ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ | ಬಾರೋ ಮಹಾ ಪ್ರಭುವೆ | ಪ |
ಚಾರುಚರಣ ಯುಗ ಸಾರಿ ನಮಿಪೆ ಬೇಗ |
ಬಾರೋ ಹೃದಯ ಸುಜಸಾರ ರೂಪವ ತೋರೋ | ಅ ಪ |
ಎಲ್ಲಿ ನೋಡಲು ಹರಿ ಅಲ್ಲಿ ಕಾಣುವನೆ೦ದು |
ಕ್ಷುಲ್ಲ ಕಂಭವನೊಡೆದ |
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ |
ಫುಲ್ಲಲೋಚನ ಶಿಶು ಪ್ರಲ್ಹಾದನಾಗಿ ಬಾರೋ | ೧ |
ದೋಷ ಕಳೆದು ಸಿಂಹಾಸನವೇರಿದ |
ದಾಸ ಕುಲವ ಪೊರೆದ |
ಶ್ರೀಶನರ್ಚಕನಾಗಿ ಪೋಷಿಸಿ ಹರಿಮತ |
ವ್ಯಾಸ ತ್ರಯವಗೈದ ವೇಷ ಕಳೆದು ಬಾರೋ | ೨ |
ಮೂಜಗ ಮಾನಿತ ತೇಜೋವಿರಾಜಿತ |
ಮಾಜದ ಮಹಾಮಹಿಮ |
ಓಜಗೊಳಿಸಿ ಮತಿ ರಾಜೀವ ಬೋಧದಿ |
ಪೂಜೆಗೊಂಬುವ ಗುರುರಾಜ ರೂಪದಿ ಬಾರೋ | ೩ |
ಮಂತ್ರ ಸದನದೊಳು ಸಂತಸುಜನರಿಗೆ |
ಸಂತೋಷಸಿರಿಗರೆವಾ |
ಕಂತುಪಿತನ ಪದ ಸಂತತ ಸೇವಿಪ |
ಶಾಂತ ಮೂರುತಿ ಎನ್ನಂತರಂಗದಿ ಬಾರೋ | ೪ |
ಈ ಸಮಯದಿ ಎನ್ನಾಶೆ ನಿನ್ನೊಳು ಬಲು |
ಸೂಸಿ ಹರಿಯುತಿಹುದು |
ಕೂಸಿಗೆ ಜನನಿ ನಿರಾಶೆಗೊಳಿಸುವಳೆ |
ದೋಷ ಕಳೆದು ವಿಟ್ಠಲೇಶ ಹೃದಯ ಬಾರೋ | ೫ |
***
ರಾ ಗ - ಮಧ್ಯಮಾವ ತಿ: ತಾಳ - ಆದಿತಾಳ (raga, taala may differ in audio)
ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ಬಾರೊ ಮಹ ಪ್ರಭುವೆ
ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ
ಹೃದಯ ಸುಜ ಸಾರ ರೂಪವ ತೋರಿ
ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು
ಕ್ಷುಲ್ಲ ಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ
ಶಿಶು ಪ್ರಹಲ್ಲಾದನಾಗಿ ಬಾರೊ||1||
ದೋಶ ಕಳೆದು ಸಿಂಹಾಸನ ಏರಿದ
ದಾಸಕುಲವ ಪೊರೆದ
ಶ್ರೀಶ ನರ್ಚಕನಾಗಿ ಪೊಶಿಸಿ ಹರಿ ಮತ
ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ||2||
ಮೂರ್ಜಗ ಮಾನಿತ ತೇಜೊ ವಿರಾಜಿತ
ಮಾಜದ ಮಹ ಮಹಿಮ
ಓಜಿಗೊಳಿಸಿ ಮತಿ ರಾಜಿವ ಬೊದದಿ
ಪೂಜೆಗೆಂದು ಗುರು ರಾಜಾ ರೂಪದಿ ಬಾರೊ||3||
ಮಂತ್ರ ಸದನದೊಲು ಸಂತ ಸುಜನರಿಗೆ
ಸಒತೊಷ ಸಿರಿ ಗರೆದು
ಕಂತು ಪಿತನ ಪಾದ ಸಂತತ ಸೇವಿಪ ಶಾಂತ
ಮೂರುತಿ ಎನ್ನಂತ ರಂಗದಿ ಬಾರೊ||4||
ಈ ಸಮಯದಿ ಎನ್ನಾಸೆ ನಿನ್ನೊಳು ಬಲು
