Showing posts with label ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ sirigovinda vittala. Show all posts
Showing posts with label ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ sirigovinda vittala. Show all posts

Monday, 2 August 2021

ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ ankita sirigovinda vittala

ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ |

ಸುಂದರ ಕಾಯ ಆನಂದ ನಿಧಿಯ ಪ


ತಾಯಿಯಂದದಿ ನಮ್ಮ ಕಾಯುವ ಧಣಿಯಾ

ನ್ಯಾಯ ಸದ್ಗುಣ ಪೂರ್ಣ

ಮಾಯಿ ಜಗ ಹರಿಯಾ 1

ಮಾಯಾ ರಮಣನ ನಾಮ ಗಾಯನ ಪರನ

ದಾಯಾದಿ ಕುಲವೈರಿ ಶ್ರೇಯ ಬಲಯುತನಾ2

ನರರೂಪ ಧರಿಸಿ ವಾನರÀ ಭಕ್ತವರನಾ

ನರಶೌರಿ ಪ್ರೀಯ ದೀನರ ಕಾಯುತಿಹರಾ 3

ಜನರನ ಪೊರೆವನೆಂದೆನುತ ಭೂಮಿಯಲಿ

ಜನಿಸಿದ ತನ್ನವನ್ನ ವನುತಿ ಸಹಿತದಲಿ 4

ದುರಿತ ವರೆಕೆ ತಾಮುರುತನಾಗಿಪ್ಪ

ಗುರುವೆಂಬ ಸಿರಿಗೆ ಇವ ನಿರಂತರದಿ ಸುರಪಾ 5

ಭಕ್ತರ ಬಯಕೆ ಪೂರೈಪಾ ಸುರತರುವೇ

ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ 6

ಭುವನದಿಂ ದಾಟಿಸೆ ನೌಕವಾಗಿಹಿನಾ

ನವ ಭಕುತಿಯನೀವ ಕುವಿಕುಲ ವರನಾ 7

ದಿವಿಜೇಶನಂತೆ ಪೃಥ್ವಿಯೊಳು ಮೆರೆವಾ

ಇವನೇ ಗತಿಯೆನೆ e್ಞÁನ ತವಕದಿ ಕೊಡುವಾ 8

ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ

ವಂದಿಪ ಜನರಿಗೆ ಸತತ ಶ್ರೀ ರಾಮ 9

ಶ್ರೀನಿವಾಸ ಪುತ್ರ ಪರಮ ಪವಿತ್ರಾ

e್ಞÁನಿ ಜನರ ಮಿತ್ರ ವಿಹಿತ ಚರಿತ್ರಾ 10

ನಷ್ಟ ತುಷ್ಟಿಗೆ ಅಂಜಾ ದುಷ್ಟ ಶೇರಾ

ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ 11

ಪೊಳಲುರಿ ಸಖನಾ ಘನಪೊಳಿಯುವ ಪಾದಯುಗವಾ

ಘಳಿಗಿ ಬಿಡದಲೆ ನೋಡುತ ನಲಿಯುತಿರುವಾ 12

ಅರಿದು ಈತನೇಯನ್ನ ಗುರುವೆಂಬಗೆ ರುದ್ರಾ

ಧುರದೊಳು ಭೀಮ ಗುರುವಿಗತಾ ದಾರಿದ್ರ್ಯಾ 13

ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ

ಅನಘಾತ್ಮ ಹರಿಭಕ್ತ ಜನಕಾ ಭವ ತ್ರಾತಾ 14

ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ

ಸರ್ಪ ತಲ್ಪನ ಧ್ಯಾನದಿಪ್ಪ ನಿಪ್ಪ 15

ಅರುಣಾಭಿ ಚರಣ ತಲೆಬೆರಳು ಪಂಕ್ತಿಗಳಾ

ಸರಸಿಜ ಪೋಲ್ವ ಮೃದುತರ ಪಾದಯುಗಳಾ 16

ಇಳೆಯಾ ಸುರನತಿ ಪಾಪ ಕಳೆದ ಘನ

ವಲಿದ ಭಕ್ತರಿಗಿಷ್ಟ ಸಲಿಸುವ ಪಾದ17

ಸಕಲ ರೋಗವ ಕಳೆವ ಅಕಳಂಕ ಪಾದ

ನಿಖಿಲೈಶ್ವರ್ಯದ ಸುಖದಾಯಕ ಪಾದ 18

ಹರಿಯಂತೆ ಹರನೊಲ್ ಸಾಸಿರ ನಯನನಂತೆ

ಶಿರಿಯಂತೆ ತೋರ್ಪ ಭಾಸ್ಕರ ನರನಂತೆ 19

ಸುಳಿರೋಮಗಳುಳ್ಳ ಚಲುವ ಜಾನುಗಳಾ

ಎಳೆಬಾಳೆ ತೆರ ಊರು ಹೊಳೆವ ಸುಚೈಲ 20

ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ

ನಟ ಶೇವಸಿವಲಿ ತಾನು ಪುಟಿಯು ಉದರಾ 21

ಎದೆಯಲಿಪ್ಪುದÀು ನಮ್ಮ ಪರಮೇಶನ ಮನೆಯೊ

ವದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯೂ 22

ಹುತವಾಹನನಂತೆ ಭಾರತೀಕಾಂತನಂತೆ

ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ23

ಹಸುವಿನಂದದಲಿ ಪಾಗಸನೊಳಿಹನ

ವಸುಧಿಯೊಳಿಂತಿದೊಮ್ಮೆ ಪಸುಯನಿಸಿದನಾ 24

ಭೂಧರತನಂತೆ ವಸುಧರನಂತೆ

ಭೂಧರನಂತೆ ಸೋದರನಂತೆ 25

ಚಂದನ ಚರ್ಚಿತ ಸುಂದರ ರೂಪ

ದಿಂದೊಪ್ಪುವ ಕಂಬು ಲೋಕ ಕಂಧರಾಯುತನ 26

ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ

ವರ ರೇಖೆಯುತ ಶಿರಕರದಾ ವೈಭವನಾ 27

ಮಂಗಳದಾಯಕ ಅಂಗೈಯಿಯುಗಳಾ

ಭಂಗಾರ ದುಂಗಾರ ಇಟ್ಟಿಪ ಬೆರಳು 28

ಕೆಂದುಟಿ ಮೊದನಾಗಿ ಇಂದಿಪ್ಪ ವದನಾ

ಪೊಂದಿದ ದಂತಗಳಿಂದ ಸ್ವಾರಚನಾ29

ಹಸನಾದ ದೊಕರದಂತೆಸೆವ ಗಲ್ಲಗಳಾ

ಬಿಸಜದಂತೆ ರಾಜಿಸುವ ನೇತ್ರಗಳಾ 30

ನಾಸಿಕದಲಿಪ್ಪ ಮೀಸಿ ದ್ವಂದ್ವಗಳಾ

ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ 31

ಗಿಳಿಗೆ ವಾಚ್ಯಾಪದೊಳ ಹೊಳೆವಾ ಪುಚ್ಛಗಳಾ

ತಿಲಕಾ ಮುದ್ರೆ ಪುಂಡ್ರಗಳುವುಳ್ಳ ಫಾಲಾ 32

ಹರಿಪಾದ ಜಲವನ್ನು ಧರಿಸಿದ ಶಿರವಾ

ಶಿರಿಗೋವಿಂದ ವಿಠಲನ್ನಡಿಗೆಯರಗುವಾ ಶಿರವಾ33

****