Showing posts with label ಮದುವೆಯ ಮಾಡಿಕೊಂಡ ಮುದದಿಂ ಮಾಧವ srinivasa kalyana ಶ್ರೀನಿವಾಸ ಕಲ್ಯಾಣ krishnavittala. Show all posts
Showing posts with label ಮದುವೆಯ ಮಾಡಿಕೊಂಡ ಮುದದಿಂ ಮಾಧವ srinivasa kalyana ಶ್ರೀನಿವಾಸ ಕಲ್ಯಾಣ krishnavittala. Show all posts

Monday 2 August 2021

ಮದುವೆಯ ಮಾಡಿಕೊಂಡ ಮುದದಿಂ ಮಾಧವ srinivasa kalyana ಶ್ರೀನಿವಾಸ ಕಲ್ಯಾಣ ankita krishnavittala

ಶ್ರೀ ಶ್ರೀನಿವಾಸ ಕಲ್ಯಾಣ

ಲಾವಣಿ

ಮದುವೆಯ ಮಾಡಿಕೊಂಡ ಮುದದಿಂ ಮಾಧವ ಪ


ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ.


ದೇವ ದೇವೇಶನು ಯಾರೆಂತೆಂದು

ಕೋವಿದ ಭೃಗುಮುನಿ ಹುಡುಕುತ ಬಂದು

ಪಾರ್ವತಿ ಪತಿಹರ ವಿಧಿಗಳ ಜರಿದು

ಧಾವಿಸಿ ಹರಿಯೆಡೆ ಬರ್ಪುದ ಕಂಡು

ಭಾವಜ ಪಿತರತಿ ಸೋಗನು ಹಾಕೆ

ದೇವನ ಮಾಯೆಯು ಮುಸುಕಲು ಮುನಿಗೆ

ಈ ವಿಧ ಸಲ್ಲದು ಹರಿಗೆಂತೆಂದು

ಪಾವನ ನೆದೆಯನು ವದ್ದನು ದುಡುಕಿ1

ಭರದಿಂ ಮಾಧವ ಚರಣವ ತೊಳೆದು

ಹರಿಸುತ ದುಗುಡವ ಭಕ್ತನಿಗಂದು

ಕರದಿಂ ದೊತ್ತುತ ಚರಣದ ಕಣ್ಣು

ತರಿಯಲು ಹೆಚ್ಚಿನ ಸಾಧನೆ ಮುನಿಗೆ

ಹರುಷದಿ ತೆರಳಿದ ಋಷಿವರ ತಾನು

ಅರಿಯುತ ಕಾಂತನ ಮನವಂ ಸಿರಿಯು

ಸರಸರ ಕೋಪವ ನಟಿಸುತ ತಾನು

ಬಿರುಸಿನ ನುಡಿಗಳ ಆಡಿದಳಂದು 2

ಏನಿದು ಮುನಿ ವಿಪರೀತವು ಥರವೆ

ನಾನಿಹ ಸ್ಥಳವನು ವದೆಯುವದೆಂದು

ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ

ನಾನಿಹೆ ಬರಿಸತಿ ಭಕ್ತರೆ ಹೆಚ್ಚು

ಕಾನನ ಸೇರುವೆ ನನಗೇಕೀ ಮನೆ

ಮಾನವು ಹೊಯಿತು ಯನ್ನಲು ಸತಿಯು