ಸೂಸಿ ಹರಿಯುತಿಹುದೋ
ಕೂಸಿಗೆ ಜನನಿ ನಿರಸೆ ಗೊಳಿಸುವಳೆ ದೊಶ
ಕಳೆದು ವಿಠಲೇಶ ಹೄದಯ ಬಾರೊ||5||
***
ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ
ಹೃದಯ ಸುಜ ಸಾರ ರೂಪವ ತೋರಿ
ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು
ಕ್ಷುಲ್ಲ ಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ
ಶಿಶು ಪ್ರಹಲ್ಲಾದನಾಗಿ ಬಾರೊ||1||
ದೋಶ ಕಳೆದು ಸಿಂಹಾಸನ ಏರಿದ
ದಾಸಕುಲವ ಪೊರೆದ
ಶ್ರೀಶ ನರ್ಚಕನಾಗಿ ಪೊಶಿಸಿ ಹರಿ ಮತ
ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ||2||
ಮೂರ್ಜಗ ಮಾನಿತ ತೇಜೊ ವಿರಾಜಿತ
ಮಾಜದ ಮಹ ಮಹಿಮ
ಓಜಿಗೊಳಿಸಿ ಮತಿ ರಾಜಿವ ಬೊದದಿ
ಪೂಜೆಗೆಂದು ಗುರು ರಾಜಾ ರೂಪದಿ ಬಾರೊ||3||
ಮಂತ್ರ ಸದನದೊಲು ಸಂತ ಸುಜನರಿಗೆ
ಸಒತೊಷ ಸಿರಿ ಗರೆದು
ಕಂತು ಪಿತನ ಪಾದ ಸಂತತ ಸೇವಿಪ ಶಾಂತ
ಮೂರುತಿ ಎನ್ನಂತ ರಂಗದಿ ಬಾರೊ||4||
ಈ ಸಮಯದಿ ಎನ್ನಾಸೆ ನಿನ್ನೊಳು ಬಲು
ಸೂಸಿ ಹರಿಯುತಿಹುದೋ
ಕೂಸಿಗೆ ಜನನಿ ನಿರಸೆ ಗೊಳಿಸುವಳೆ ದೊಶ
ಕಳೆದು ವಿಠಲೇಶ ಹೄದಯ ಬಾರೊ||5||
***
ಕೋರಿ ಕರೆವೆ ಗುರು ಶ್ರೀ ರಾಘವೇಂದ್ರನೆ ಬಾರೊ ಮಹ ಪ್ರಭುವೆ || pa ||
ಚಾರು ಚರಣ ಯುಗ ಸಾರಿ ನಮಿಪೆ ಬೇಗ ಬಾರೊ ಹೃದಯ ಸುಜ ಸಾರ ರೂಪವ ತೋರೋ || a pa ||
ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದು ಕ್ಷುಲ್ಲ ಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ಪುಲ್ಲ ಲೋಚನ ಶಿಶು ಪ್ರಹಲ್ಲಾದನಾಗಿ ಬಾರೊ || 1 ||
ದೋಶ ಕಳೆದು ಸಿಂಹಾಸನ ಏರಿದ ದಾಸಕುಲವ ಪೊರೆದ
ಶ್ರೀಶನರ್ಚಕನಾಗಿ ಪೊಶಿಸಿ ಹರಿಮತ ವ್ಯಾಸತ್ರಯವ ಗೈದು ವೇಶ ಕಳೆದು ಬಾರೊ || 2 ||
ಮೂರ್ಜಗ ಮಾನಿತ ತೇಜೊ ವಿರಾಜಿತ ಮಾಜದ ಮಹ ಮಹಿಮ
ಓಜಿಗೊಳಿಸಿ ಮತಿ ರಾಜಿವ ಬೊದದಿ ಪೂಜೆಗೆಂದು ಗುರು ರಾಜಾ ರೂಪದಿ ಬಾರೊ || 3 ||
ಮಂತ್ರ ಸದನದೊಳು ಸಂತ ಸುಜನರಿಗೆ ಸಂತೋಷ ಸಿರಿ ಗರೆದು
ಕಂತು ಪಿತನ ಪಾದ ಸಂತತ ಸೇವಿಪ ಶಾಂತ ಮೂರುತಿ ಎನ್ನಂತ ರಂಗದಿ ಬಾರೊ || 4 ||
ಈ ಸಮಯದಿ ಎನ್ನಾಸೆ ನಿನ್ನೊಳು ಬಲು ಸೂಸಿ ಹರಿಯುತಿಹುದು
ಕೂಸಿಗೆ ಜನನಿ ನಿರಾಸೆ ಗೊಳಿಸುವಳೆ ದೋಷ ಕಳೆದು ವಿಠಲೇಶ ಹೃದಯ ಬಾರೊ||5||
