Showing posts with label ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಸ್ಮರಿಸಿರಿ ankita raghavendra. Show all posts
Showing posts with label ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಸ್ಮರಿಸಿರಿ ankita raghavendra. Show all posts

Thursday, 5 August 2021

ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಸ್ಮರಿಸಿರಿ ankita raghavendra

 ..

kruti by radhabai

ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಪ


ಸ್ಮರಿಸಿರಿ ಸ್ಮರಿಸಿರಿ ಸರ್ವರ ರಕ್ಷಿಸುವ ಮುಖ್ಯ ಪ್ರಾಣನೆಂಬಾನೆಅ.ಪ


ವಾಯು ಸುಪುತ್ರ ನೆಂದೆನಿಸ್ಯಾನೇ ವಾರಿಧಿಯನ್ನೇದಾಟ್ಯಾನೇ

ಶಶಿಮುಖಿ ಸೀತೆಯ ಕಂಡಾನೇ ದಶಕಂಠನಗರ್ವ ಮುರಿದಾನೆ 1

ಪಂಚಪಾಂಡವರ ಮಧ್ಯಾನೆ ಪ್ರಚಂಡ ಪರಾಕ್ರಮಿ ಎನಿಸ್ಯಾನೇ

ವಂಚಿಸಿ ಕೀಚಕನ ಕೊಂದಾನೆ ಪಾಂಚಾಲಿಗೆ ಪ್ರಿಯನಾದನೆ 2

ಮಧ್ಯಗೇಹ ಭಟ್ಟರೊಳು ಜನಿಸ್ಯಾನೇ

ಮಧ್ವಮತವ ಉದ್ಧರಿಸ್ಯಾನೇ

ಮಧ್ವಮಾನಿ ಎಂದೆನಿಸ್ಯಾನೇ ಮುದ್ದು

ವೆಂಕಟ ವಿಠಲನೆಂಬಾನೆ 3

***