ಮೌನವ ಧರಿಸಲು ಗಂಡನು ನಗುತ

ದೀನರ ಪೊರೆಯಲು ಬಂದಳು ಭುವಿಗೆ 3

ಗಂಡನ ಬಿಡುವಳೆ ಲಕ್ಷ್ಮೀದೇವಿ

ಪುಂಡರ ಮಾತಿದು ನಂಬಿಲುಬೇಡಿ

ಗಂಡನ ಮನತೆರ ನಟಿಸಿದಳಷ್ಟೆ

ಗಂಡನು ಹಾಗೆಯೆ ತೊರೆಯುತ ಧಾಮ

ಕುಂಡಿಲಿ ಗಿಳಿಯುತ ಅಲೆಯುತ ಹೊರಟ

ಕಂಡಲ ಗಿರಿಯೆಡೆ ನಡೆತಾತಂದ

ಕಂಡನು ಹುತ್ತವ ಒಂದೆಡೆ ತಾನು

ಕುಂಡಲಿಗೊಡೆಯನು ನೆಲಸಿದನಲ್ಲಿ 4

ಪಾವನ ಗಿರಿಯದು ಕೇಳಿರಿ ಎಲ್ಲ

ದೇವನ ಖಗಮೃಗ ಬಳ್ಳಿಗಳಾಗಿ

ದೇವ ಸಮೂಹವು ಸೇವಿಪರಲ್ಲಿ

ಕೋವಿದ ಋಷಿಗಳು ಧ್ಯಾನಿಪರೈಯ

ಭಾವಸು ಭಕ್ತಿಲಿ ನೋಡಲು ಗಿರಿಯ

ಜೀವರ ಪಾಪಗಲೆಲ್ಲಾ ನಾಶ

ನೋವನು ಕಾಣರು ಹರಿಕೃಪೆ ಮುಂದೆ

ದೇವನು ಇರೆ ಇದೆ ಭೂವೈಕುಂಠ 5

ಕೃತಯುಗದಲ್ಲಿದು ವೃಷಭಾಚಲವು

ಗತಿಸಿದ ರಕ್ಕಸ ಹರಿಯಿಂತೆಂದು

ಸುತನಂ ಪಡೆಯಲು ಅಂಜಿಲಿದೇವಿ

ಅತಿ ತಪಗೈದಳು ತ್ರೇತೆಯಲೆಂದು

ಮತಿಯುತಳಾಕೆಯ ನಾಮವೆ ಆಯ್ತು

ಉತ್ತಮ ನೆಂಬುವ ಗರ್ವವ ನೀಗಿ

ಸ್ತುತಿಸಿದ ಶ್ವಾಸನ ಶೇಷನು ಎಂದು

ಇತ್ತರು ಮೂರಲಿ ಶೇಷನ ನಾಮ 6

ವೆಂಕಟ ಗಿರಿಯಿದು ಕಲಿಯುಗದಲ್ಲಿ

ಸಂಕಟ ನೀಗಿದ ಮಾಧವನಿಲ್ಲಿ

ಸಂಕಟ ನೀಡುವ ಪಾಪಗಳನ್ನು

ಶಂಕರ ಹರಿತಾ ಕಡಿಯುವನೆಂದು

ವೆಂಕಟ ನೆನಿಸುತ ಮೆರೆಯುವ ನಿಲ್ಲಿ

ಶಂಕೆಯ ಮಾಡದೆ ಶರಣೆಂದಲ್ಲಿ

ಪಂಕಜ ನೇತ್ರನು ಪೊರೆಯುವನಿಲ್ಲಿ

ಮಂಕುಗಳಾಗದೆ ಭಜಿಸಿರಿ ಬೇಗ 7

ಎದೆಂದಗಲದ ಇಂದಿರೆ ಕೆರಳೆ

ತಂದೆಯು ತೊರೆದನೆ ನಿಜ ವೈಕುಂಠ

ಪೊಂದಿಹ ಹುತ್ತವ ಏನಿದು ಛಂದ

ಕಂದನು ನಾನಿಹೆಎನ್ನುತ ಬೊಮ್ಮ

ತಂದೆಗೆ ಕ್ಷೀರವ ಕರೆಯಲುನಿತ್ಯ

ಛಂದದ ಗೋತನು ಧರಿಸುತ ಶಿವನ

ಕಂದನ ಗೈಯುತ ಮಾತೆಯ ಸಹಿತ

