ಮಂಗಳ ಮೂರುತಿ ಅದಿಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣು ಮಧುಸೂದನ ಪ
ನೇಮದಿಂದುದಿಸಿದೆ ವಾಮನ ತ್ರಿವಿಕ್ರಮ ಸಾಮಗಾಯನ ಪ್ರಿಯಾನಂದೋಬ್ರಹ್ಮ ದಾಮೋದರ ಸಂಕರುಷಣಾದೆ ಪುರುಷೋತ್ತಮ ವಾಸುದೇವ ನಮ್ಮ 1
ಸದ್ಗುಣ ಬೀರುವ ಹೃಷೀಕೇಶ ಶ್ರೀಧರ ಪೂರ್ಣ ಪ್ರದ್ಯುಮ್ನ ಅನಿರುದ್ಧಾನಂದ ಗುಣ ಅಚ್ಯುತ ಜನಾರ್ದನ ಸಿದ್ಧ ಸಿದ್ಧಕ ಪ್ರಿಯಾನಂದ ಘನ 2
ಅಧೋಕ್ಷಜ ನೃಸಿಂಹ ಉಪೇಂದ್ರ ಶ್ರೀಹರಿ ಕೃಷ್ಣ ಹೃದಯದಲಿ ಕೊಂಡಾಡುದನುದಿನ ಸದಾ ಪ್ರಸನ್ನ ಮಹಿಪತಿಗೀ ನಾಮ ಗುಣ ಸದೋದಿತಾದನು ಭಾನುಕೋಟಿಪೂರ್ಣ 3
***