Showing posts with label ಬಲ್ಲವರಿಗರಿದಲ್ಲ ಪ್ರಮೇಯವಲ್ಲ pranesha vittala. Show all posts
Showing posts with label ಬಲ್ಲವರಿಗರಿದಲ್ಲ ಪ್ರಮೇಯವಲ್ಲ pranesha vittala. Show all posts

Thursday, 14 November 2019

ಬಲ್ಲವರಿಗರಿದಲ್ಲ ಪ್ರಮೇಯವಲ್ಲ ankita pranesha vittala

by nಪ್ರಾಣೇಶದಾಸರು
ಬಲ್ಲವರಿಗರಿದಲ್ಲ ಪ್ರಮೇಯವಲ್ಲಬೆಳ್ಳಿ-ಭಂಗಾರಲ್ಲ ಮೆಲುವದಲ್ಲ ಪ

ಕಣ್ಣೆವೆಯನಿಕ್ಕದು ಮತ್ಸ್ಯಾವತಾರನಲ್ಲ |ಘನ್ನ ಕಠಿಣವುಕೂರ್ಮರೂಪಿಯಲ್ಲ ||ಮಣ್ಣು ತಿಂಬುವದು ಇಟ್ಟಲ್ಲೆ ವರಹನೂ ಅಲ್ಲ |ಇನ್ನು ಬಾಯ್ದೆರೆದಿಹುದು ನರಸಿಂಹನಲ್ಲ 1

ಮದುವೆಯಾಗಿಲ್ಲವು ವಾಮನಾವತಾರಲ್ಲ |ವದಗಿ ಛೇದಿಸುವದು ಭಾರ್ಗವಲ್ಲ ||ಮುದದಿಂದ ಅನ್ನವುಣ್ಣದು ದಾಶರಥಿಯಲ್ಲ |ತುದಿ ಮೊದಲು ಕಪ್ಪು ಶ್ರೀ ಕೃಷ್ಣನಲ್ಲ 2

ಬತ್ತಲೆ ಇರುವದು ಬುದ್ಧಾವತಾರಲ್ಲ |ಕತ್ತರಿಸುವುದು ಬಿಡದೆ ಕಲ್ಕಿಯಲ್ಲ ||ಸತ್ಯಸಂಕಲ್ಪಶ್ರೀ ಪ್ರಾಣೇಶ ವಿಠಲನ |ಭೃತ್ಯರೇ ಬಲ್ಲರೀ ಗೋಪ್ಯ ಸೊಲ್ಲ 3
*******