ಬಂದನು ಚೋಳನ ಅರಮನೆಯೆಡೆಗೆ 8

ಕೊಳ್ಳಲು ರಾಣಿಯು ಸೇರುತ ಗೋಷ್ಠಿ

ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ

ಇಲ್ಲವೆ ಆಗಲು ರಾಣಿಗೆ ಹಾಲು

ಗೊಲ್ಲನ ಶಿಕ್ಷಿಸಿ ಬೈಯಲು ಬಹಳ

ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ

ಕೊಲ್ಲಲು ಗೋವನು ಕೊಡಲಿಯನೆತ್ತೆ

ಬಲ್ಲಿದ ತಡೆಯಲು ಶಿರವನು ಒಡ್ಡೆ

ನಿಲ್ಲದೆ ಗಗನದಿ ಚಿಮ್ಮಿತು ರಕ್ತ 9

ನೋಡುತ ಮಡಿಯಲು ಗೊಲ್ಲನು ಅಲ್ಲೆ

ಓಡುತ ಗೋಗಣ ಹಟ್ಟಿಯ ಸೇರೆ

ಜಾಡನು ಪಿಡಿಯುತ ಚೋಳನು ಬರಲು

ಕೇಡಿಗ ನೃಪನೆ ಪಿಚಾಚಿಯು ಆಗೆನೆ

ಬಾಡಿದ ಮೋಗದಿಂ ರಾಜನು ನಮಿಸಿ

ಬೇಡಲು ಕ್ಷಮೆಯನು ಬಹುಪರಿಹರಿಯ

ನೀಡಿವಿಶಾಪವ ವೆಂಕಟ ಕರುಣಿ

ಆಡಲು ತೊಡಗಿದ ಈ ವಿಧ ಮುಂದೆ 10

ಆದುದು ಆಯಿತು ಚೋಳನೆ ಕೇಳು

ಸಾದರದಿಂದಲಿ ಭುಂಜಿಸು ಕರ್ಮ

ಪದ್ಮಾವತಿ ಯೆಂಬಾಕೆಯ ಮುಂದೆ

ಮೋದದಿ ಮುದುವೆಯ ನಾಗುವೆ ಆಗ

ಭೂಧವ ಮಾವನು ನೀಡುತ ಮಕುಟ

ನಾಧರಿಸುವೆನದ ಪ್ರತಿ ಕವಿ ವಾರ

ನಾಧರಿಸುವಾಗಿಲ್ಲದೆ ಬಾಧೆ

ಪೊಂದುವಿ ಕಲಿಕೊನೆ ಪೂರ್ವಾವಸ್ಥೆ 11

ಪೇಳತ ಲೀಪರಿ ಚೋಳಗೆ ದೇವ

ಲೀಲೆಯ ತೊರಲು ಘಾಯವ ಪಿಡಿದು

ಕೇಳಲು ಔಷಧ ಗುರುವನು ಸ್ಮರಿಸಿ

ಆಲಸ್ಯಗೈಯದೆ ಬಂದವ ನುಡಿಯೆ

ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ

ಶೈಲದ ಸ್ವಾಮಿ ವರಾಹನು ಸಿಗುತ

ಕೇಳಲು ವೆಂಕಟ ಕಥೆ ವಿಸ್ತಾರ

ಪೇಳಲು ತಬ್ಬಿದ ಕ್ರೋಡನ ಚತುರ 12

ಏನಿದು ಬಹು ವಿಪರೀತವು ಪೇಳಿ

ಶ್ರೀನಿಧಿ ಸತಿ ಬಿಟ್ಟಲೆಯುವುದೆಂತು

ಪೂರ್ಣಾನಂದಗೆ ಗೊಲ್ಲನ ಪೆಟ್ಟೆ

ಚಿನ್ಮಯ ನೆತ್ತರು ಚಿಮ್ಮುವದುಂಟೆ

