Showing posts with label ಸತ್ಯದಾ ನುಡಿ ಹಿಡಿರೋ ಮನುಜರು mahipati. Show all posts
Showing posts with label ಸತ್ಯದಾ ನುಡಿ ಹಿಡಿರೋ ಮನುಜರು mahipati. Show all posts

Thursday, 12 December 2019

ಸತ್ಯದಾ ನುಡಿ ಹಿಡಿರೋ ಮನುಜರು ankita mahipati

kaapi ರಾಗ ತೀನ್ ತಾಳ

ಸತ್ಯದಾ ನುಡಿ ಹಿಡಿರೋ ಮನುಜರು
ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ||ಪ||

ಸತ್ಯದಾ ನಡಿಗಿನ್ನು ಸತ್ಯ ನುಡಿಯಲುಬೇಕು
ಸತ್ಯಂ ಸತ್ಯ ಶರಣರೆಲ್ಲಾ ಎತ್ತಾಡಿಸುವಂತೆ ||ಅ.ಪ||

ಕೈಯಾರ ಕೊಂಡಿನ್ನು ಬಾಯಾರಬ್ಯಾಡಿರೊ
ಮೈಯೊಳಗಿಹ ಕಾವನಯ್ಯನ ಮರಿಯಬ್ಯಾಡಿ ||೧||

ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿಬ್ಯಾಡಿ
ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ ||೨||

ಆಶೆಯ ಕೊಟ್ಟು ನಿರಾಶೆಯ ಮಾಡಲಿಬ್ಯಾಡಿ
ಮೋಸ ಮುರುಕದಿಂದ ಘಾಸಿ ಮಾಡಲುಬ್ಯಾಡಿ ||೩||

ಘಟ್ಟಿಸಿ ಒಬ್ಬರ ಹೊಟ್ಟೆ ಹೊರಿಯಬ್ಯಾಡಿ
ಸಿಟ್ಟಿಲಿ ನೆಂಟರ ತುಟ್ಟಿಸಿ ಬಿಡಬ್ಯಾಡಿ ||೪||

ಗುಟ್ಟುನೊಳಿಹ ಮಾತು ತುಟ್ಟಿಗಿ ತರಬ್ಯಾಡಿ
ಹೊಟ್ಟಿಲೆ ಹಡೆದವರ ಕಟ್ಟಿಗೆ ತರಬ್ಯಾಡಿ ||೫||

ಲೆತ್ತಪಗಡಿ ಆಡಿ ಹೊತ್ತುಗಳೆಯಲಿಬ್ಯಾಡಿ
ತುತ್ತಕುಡಿಯೊಳಿದ್ದಾಪತ್ತಬಡಲಿಬ್ಯಾಡಿ ||೬||

ಹರಿಹರಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ
ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೊ ||೭||

ಅನ್ನ ಬೇಡಿದವಗಿಲ್ಲೆನ್ನಬ್ಯಾಡಿ
ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ ||೮||

ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ
ಸ್ವಾತ್ಮಸುಖದ ಸವಿ ಸೂರ್ಯಾಡಿಕೊಳಲಿಕ್ಕೆ ||೯||

ಸ್ವಹಿತ ಸುಖದ ಮಾತು ಸಾಧಿಸಿಕೊಳ್ಳಲಿಕ್ಕೆ
ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಕೊಳ್ಳಿ ||೧೦||
****

ಸತ್ಯಾದ ನಡಿ ಹಿಡಿರೋ ಮನಜರು ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಪ  


ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ 1 

ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ 2 

ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ ಘಾಸಿ ಮಾಡಲಬ್ಯಾಡಿ 3 

ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ4 

ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ 5 

ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ 6 

ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ 7 

ಅನ್ನಬೇಡಿದವ ಗಿಲ್ಲೆನ ಬ್ಯಾಡಿ ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ 8 

ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ 9 

ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ 10

****