಕೃತಿಯಲ್ಲಿ ಹುದುಗಿಸಿಟ್ಟಿದ್ದಾರೆ.!!.

 ಭಗವಂತನ ಅಪಾರ ಕಾರುಣ್ಯ ವಿಶೇಷದಿಂದ  /ಅನೇಕ ಜನ್ಮಾಂತಗಳಿಂದ ಮಾಡಿದ ಕಿಂಚಿತ್ ಪುಣ್ಯವಿಶೇಷದಿಂದ ಪ್ರಾಪ್ತವಾದ ಈ ಸಾಧನಾ ಶರೀರವೇ ಆಟದ ಮೈದಾನ ..ಇದರಲ್ಲಿ    ಹುಟ್ಟು ,ಬಾಲ್ಯ ,ಯೌವನ, ವೃದ್ಯಾಪ್ಯ ,ರೋಗ-ರುಜಿನ -ಸುಖ -ದು಼ಂಖಾದಿ ಉಪದ್ರವಗಳೇ...ಆಟವಾಡುವ ಸಾಮಗ್ರಿಗಳು ...ಈ ಸಾಮಗ್ರಿಗಳೊಂದಿಗೆ ... ಜೀವೋತ್ತಮರಾದ ಮುಖ್ಯಪ್ರಾಣದೇವರ ಮಾರ್ಗದಲ್ಲಿ..ಅರ್ಥೋತ್ ಆಚಾರ್ಯ ಮಧ್ವರ ತತ್ವ ಸಿದ್ಧಾಂಥದ ಅಡಿಯಲ್ಲಿ.. ‌ಸಾಧನೆಯೆಂಬ..ಆಟವನ್ನು ಚೆನ್ನಾಗಿ ಆಡಬೇಕು ...
*ಈ ಆಟವನ್ನು ಹೇಗೆ ಆಡಬೇಕು..? 
ತದಧೀನ ಸಾರೂಪ್ಯಸ್ಯ ಪ್ರತಿಬಿಂಬತ್ಪಾತ್..*(ಪ್ರಮೇಯ ದೀಪಿಕಾ)....ದ ಉಕ್ತಿಯಂತೆ ..ಶ್ರೀಹರಿ ಏಕಮೇವ ಬಿಂಬನಾಗಿದ್ದಾನೆ.ಈ ಜಗತ್ತು ,ಸಕಲ ಜೀವರಾಶಿಗಳೂ ಆತನ ಪ್ರತಿಬಿಂಬರಾಗಿದ್ದು ಆತನ ಆಧೀನವಾಗಿದ್ದೂ ..ಭಿನ್ನನಾಗಿದ್ದಾನೆ .ಕಿಂಚಿತ್ ಸಾದೃಶ್ಯವನ್ನು ಹೊಂದಿರುವುದೇ ಪ್ರತಿಬಿಂಬದ  ಈ ಲಕ್ಷಣ ಭಾವವನ್ನು ಮನದಲ್ಲಿರಿಸಿಕೊಂಡು ಸಾಧನೆಯೆಂಬ ಆಟವಾಡಬೇಕು.ಇದನ್ನೇ ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ...
ಕನ್ನಡಿಯ ಕೈವಿಡಿದು ನೋಡಲು ತನ್ನಿರವು ಸವ್ಯಾಪಸವ್ಯದಿ ಕಣ್ಣಿಗೊಪ್ಪುವ ತೆರದಿ ಅನಿರುದ್ಧನಿಗೆ ಈ ಜಗವು..ಭಿನ್ನ ಭಿನ್ನವೇ ತೋರುತಿಪ್ಪುದು .ಜನ್ಯವಾದುದರಿಂಥ ಪ್ರತಿಬಿಂಬ ಅನ್ನಮಯಗಾನೆಂದರಿತು ಪೂಜಿಸಲು ಕೈಗೊಂಬ ||೫-೩೪||... ಎಂದಿದ್ದಾರೆ.