ಅನ್ನವೆ ಕ್ಷುಧೆ ತೃಷೆ ದೂರಗೆ ಹಾಲು

ಅನ್ಯರು ವೈದ್ಯರೆ ಧನ್ವಂತ್ರೀಗೆ

ಕಾಣನೆ ಔಷಧಿ ಪೂರ್ಣಪ್ರಜ್ಞ

ತಾನಿರೆ ವೆಂಕಟ ತಿಳಿಯನೆ ಕ್ರೋಡ 13

ಲೀಲೆ ಇದೆಲ್ಲವು ಕೊಡುವದವಗೆ

ಬೀಳಿಸಿ ಮೋಹದಿ ಕುಜನರ ತರಿವ

ಪಾಲಿಪ ಸುಜನರ ಬೀರುತ e್ಞÁನ

ಲೀಲಾಮಯನವ ಸರಿಯೆಂತೆನ್ನಿ

ಕೇಳಲು ಕ್ರೋಡನ ವಾಸಿಸೆ ಜಾಗ

ಕೇಳುವರಾರೈ ನೀನಿರೆ ಯನ್ನ

ಬೀಳುವರೆಲ್ಲರು ನಿನ್ನಡಿಭರದಿ

ಧಾಳಿಯೆ ನನ್ನಯ ಪ್ರಭುತನವೆಂದ 14

ಮುಂದೆಯೆ ನೀನಿರು ನಾಹಿಂದಿರುವೆ

ಬಂದವರೆಲ್ಲರು ನಿನಗೊಂದಿಸುತ

ವಂದಿಸಲೆನ್ನದು ವಲಿಯುವೆನಾಗ

ಮುಂದಿಹ ನಿನಗೇ ಮೊದಲಲಿ ಪೂಜೆ

ಛಂದದಿ ಶಾಸನ ಹೀಗೇ ಬರದು

ಮಂದಿರ ಕೆಡೆ ಕೊಡು ಎನ್ನಲು ನಗುತ

ನಂದದಿ ನೀಡುತ ಹಾಗೆಯೆ ಎಲ್ಲ

ಕಂದನ ಸೇವಿಸೆ ಬಕುಳೆಯ ಕೊಟ್ಟ 15

ತಗ್ಗಿರೆ ಸಾಧನ ವೆಗ್ಗಳಗೈವ

ವೆಗ್ಗಳ ಸಾಧನೆ ತಗ್ಗಿಪ ದೈವ

ಹಗ್ಗವು ಸರಿಇವ ನಿಚ್ಚೆಯು ಕೇಳಿ

ಅಗ್ಗದ ಪ್ರಭುವರ ಇವತಾನಲ್ಲ

ತಗ್ಗಿಸಿ ವಿಷಯ ಬಗ್ಗಿಸಿ ಮನವನು

ಹಿಗ್ಗುತ ಭಜಿಸಲು ಚರಣ ಸರೋಜವ

ತಗ್ಗದ ಸೌಖ್ಯವ ನೀಡುತ ಕಾವ

ಮುಗ್ಗದೆ ಭವದಲಿ ಭಜಿಸಿರಿ ಬೇಗ 16

ಬಕುಳೆ ಯಶೋದೆಯು ಪೂರ್ವದಿ ಕೇಳಿ

ರುಕ್ಮಿಣಿ ಮುದುವೆಯ ನೋಡದಲಾಕೆ

ಉಕ್ಕಿದ ಮೋಹದಿ ಬಯಸಲು ನೋಡೆ

ಭಕ್ತಳ ಬಯಕೆಯ ಸಿದ್ಧಿಸೆ ದೇವ

ಬಕುಳೆಯ ಜನ್ಮದಿ ನಿಂದಿಹಳೆಂದು

ಅಕ್ಕರೆಯಿಂದಲಿ ತಾ ಕರತಂದು

ಚೊಕ್ಕಸುಕಂದನ ತೆರದಲಿ ನಿಂದ

ಭಕ್ತಿಲಿ ಸೇವೆಯ ಗೈದಳು ಬಕುಳೆ 17

ನಾರಾಯಣ ಪುರ ನಾಮದ ನಗರಕೆ

ದೊರೆಯೆನಿಸಿದ್ದನು ಆಕಾಶರಾಯ

ಕೊರಗುತ ಬಹುದಿನ ಸುತರಿಲ್ಲೆಂದು

ಧರಣಿಯ ಶೋಧಿಸೆ ಯಾಗಕ್ಕೆಂದು

ದೊರಕಲು ಕಮಲವು ದೊಡ್ಡದು ಒಂದು