***
Kori kareve guru sri raghavendrane baro maha prabhuve || pa ||
caru carana yuga sari namipe bega baro hrdaya suja sara rupava toro || a pa ||
elli nodalu hari alle kanuvanendu ksulla kambavanodedu nillade narahari celvike torida pulla locana sisu prahalladanagi baro || 1 ||
dosa kaledu sinhasana erida dasakulava poreda srisanarcakanagi posisi harimata vyasatrayava gaidu vesa kaledu baro || 2 ||
murjaga manita tejo virajita majada maha mahima ojigolisi mati rajiva bodadi pujegendu guru raja rupadi baro || 3 ||
mantra sadanadolu santa sujanarige santosa siri garedu kantu pitana pada santata sevipa santa muruti ennanta rangadi baro || 4 ||
i samayadi ennase ninnolu balu susi hariyutihudu kusige janani nirase golisuvale dosa kaledu vithalesa hrdaya baro||5||
***
ankita ವಿಠಲೇಶ
ರಾಗ: ಮಧ್ಯಮಾವತಿ ತಾಳ: ಆದಿ
ಕೋರಿಕರೆವೆ ಗುರು ಶ್ರೀ ರಾಘವೇಂದ್ರನೆ
ಬಾರೋ ಮಹಾಪ್ರಭುವೇ ಪ
ಚಾರುಚರಣಯುಗ ಸಾರಿ ನಮಿಪೆ ಬೇಗ
ಬಾರೊ ಹೃದಯಸುಜಸಾರ(?)ರೂಪವ ತೋರೊ ಅ.ಪ
ಎಲ್ಲಿ ನೋಡಲು ಹರಿ ಅಲ್ಲಿ ಕಾಣುವನೆಂದು
ಕ್ಷುಲ್ಲ ಕಂಭವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆತೋರಿದ
ಫುಲ್ಲಲೋಚನ ಶಿಶು ಪ್ರಹ್ಲಾದನಾಗಿ ಬಾರೋ 1
ದೋಷಕಳೆದು ಸಿಂಹಾಸನವೇರಿದ
ದಾಸಕುಲವ ಪೊರೆದ
ಶ್ರೀಶನರ್ಚಕನಾಗಿ ಪೋಷಿಸಿ ಹರಿಮತ
ವ್ಯಾಸತ್ರಯವಗೈದ ವೇಶತಳೆದು ಬಾರೋ 2
ಮೂಜಗಮಾನಿತ ತೇಜೋವಿರಾಜಿತ
ಮಾಜದ ಮಹಮಹಿಮ
ಓಜಗೊಳಿಸಿ ಮತಿ ರಾಜೀವ ಬೋಧದಿ
ಪೂಜೆಗೊಂಬುವ ಗುರುರಾಜರೂಪದಿ ಬಾರೋ 3
ಮಂತ್ರಸದನದೊಳು ಸಂತಸುಜನರಿಗೆ
ಸಂತೋಷ ಸಿರಿಗರೆದು
ಕಂತುಪಿತನಪದ ಸಂತತಸೇವಿಪ
ಶಾಂತಮೂರುತಿ ಎನ್ನಂತರಂಗದಿ ಬಾರೋ 4
ಈಸಮಯದಿ ಎನ್ನಾಶೆ ನಿನ್ನೊಳು ಬಲು
ಸೂಸಿ ಹರಿಯುತಿಹುದು
ಕೂಸಿಗೆ ಜನನಿ ನಿರಾಶೆಗೊಳಿಸುವಳೆ
ದೋಷಕಳೆದು ವಿಠಲೇಶಹೃದಯ ಬಾರೋ 5
***