ಈ ಅನುಸಂಧಾನದಿಂದ ಸಾಧನೆಯ ಆಟವಾಡಿದಾಗ.‌...ಜ್ಞಾನ-ಭಕ್ತಿ-ವೈರಾಗ್ಯಾದಿಗಳ ಅಂತ಼ಃಕರಣಪೂರ್ವಕ ಬಳಲಿಕೆಯುಂಟಾಗಿ  ಮುಕುತಿಯೆಂಬ ಮೃಷ್ಟಾನ್ನದ ಊಟ ಮಾಡಲು ಸಾದ್ಯವಾಗುತ್ತದೆ.! .
ಲೋಕರೂಡಿಯಾಗಿ..ಹೇಳುವುದಾದರೇ..ಆಟವಾಡಿದಾಗ ದೇಹ ಪ್ರಪುಲ್ಲಗೊಂಡು ..ಊಟವನ್ನು ಚೆನ್ನಾಗಿಯೇ ಮಾಡುತ್ತಾನೆ ..ವ್ಯಕ್ತಿ..! 
೧..ಆಟಬಲ್ಲ  ಮಾನವನಿಗೆ ರೋಗದ ಕಾಟವಿರದೇ ತಾ ಊಟಮಾಡುವನು......ಆಟಬಲ್ಲ ಮಾನವನಿಗೆ = ಎಂದಾಗ ಯಾವುದೇ ಆಟಕ್ಕೂ ನೀತಿ-ನಿಯಮಗಳಿರಲೇಬೇಕು...ಸಾಮಾನ್ಯದ ಒಂದು ಲೌಕಿಕ ಆಟಕ್ಕೆ ನೀತಿನಿಯಮಗಳ ಪಾಲನೆ ಅವಶ್ಯವೆಂದಾಗ... ಭಗವಂತನ ಅನುಗ್ರಹಕ್ಕಾಗಿ ನಿಯಮಗಳಿರಬೇಡವೇ?...ಅವುಗಳೇ*ಭಾಗವತ ಧರ್ಮಗಳು(೩೦)ಅವುಗಳನ್ನು ಬಲ್ಲವಾರಾಗಿ  ಪಾಲನೆ ಮಾಡುವ ನಿಯಮಗಳನ್ನು ಹಾಕಿದ *ಆಟ ಬಲ್ಲವರಾಗಬೇಕು.
*ಮಾನವನಿಗೆ ರೋಗದ ಕಾಟವಿರದೇ..=  ದಿನನಿತ್ಯದ ಆಟೋಟಗಳ ಕ್ರೀಡಾಪಟುವಿಗೆ ನೇ .ಸಾಮಾನ್ಯವಾಗಿ ರೋಗಗಳ ಕಾಟವಿರುವುದಿಲ್ಲಾ..ತಾನೇ..?..ಹಾಗೇ ಲೌಕಿಕವಾಗಿ..ಒಂದೊಂದು ಆಟಕ್ಕೆ ಒಂದೊಂದು ದೈಹಿಕ ಲಾಭಗಳಿರುವುದು ಎಲ್ಲರಿಗೂ ತಿಳಿದ ವಿಷಯ ..ಹಾಗೇ ..
 ಶ್ರವಣವೇ ಮೊದಲಾದ ನವವಿಧ ಭಕುತಿಯಿಂದ...ಸಾಧನೆಯ ಆಟದಲ್ಲಿ ತೊಡಗಿದ ಮಾನವನಿಗೆ . ..ದೇಹದ .ರೋಗ ಅಷ್ಟೇ ಏಕೆ ಸಂಸಾರದ ಭವ ರೋಗದ ಕಾಟವೇ ಇಲ್ಲದೇ .           .  ತಾ ಊಟ ಮಾಡುವನು = ಮೃಷ್ಟಾನ್ನದ ಭೂರೀ ಭೋಜನ ಮಾಡಿ ಅರಗಿಸಿ ಕೊಳ್ಳುವ ದೈಹಿಕ ಸಾಮರ್ಥ್ಯವನ್ನು  ಪಡೆದು ....ಆನಂದದಿಂದ ತೃಪ್ತ ನಾಗುವನು.... ಹಾಗೆಯೇ   .......ಕ್ರೀಡೆಗೋಸುಗ ಅವರವರ ಗತಿ ನೀಡಲೋಸಗ ದೇಹಗಳ ಕೊಟ್ಟು  ಸ್ವೇಚ್ಛೆಯಲಿ ಬ್ರಹ್ಮೇಶಾದ್ಯರೊಳು ಪೊಕ್ಕು  ಮಾಡುವನು ವ್ಯಾಪಾರ ಬಹುವಿಧ* ‌ ಎಂಬ ಜಗನ್ನಾಥದಾಸರ ಕ್ರೀಡಾವಿಲಾಸ..ಸಂದಿಯ ಉಕ್ತಿಯಂತೆ ಭಗವಂತನು ನಮ್ಮಲ್ಲಿ ಭಗವದ್ಭಕ್ತರ ಸಾಧನೆಯ ಆಟದಲ್ಲಿ   ..ಅವರವರ ಯೋಗ್ಯತಾನುಸಾರ.*ಶಾಶ್ವತ ಸ್ವರೂಪಾನಂದವೆಂಬ ಊಟಮಾಡುತ್ತಾನೆ.!!!.