ತೆರೆಯುತ ನೋಡಲು ಶಿಶು ತಾನೊಂದು

ಬೀರುತ ಕಾಂತಿಯ ಕಾಣಿಸಲಂದು

ದೊರಕಿತು ಕನ್ಯಾಮಣಿಯೆಂತೆಂದು 18

ಅರಮನೆ ಗಾ ಶಿಶು ಹರುಷದಿ ತಂದು

ಸರಸಿಜಮುಖಿ ಪದ್ಮಾವತಿಯೆಂದು

ಕರೆಯುತ ರಾಣಿಯು ಸಾಕುತ ಬಂದು

ವರುಷಗಳುರುಳಲು ಕಾಲದಿ ಕನ್ಯೆ

ಸಿರಿತೆರ ಲಕ್ಷಣ ಗಣದಿಂ ಬೆಳೆಯೆ

ವರಿಸಲು ಈಕೆಯ ನರರಿಂದಾಗದು

ಹರಿಯೇ ಸರಿವರವೆನ್ನುತ ಮನದಿ

ಅರಸುತ ವರನಂ ಬಳಲಿದ ಧೊರೆಯು 19

ವೇದವತೀ ಈಕೆಯು ತ್ರೇತೆಯಲೆನ್ನಿ

ಮಾಧವ ಮನತೆರ ತೆರಳುವ ಸೀತೆ

ಮೋದದಿ ಸೇರಲ್ ಗಿರಿ ಕೈಲಾಸ

ಖÉೀದಗಳುಣ್ಣುತ ಲಂಕೆಯಲಿದ್ದು

ಸಾಧಿಸಿ ಖಳರವಿನಾಶವನಲ್ಲಿ

ಮೇದಿನಿ ಸುತೆಯಳ ಸೇವಿಸಿ ಬಹಳ

ಶ್ರೀಧರನನ್ನೇ ವರಿಸಲು ಬಯಸೆ

ಮೋದದಲಾಗಲಿಯಂದಳು ಸೀತೆ 20

ಶಕ್ರನು ಶಿಖಿಸಹ ಇದ್ದಹಾಗೆ

ಲೋಕಕೆ ತೋರಲು ಸೀತೆಯ ರಾಮ

ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ

ತಕ್ಕಣ ಬಂದರು ಸೀತೆಯರಿಬ್ಬರು

ಅಕ್ಕರೆಯಿಂದಲಿ ನುಡಿಯುತ ಕಥೆಯು

ಸಕ್ಕದಿ ನಿಂತಿಹ ಈಕೆಯ ನೀನು

ಈಕ್ಷಿಸಿ ಪಿಡಿಕೈಯೆನ್ನಲು ಸೀತೆ

ರಕ್ಕಸ ವೈರಿಯು ಮಡದಿಗೆ ನುಡಿದ 21

ಒಂದೇ ಬಾಣವು ಒಂದೇ ವಚನವು

ಒಂದೇ ನಡತೆಯು ಒಬ್ಬಳುಮಡದಿ

ಇಂದೆನಗೆಂಬುದು ತಿಳಿಯದೆ ನಿನಗೆ

ಛಂದದಿ ಕಲಿಯಲಿ ನಡಿಸುವೆ ಬಯಕೆ

ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ

ಇಂದಿನ ಯುಗದಲಿಯನ್ನಲು ರಾಮ

ವಂದಿಸಿ ನಡೆದರು ಎಲ್ಲರು ಆಗ

ಹಿಂದಿನ ವರತೆರ ಬಂದಿಹಳೀಗ 22

ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ

ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ

