ಉರಗಾದ್ರಿವಾಸ ವಿಠ್ಥಲರು...ದಿನಾಂಕ : 30.11.1964, ಅಂದರೆ....ಶ್ರೀ ಕ್ರೋಧಿ ನಾಮ ಸಂವತ್ಸರ ಕಾರ್ತೀಕ ಬಹುಳ ದ್ವಾದಶೀ ದಿನದಂದು ಅಪಾರ ಶಿಷ್ಯ ವರ್ಗವನ್ನು ತೊರೆದು ಹರಿಪಾದ ಸೇರಿದರು.
" ಶ್ರೀ ತಂದೆ ವೆಂಕಟೇಶ ವಿಠ್ಠಲರ ಮಾತಲ್ಲಿ... "
ಹರಿಯ ದರುಶನಕಾಗಿ
ತೆರಳಿ ಪೋದರು ನಮ್ಮ ।
ಉರಗಾದ್ರಿವಾಸನ ಪ್ರಿಯ
ದಾಸೋತ್ತಮರು ।। ಪಲ್ಲವಿ ।।
ಹರಿದಾಸ ಪೇಳಿಗೆಯೊಳು
ಪ್ರತಿಭಾನ್ವಿತ ।
ಸರಸ ಕಲಾಚಾರ್ಯ
ಯೋಗಿವರ್ಯ ।
ಧರೆಯೊಳು ತ್ರಿವನತಿ
ಪರಮಾಯುಶ್ಯಾವನೆಲ್ಲ ।
ಹರಿ ಸೇವೆಗೆಂದಿರಿಸಿ
ಛಾತ್ರರ ಕಣ್ದೆರಿಸಿ ।। ಚರಣ ।।
****