೨...ಪಂಡಿತರಾಗಿ ಅಖಂಡ ಕಲೆಗಳನು-ಚೆಂಡಿನಂತೆ ಕರತಲದಲಿ ಪಿಡಿಯುತ......ಲೌಕಿಕವಾದ ಸಾಮಾನ್ಯವಾದ ಆಟದ ಕೌಶಲ್ಯತೆಗಳನ್ನು -ಚಾಚಕ್ಯತೆಯನ್ನು ಅರಿತು ಪಳಗಿದ ನಂತರವೇ ಚೆಂಡನ್ನು ಹಿಡಿದು ..ಆಟ ಮೈದಾನಕ್ಕೆ ಇಳಿಯುತ್ತಾರೇ ..ಅಲ್ಲವೇ...?ಹಾಗೇ ಭಗವಂತನ ಪ್ರಸನ್ನತೆಗಾಗಿ   ಪಂಡಿತರಾಗಿ= ತಿಳಿದವರಾಗಿ ..ಯಥಾಮತಿ .ಭಗವಂತನ ಗುಣಾದಿ ಮಹಿಮೆಗಳರಿತು
ಜೀವಿಯ ನಿಗದಿಯಿಲ್ಲದ  ಆಯುಷ್ಯದ ಕಾಲವೆಂಬ ಮೈದಾನದಲ್ಲಿ
ಪ್ರಾವೀಣ್ಯರಾಗಿ 
ಶ್ರವಣ -ಮನನ ನಿಧಿ ಧ್ಯಾಸನಾದಿಗಳಿಂದ ಗುರುಮುಖೇನ ..ಪಂಚರಾತ್ರಾಗಮಗಳಲ್ಲಿನ ಭಗವಂತನ ಗುಣಾದಿ ಮಹಿಮೆಗಳನ್ನು ತಿಳಿದು ..ಭಗವಂತನ ಕಾರುಣ್ಯಕ್ಕೆ ಪಾತ್ರರಾದ ..ಹಲವಾರು  ...ಜಯತೀರ್ಥಾಚಾರ್ಯರಾದಿಯಾಗಿ ...ಶ್ರೀಪಾದರಾಜರು..ವ್ಯಾಸರಾಜರು..೬೪..ವಿಧ್ಯೆಗಳನ್ನು ಪ್ರಕಟಿಸಿದ ಶ್ರೀ ವಿಜಯೀಂದ್ರರೂ ...ಶ್ರೀರಾಘವೇಂದ್ರರೂ...ಸಾಕಷ್ಟು ಮಹಾಮಹಿಮರು .ಪವಾಡಸಧೃಶ ಮಹಿಮೆಗಳನ್ನು ಚೆಂಡಿನಂತೆ ಆಟವಾಡಿ ತೊರಿಸಿದ್ದಾರೆ..!!.
