Showing posts with label ಮುನಿಯ ನೋಡಿರೊ ವಂದನಿಯ ಮಾಡಿರೊ vijaya vittala. Show all posts
Showing posts with label ಮುನಿಯ ನೋಡಿರೊ ವಂದನಿಯ ಮಾಡಿರೊ vijaya vittala. Show all posts

Wednesday, 16 October 2019

ಮುನಿಯ ನೋಡಿರೊ ವಂದನಿಯ ಮಾಡಿರೊ ankita vijaya vittala

ವಿಜಯದಾಸ
ಮುನಿಯ ನೋಡಿರೊ ವಂದನಿಯ ಮಾಡಿರೊ
ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ

ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ
ತೊಳೆದ ಜಲವು ಬೀಳಲಾಕ್ಷಣ
ಹಲುಬಿಕೊಳುತಲಳಿದು ಪೋಗೋವು 1

ಹಿಂದೆ ವ್ಯಾಸ ಮುನಿಗಳಿಂದ
ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ
ವಿಂದ ಒಡೆಯನೀತ 2

ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ
ಮುದದಿ ತಿಳಿದು ಮಾಯಿ ಶಾಸ್ತ್ರ
ವೊದೆದು ಕಳೆದ ನಿಜ ಸದಮಲ ಸಮರ್ಥ 3

ಮಧ್ವಮತಾಂಬುಧಿಯೊಳು ಪುಟ್ಟಿ
ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ
ಊಧ್ರ್ವ ಲೋಕದಲ್ಲಿ ಮೆರೆದ4

ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ
ವೇಲೂರ ಪುರಪಯೋನಿಧಿವಾಸ ಜಗದ
ದೊರೆ ವಿಜಯವಿಠ್ಠಲನ್ನದಾಸ5
********