Showing posts with label ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ venkatesha vittala satyadhyana teertha stutih. Show all posts
Showing posts with label ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ venkatesha vittala satyadhyana teertha stutih. Show all posts

Wednesday, 1 September 2021

ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ ankita venkatesha vittala satyadhyana teertha stutih

 by ತಂದೆ ವೆಂಕಟೇಶವಿಠಲ ದಾಸರು


ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ | ಪ |

ಹೀನೈಕ್ಯಕಾನನ ತನೂನಪಾತನಿಗೆ | ಅ.ಪ |


ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳ

ವ್ಯಾಸಸೂತ್ರಾದಿ ಪ್ರಸ್ಥಾನತ್ರಯದಲೀ

ದೇಶಿಕರ ವಿದ್ವದ್ಸಭಾಸಮ್ಮೇಳಾದೊಳನಿಲ

ಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದೊ | ೧ |


ಸತ್ಯಜ್ಞಾನಾರ್ಣವ ಮಹತ್ತರೋಡುವ ಭಕ್ತ

ಹೃತ್ತಮಾಂತಕ ಭಾನು ಪ್ರತ್ಯರ್ಥಿಹ

ಮಿಥ್ಯವಿದ್ರಾವಣ ವಿಚಾರಸಾರಾದ್ಯಮಿತ

ತತ್ತ್ವಪ್ರಮೇಯ ಸರ್ವತ್ರ ಮೆರೆಸಿದನೆಂದು | ೨ |


ಜ್ಞಾನಾಯು ಭಕ್ತಿ ವೈರಾಗ್ಯಾನುಕೂಲದಲಿ

ದಾನಾನುಕಂಪ ವಿದ್ವತ್ಪ್ರಭೆಯಲಿ

ಜಾನಕೀಪತಿವಿಠಲ ಕೃಷ್ಣ ವ್ಯಾಸಾರ್ಚನೆ ವ್-

ಚಾನದೊಳಗಭಿನವಾನಂದ ಮುನಿಯೆಂದು | ೩ |


ಈ ವಿಧ ಮಹಾ ಮಹಿಮರೀಭುವಿಲಿ ಜನಿಸುವುದೇ

ಪಾವಮಾನಿಗರ ಸದ್ಭಾಗ್ಯವೆನುತ |

ಭಾವದೊಳು ಇವರಂಘ್ರಿರೇಣಿನವರವನಾಗಿ

ಸೇವಿಸಲು ದುರ್ಮೋಹ ವ್ಯಾವರ್ತವೆಂದು | ೪ |

ಭೌಮವಾದ ವಸಂತ ಚೈತಾದಿ ಅಷ್ಟಮಿಯ

ಯಾಮ್ಯಯಾಮದೆ ಚಿತ್ರಭಾನುವಿನಲಿ

ಭೀಮತಥೀತೀರ ತಂದೆ ವೆಂಕಟೇಶವಿಠಲನ

ಧಾಮವೈದಿದ ಕರ್ಮದೇವರಿವರೆಂದು | ೫ |

***

         –