೩...ಕಣ್ಣುಮುಚ್ಚಿ ಇಂದ್ರಿಯಂಗಳ ನಿಲ್ಲಿಸಿ,...ಹೃನ್ಮಂದಿರದಲಿ ಹರಿಯನು ಹಿಡಿಯುವ....ಸಾಮಾನ್ಯವಾದ ಒಂದು ಕ್ರಿಕೆಟ್ ಆಟವನ್ನೇ ಚಿಂತನೆಮಾಡಿದಾಗ..ಬೋಲರ್ ನ ಏಕಾಗ್ರತೆ ...ಬ್ಯಾಟ್ಸಮೆನ್ಗಳ ...ಏಕಾಗ್ರತೆ ಎಷ್ಟರ ಮಟ್ಟಿಗೆ ಇರುತ್ತೆ !!! ಎಂಬುದು ಎಲ್ಲರಿಗೂ ತಿಳಿದ ವಿಷಯವೇ ..!!.ಒಂದು ಸಾಮಾನ್ಯ ಆಟಕ್ಕೇ ಇಷ್ಟು ಏಕಾಗ್ರತೆ ಏಕನಿಷ್ಠೆ ,ಇಂದ್ರಿಯ ನಿಗ್ರವಿರಬೇಕಾದರೇ ....ನಮ್ಮೆಲ್ಲರ ಅಪ್ಪ ತಿಮ್ಮಪ್ಪನನ್ನು ಹೊಂದಲು ಎಷ್ಟು ಇಂದ್ರಿಯಾದಿ /ವಿಷಯಗಳ ನಿಗ್ರಹ ಬೇಕಲ್ಲವೇ...??     ಹೋಮವನು ಮಾಡಬೇಕಣ್ಣಾ ತನ್ನೊಳಗೆ ತಾನು ..ಹೋಮವನು ಮಾಡಬೇಕಣ್ಣ |ಹೋಮವನು ತಾ ಮಾಡಬೇಕುಕಾಮ್ಯಬಿಟ್ಟು ನೇಮದಿಂದ|ಸ್ವಾಮಿದಹನನ ಸ್ವಾಮಿ ಚರಣಕೆ ಅರ್ಪಿಸುತ ದಿನ ಜನ್ಮಾಲಾಭದಿ||...
ವಿಷಯ ವಾಸನೆಯು ಗೋಚರಿಸದಂತೆ...ಅರಿಷಡ್ವರ್ಗಳ ಅಟವಿಯನ್ನು ಖಂಡಿಸಿ., ಆನಂದನಂದನವೆಂಬೋ ಹೃದಯ ದಿ ರೂಪವು ವದನದಿ ನಾಮವು ಉದರದಿ  ನೇನೇದ್ಯವು ಶ್ರೀಹರಿಪದ ಜಲ ನಿರ್ಮಾಲ್ಯವನೇ ಧರಿಸಿ ಕೋವಿದರ ಸಹವಾಸದಿಂದ .. ಗೀತಾ ವಾಣಿಯಂತೇ ..ಪುನಃ ಪುನಃ ಪ್ರಯತ್ನವೆಂಬ ಅಬ್ಯಾಸ ದಿಂದ ಹೃದಯಸ್ಥಿತನಾದ ಮೂಲೇಶಾತ್ಮಕ  ಹರಿಯನ್ನು ಹಿಡಿಯುವ ಸಾಹಸದ ಆಟವನ್ನು ಆಡಬೇಕು...
೩...ಈಶ ಜೀವ ಜಡರೆಂಬೋ ಮೂವರಲಿ..ಈಶನೇ ಹಾಸೆಂದರಿಯುತ ಮೂರಲೆ....ಸಾಮನ್ಯವಾದ ಒಂದೆರಡುದಿನ ಲೌಕಿಕ ಆಟದಲ್ಲಿ ..ಎಲ್ಲರೂ ಕ್ಯಾಪ್ಟನ್ ಆಗಲು ಸಾದ್ಯವೇ ..!?? ..ಗಖಂಡಿತ ಇಲ್ಲಾ...ಹಾಗೇ ..ಸಾಧನಾ ಜೀವಿಯ ಆಟದಲ್ಲಿ...
ಭಗವಂತ- ಜೀವರು-ಜಡ...ಇವುಗಳಲ್ಲಿ ಉತ್ಕೃಷ್ಠರಾದವರು...ಎಂದಾಗ..
ವಿಜಯದಾಸರ ವಾಣಿಯಂತೆ..ಹರಿಯೇ ಸರ್ವೋತ್ತಮ ,ಹರಿಪರದೇವತೆ...ಪರಮೇಷ್ಠಿಜನಕ ಹರಿಸರ್ವೇಶ್ವರ ವಿಜಯ ವಿಠಲ ನಿತ್ಯಾ.....
