ರಾಗ ಕಾಂಭೋಜ ಝಂಪೆ ತಾಳ
ಎಂತು ನೋಡಿದರು ಚಿಂತೆ ,ಈ ಒಡಲು ನಿ-
ಶ್ಚಿಂತರಾಗಿಹ ಒಬ್ಬರನು ಕಾಣೆ ||
ಬ್ರಹ್ಮನಿಗೆ ಶಿರ ಹೋಗಿ ಬಾಡಿ ಬಳಲುವ ಚಿಂತೆ
ಮುನ್ನ ಮಾರುತಿಗೆ ಕಪಿಯಾದ ಚಿಂತೆ
ಮನ್ಮಥಗೆ ತನು ಸುಟ್ಟು ಬೂದಿಯಾಗಿಹ ಚಿಂತೆ
ಕಣ್ಣು ಮೂರುಳ್ಳವಗೆ ತಿರಿದುಂಬ ಚಿಂತೆ ||
ಕಾಮಧೇನುವಿಗೆ ಕರೆದೊಯ್ವರೆಂಬ ಚಿಂತೆ
ಕಾಮಿನಿಯರಿಗೆ ಒಡವೆ ವಸ್ತ್ರ ಚಿಂತೆ
ಸೀಮೆಯಾಳುವ ದೊರೆಗೆ ಪರದೊರೆಯ ಚಿಂತೆ
ಪಾಮರ ನರಗೆ ಬರೆಹ ಬಾರದಿರುವ ಚಿಂತೆ ||
ಧರ್ಮಾತ್ಮರೆಲ್ಲರಿಗೆ ದೀನಜನರಾಚಿಂತೆ
ಕರ್ಮಾತ್ಮರೆಲ್ಲರಿಗೆ ಕೆಡುವ ಚಿಂತೆ
ವರ್ಮ ಬೆಳೆಸುವರಿಗೆ ವೈರಿ ಕೊಲ್ಲುವ ಚಿಂತೆ
ಬರ್ಮಣಗೆ ಸತತ ಮೃಷ್ಟಾನ್ನ ಚಿಂತೆ ||
ಭಕ್ತರಿಗೆ ಗುರುವಿನೊಳು ಮುಕ್ತಿ ಬೇಡುವ ಚಿಂತೆ
ಮುಕ್ತರಿಗೆ ಪರಮಾತ್ಮ ದೊರೆವ ಚಿಂತೆ
ಯುಕ್ತಿ ಬಲ್ಲವಗೆ ವಿವೇಕವಾಡುವ ಚಿಂತೆ
ವಿರಕ್ತನಾದವಗೆ ಕಾಮ ಸುಡುವ ಚಿಂತೆ ||
ಕ್ಷುದ್ರ ರಕ್ಕಸರಿಗೆಲ್ಲರನು ತಿನ್ನುವ ಚಿಂತೆ
ನಿದ್ರೆ ಬಾರದವನಿಗೆ ರಾತ್ರಿ ಚಿಂತೆ
ಕದ್ದು ತರಲ್ಹೋದವಗೆ ಕೋಳಿ ಕೂಗುವ ಚಿಂತೆ
ಮುದ್ದು ಪುರಂದರವಿಠಲನೊಬ್ಬನಿಗೆ ನಿಶ್ಚಿಂತೆ ||
********
ಎಂತು ನೋಡಿದರು ಚಿಂತೆ ,ಈ ಒಡಲು ನಿ-
ಶ್ಚಿಂತರಾಗಿಹ ಒಬ್ಬರನು ಕಾಣೆ ||
ಬ್ರಹ್ಮನಿಗೆ ಶಿರ ಹೋಗಿ ಬಾಡಿ ಬಳಲುವ ಚಿಂತೆ
ಮುನ್ನ ಮಾರುತಿಗೆ ಕಪಿಯಾದ ಚಿಂತೆ
ಮನ್ಮಥಗೆ ತನು ಸುಟ್ಟು ಬೂದಿಯಾಗಿಹ ಚಿಂತೆ
ಕಣ್ಣು ಮೂರುಳ್ಳವಗೆ ತಿರಿದುಂಬ ಚಿಂತೆ ||
ಕಾಮಧೇನುವಿಗೆ ಕರೆದೊಯ್ವರೆಂಬ ಚಿಂತೆ
ಕಾಮಿನಿಯರಿಗೆ ಒಡವೆ ವಸ್ತ್ರ ಚಿಂತೆ
ಸೀಮೆಯಾಳುವ ದೊರೆಗೆ ಪರದೊರೆಯ ಚಿಂತೆ
ಪಾಮರ ನರಗೆ ಬರೆಹ ಬಾರದಿರುವ ಚಿಂತೆ ||
ಧರ್ಮಾತ್ಮರೆಲ್ಲರಿಗೆ ದೀನಜನರಾಚಿಂತೆ
ಕರ್ಮಾತ್ಮರೆಲ್ಲರಿಗೆ ಕೆಡುವ ಚಿಂತೆ
ವರ್ಮ ಬೆಳೆಸುವರಿಗೆ ವೈರಿ ಕೊಲ್ಲುವ ಚಿಂತೆ
ಬರ್ಮಣಗೆ ಸತತ ಮೃಷ್ಟಾನ್ನ ಚಿಂತೆ ||
ಭಕ್ತರಿಗೆ ಗುರುವಿನೊಳು ಮುಕ್ತಿ ಬೇಡುವ ಚಿಂತೆ
ಮುಕ್ತರಿಗೆ ಪರಮಾತ್ಮ ದೊರೆವ ಚಿಂತೆ
ಯುಕ್ತಿ ಬಲ್ಲವಗೆ ವಿವೇಕವಾಡುವ ಚಿಂತೆ
ವಿರಕ್ತನಾದವಗೆ ಕಾಮ ಸುಡುವ ಚಿಂತೆ ||
ಕ್ಷುದ್ರ ರಕ್ಕಸರಿಗೆಲ್ಲರನು ತಿನ್ನುವ ಚಿಂತೆ
ನಿದ್ರೆ ಬಾರದವನಿಗೆ ರಾತ್ರಿ ಚಿಂತೆ
ಕದ್ದು ತರಲ್ಹೋದವಗೆ ಕೋಳಿ ಕೂಗುವ ಚಿಂತೆ
ಮುದ್ದು ಪುರಂದರವಿಠಲನೊಬ್ಬನಿಗೆ ನಿಶ್ಚಿಂತೆ ||
********