..
kruti by ವೀರನಾರಾಯಣ Veeranarayana
ಹನುಮ-ಭೀಮ-ಮಧ್ವ
ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ
ಮೂರು ಯುಗಗಳಲಿ ಮೂರವತಾರದಿಮೂರು ನಾಮಗಳಲಿ ಮೂರು ವೇಷದಲಿಮೂರು ಕ್ರಮಗಳ ಮೂರು ಧರ್ಮಗಳಮೂರು ಲೋಕಕೆ ತಿಳಿಸಿದ ಮೂರುತಿಯೆ ಅ.ಪ.
ಹನುಮನೆನಿಸಿ ಕೌಪೀನದಿ ತನುವಾಚ್ಛಾದಿಸಿಜನರೊಳು ತನುಮನ ಬ್ರಹ್ಮಚರ್ಯ ಬೋಧಿಸಿವನದೊಳು ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1
ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2
ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3
ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4
ಭೂಸುರ ಮಧ್ವರ ಹೆಸರಿಲಿ ಶಾಟಿಲಿ ರಾಜಿಸಿವ್ಯಾಸರ ಶಾಸನ ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
***