ದ್ವಾದಶ ಸ್ತೋತ್ರದಲ್ಲಿ ಹೇಳಿದಂತೆ..
ನಹರೇಃ ಪರಮೋ ನಹರೇಃ ಸದೃಶಃ....ಎಂಬುದಾಗಿ ..ಶ್ರಿಹರಿಯೇ ಶರಣು ಮತ್ತೊಂದು 
ದೈವವಿಲ್ಲಾ...
೪ಹಿಂದಿನ ದಿನ  ಹರಿದಿನ ಮರುದಿನಗಳು*
ಇಂದಿರೆಯರಸನ ಕೂಡಿ ಏಕಾದಶಿ..ಇಲ್ಲಿ ಹಿಂದಿನ ದಿನ =ಬೋಲರ್ ಅವಧಿ  ,ಹರಿದಿನ =ಮಾಚ್ ಡೇ.,ಮರುದಿನ= ಬ್ಯಾಟ್ಮನ್ ಅವದಿ...ಗಳಿಸಿದ ಜಯಾಪಜಯ...ಗಳೇ ಧ್ವಾದಶಿ ಭೋಜನ.....ಎಂದಾದರೇ...ಸಾಧಕರಿಗೆ ಈ ಮೂರೂ ದಿನಗಳು *ಜ್ಞಾನ -ಭಕ್ತಿ- ವ್ಯಾರಾಗ್ಯದಿಗಳ ಫಲಾಫಲಗಳೆನಿಸುತ್ತವೆ ..ಅವು ಹೇಗೆಂದು ನೋಡು ವುದಾದರೇ...
ದಶಮಿ- ಹರಿಸೇವೆಗೆ ಜ್ಞಾನ ಪೂರ್ವಕವಾಗಿ ಸಂಕಲ್ಪಸುತ್ತೆವೆ . ಒಂದು ಹೊತ್ತು ಮಾತ್ರ  ಭೋಜನ ಮಾಡುತ್ತೇವೆ .ತಾನೆ..ಹರಿದಿನ ..=ಭಕ್ತಿಯಿಂದ ಭಗವಂತನ ಉಪಾಸನೆ ಜಾಗರಾದಿಗಳಿಂದ ಭಕ್ತಿಯನ್ನು ಅರ್ಪಿಸುತ್ತೆವೆ ...ಮರುದಿನ=  ಚಾತುರ್ಮಾಸಾದಿ ವ್ರತ/ದನುಸಾರ  / ಸಾತ್ವಿಕ ಹರಿನೈವೇದ್ಯವನ್ನು .ಭುಂಜಿಸುತ್ತೇವೆ ಹಾಗೂ ಅಂದೂ ಸಹ ವೈರಾಗ್ಯಪೂರ್ವಕವಾಗಿ ...ರಾತ್ರಿ ಭೋಜನವನ್ನೂ ತ್ಯಜಿಸುತ್ತೇವೇ ..ಹೀಗೆ ಮೂರೂ ದಿನಗಳು ಜ್ಞಾನ-ಭಕ್ತಿ- ವೈರಾಗ್ಯ ಗಳ ಪ್ರತೀಕದ ಪ್ರತಿಬಿಂಬಗಳಾಗಿರುವ ಅನುಸಂಧಾನವನ್ನು ಹೊಂದುವುದು .
ಇಂದ್ರಿಯಾಣೀಹ ರಕ್ಷಂತಿ ಸ್ವರ್ಗ ಧರ್ಮಾಭಿ ಗುಪ್ತಯೇ| ..... ಎಂಬ  *ಮಹಾಭಾರತದ ಶಾಂತಿಪರ್ವದ ಶ್ಲೋಕದಂತೆ ..ಉಪವಾಸದಿಂದ ಸ್ವರ್ಗಪ್ರಾಪ್ತಿಗೆ ಕಾರಣವಾದ ಇಂದ್ರಿಯಗಳ ರಕ್ಷಣೆ ..ತನ್ಮೂಲಕಭಾಗವತಧರ್ಮಾದಿಗಳ ಸಾಧನೆಯಿಂದ  ಪುರುಷಾರ್ಥ ಸಾಧನವೇ ಆಗಿದೆ .