ಭಾಷೆಯ ಪಡದಿರೆ ಸವತಿಯ ಪಟ್ಟಕೆ

ಘಾಸಿಯ ನೀಡುತ ರಾವಣ ಬಂದು

ಆಶಿಸಿ ಸಂಗವ ದುಡುಕುತ ನುಡಿಯೆ

ರೋಷದಿ ಶಾಪವ ನೀಡಿದಳೀಕೆ

ನಾಶಕೆ ಕಾರಣಳಾಗುವೆ ನಾನೆ

ಭ್ರಷ್ಟನೆಯೆನ್ನುತ ಶಿಖಿ ಸೇರಿದಳು 23

ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ

ಲಕ್ಷಣ ನಿಭಿಡಿತಳಾಗಿಹ ಕನ್ಯೆ

ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ

ಪಂಕಜ ನೇತ್ರೆಯು ಪಂಕಜವದನೆಯು

ಪಂಕಜ ಗಂಧಿ ಭುಜಂಗ ಸುವೇಣಿ

ಶಂಕರ ನಗೆನುಡಿ ಗುರುಲಾವಣ್ಯ

ಶಂಖ ಸುಪದ್ಮಾರೇಖೆಗಳಿಂದ

ಲಂಕೃತ ಅಂಗೈ ಪಾದಗಳ್ಹಾಗೆ 24

ಕಾಮನ ಬಿಲ್ಲನು ಹಳಿಯುವ ಹುಬ್ಬು

ಸೋಮನ ಮೀರಿಪ ಯುಗಯುಗ ಕಾಂತಿ

ಸಾಮಜಗಮನೆ ರಂಭೋರುಗಳು

ಕೋಮಲ ಚಂಪಕ ನಾಶಿಕ ತುಟಿಗಳು

ಕಾಮದ ಪೀವರ ಕುಚಯುಗಹಾಗೆ ಸು

ನೇಮದಿ ಬೆಳದಿಹ ಪಲ್ಗಳ ರಾಜಿ

ವಾಮನಿತಂಬಜಘನದ್ವಯವ

ಭಾಮೆ ಸಫಾಲದಿ ಮೆರೆದಳು ತಾನು 25

ಈಕೆಯು ಕಮಲೆಯ ತೆರೆದಿಂ ಬೆಳೆದು

ಸಾಕಲು ಕರೆದಳು ಕನಕಸುವೃಷ್ಟಿ

ಕಾಕನು ಕಾಣದೆ ರಾಜನು ಮೆರೆದ

ನಾಕವೆ ಎನಿಸಿತು ರಾಜನಮನೆಯು

ಜೋಕೆಯಲೊಂದಿನ ಸಖಿಯರ ಕೂಡಿ

ಈಕ್ಷಿಸೆ ಪುರವುದ್ಯಾನವ ಕುವರಿ

ಸೌಖ್ಯದಿ ತೆರಳುತೆಯಿರುತಿರುವಲ್ಲಿ

ನಾಕದ ನಾರದ ವದಗಿದನಲ್ಲಿ 26

ಹರಿಕಾರ್ಯಾಂಗನು ಬಂದನು ಎನ್ನುತ

ಗುರು ಸತ್ಕಾರಂಗಳಗೈದು-ಆ

ತುರ ತೋರಲು ತಿಳಿಯೆ ಭವಿಷ್ಯ

ಕರಗಳ ನೋಡುತ ತೂಗುತ ತಲೆಯು

ಸಿರಿತೆರ ಲಕ್ಷಣ ಕಾಣುವೆನಮ್ಮ

ಹರಿಯೇ ಸರಿ ವರಿಸಲ್ ನಿನ್ನ

ಅರಸುತ ಬರುವನು ತಾನೆ ನಿನ್ನ

ಬರಿ ಮಾತಲ್ಲವು ನೋಡೆಂತೆಂದ 27

ಪೇಳುತ ಲೀ ಪರಿ ಹೊರಡಲ್ ಮುನಿಯು

ಲಾಲಿಸಿ ª

****