ಏಕಾದಶಿಯೆಂದರೇ ...ಒಂದು ದಿನ ಮಾತ್ರವೇ ಅಲ್ಲಾ...ತಿಥಿತ್ರಯ ..ಆಚರಣೆಮಾಡಿ ದೈಹಿಕ ಉಪವಾಸ ದೊಂದಿಗೆ ಉಪ=ಹತ್ತಿರ ಭಗವಂತನ ಹತ್ತಿರ ವಾಸ ..ಚಿಂತನೆಯಲ್ಲಿ ಉಪವಾಸ ಆಚರಣೆ ಮಾಡುವುದರಿಂದ ..ಸಕಲ ಪಾಪಗಳ ಸಂಹಾರವಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾದ್ಯ ...ಇದು ..ಮುಕುತಿಯೆಂಬ ಊಟದ ಮುಂಚಿನ 
 ಆಟದಲ್ಲಿನ  ವಿಶೇಷ ವಿಶ್ರಾಂತಿರೂಪದ ಆಟವೇ ಆಗಿದೆ ..
!!.
೫...ಸಿಕ್ಕಿದ ಸ್ಥಾನವು ದಕ್ಕದೆಂಬುದಕೆ..ಭಕ್ತ ^ಪ್ರಸನ್ನ^ನ್ನನು ತೋರಿದ ಕೊಕ್ಕಿನ.... ಸಿಕ್ಕಿದ ಸ್ಥಾನವು =ನಿಗದಿತ ಆಟದ ಅವಧಿಯಲ್ಲೇ ಆಡಬೇಕು....ಹಾಗೇ ಶತವರ್ಷದ ಅವಧಿಯಲ್ಲೇ ಭಗವಂತನ ಪ್ರಸನ್ನತೆಗೆಸಾಧನೆ ಎಂಬ ಆಟವಾಡಬೇಕು.ದಕ್ಕದೆಂಬುದಕೆ=ಇದೇ  ಅಟದ ಅವಧಿ  ಮತ್ತೆ ಸಿಗಲಾರದೂ....ಹಾಗೇ ಈ ಸಾಧನ ಶರೀರತಾನಲ್ಲಾ ತನ್ನದಲ್ಲಾ ಆಸೆ ತರವಲ್ಲಾ ಮುಂದೆ ಬಾಹೋದಲ್ಲಾ...ದಾಸನಾಗು ವಿಶೇಷನಾಗೂ...ಎಂಬ ದಾಸವಾಣಿಯಂತೆ 
ಭಕ್ತ=ಆಟಗಾರ ರಾದ ಭಕ್ತನು ..ಪ್ರಸನ್ನನು= ಅಟದ ಕ್ಯಾಪ್ಟನ್ ....ಸಾಧನಾ ತ್ರಿವಿಧ ಜೀವರ ಸರ್ವೋತ್ತಮನಾದ ಭಗವಂತ ತೋರಿಸಿದ  ಕೊಕ್ಕಿನ=ಮಾರ್ಗದ ಲ್ಲಿ ಸಾಧನಾ ಆಟವನ್ನು ಆಡಿ ಮುಕುತಿಯೆಂಬ  ಒಳ್ಳೆ ಊಟವನ್ನು ಮಾಡಬೇಕಾಗಿದೆ
.
ಅಮೂಲ್ಯವಾದ 
ಭರತ ಭೂಮಿಯಲ್ಲಿ ಅದೂ ಸಾಧನಾ ಕ್ಷೇತ್ರದಲ್ಲಿ ಮಾನುಷ ಜನ್ಮದಲ್ಲಿ ಬಂದ ಸುಜೀವಿಯೂ ದಾರಿತಪ್ಪಿ ನಡೆಯದೆ ..ಅತಿಂಥ ಲೌಕಿಕದ  ವಿಷಯ ಭೋಗಗಳೆಂಬ ಆಟೋಟಗಳಲ್ಲಿ ಮುಳುಗದೇ ...
*ಸಾಧನೆಯೆಂಬ ಆಟವನ್ನು ಈ ಮಾರ್ಗಗಳಿಂದ ಆಡಿ ಮುಕುತಿಯೆಂಬ  ಮೃಷ್ಟಾನ್ನದ ಊಟವನ್ನು ಮಾಡುವ ಅಮೋಘ ಸಂದೇಶವನ್ನು ಈ ಕೃತಿಯಲ್ಲಿ ಅಡಗಿಸಿಟ್ಟಿದ್ದಾರೆ..
ಪ್ರಸನ್ನತೆ ಎಂಬುದು ..ಮಾನವ ಸಾಮಾನ್ಯರಿಗೆ ಮನಶ್ಯಾಂತಿ ಉಂಟುಮಾಡುವ ..ಒಂದು ಅಪೂರ್ವ ಸಾಧನ! .ಇಂಥಹ ಪ್ರಸನ್ನತೆಯನ್ನು ನಾವು ಮಾನವರಲ್ಲಿ..ತಥಾ, ಕೃತಿ ಜಲದಲ್ಲಿ..ನೋಡಬಹುದು ..ಶ್ರೀವಾಲ್ಮೀಕಿ ಮಹರ್ಷಿಗಳು ಶ್ರೀ ಭಾರದ್ವಾಜರಿಗೆ ..ಹೇಳುವ ಮಾತಿನಲ್ಲಿ....
ರಮಣೀಯಂ ಪ್ರಸನ್ನಾಂಬು ಸನ್ಮನುಷ್ಯಮನೋಯಥಾ ....ಎಂಬ ಪದ ಪ್ರಯೋಗ ಮಾಡಿದಂತೆ..ಇಂದಿನ ದಿನದ ಕಥಾನಾಯಕರಾದ..ಪ್ರಕೃತ ನಮ್ಮ ವಾಯುದೇವರ ವಿಶೇಷ ಸನ್ನಿಧಾನ ಪಾತ್ರರಾದ.ಶ್ರೀಶ್ರೀ ವ್ಯಾಸರಾಜ ಗುರುಸಾರ್ವಭೌಮರ ದಿವ್ಯ ವಿದ್ಯಾಕರ್ನಾಟಕಾ ಧೀಶರಾದ ಸರ್ವದಾ ಅವಿಸ್ಮರಣೀಯರಾದ ಶ್ರೀ ಶ್ರೀ ವಿದ್ಯಾರತ್ನಾಕರ ತೀರ್ಥರ ಸುಪುತ್ರರಾದ ಶ್ರೀವಿದ್ಯಾಪ್ರಸನ್ನ ತೀರ್ಥರ ಈ ದಿವ್ಯ ಕೃತಿಗಳ ಲ್ಲಿ ಪ್ರಸನ್ನತೆ ಇರುವುದು ಏನಾಶ್ಚರ್ಯ!!!!!.
ಅವರ ಪ್ರತಿಯೊಂದು ದೇವರ ನಾಮಗಳಲ್ಲಿ ಭಗವಂತನ ಮಹಿಮೆ ಅಪಾರ ತತ್ವ ಗಾಂಭೀರ್ಯವನ್ನು ಹೊಂದಿದ್ದು ಭಕ್ತರ ಮನಸ್ಸಿಗೆ ಪ್ರಸನ್ನತೆಯನ್ನುಂಟುಮಾಡುವ ಸಾಮರ್ಥ್ಯವು ಆಕೃತಿಗಳಿಗೆಇರುವುದರಿಂದಲೇ ..ಅವುಗಳ ಅರ್ಥಾನುಸಂಧಾನ ಚಿಂತನಾದಿಗಳಿಂದ ..ಭಗವಂತನ ಪ್ರಸನ್ನತೆಯು ನಮಗೆಲ್ಲಾ ಉಂಟಾಗುವುದರಲ್ಲಿ ಸಂದೇಹವೇ ಇಲ್ಲಾ....ನಾವೆಲ್ಲರೂ ಧನ್ಯರು....ಎಂಬ ಯಥಾಮತಿ ಕೃತಿ ವಿಶ್ಲೆಷಣೆಯೊಂದಿಗೆ ..ಶ್ರೀಸುಗುಣವಿಠಲಾರ್ಪಣಮಸ್ತು
🙏🙏🙏🙏🙏🙏🙏🙏🙏
*******