Showing posts with label ದ್ವಾರಾವತಿಯಲಿ ದನುಜದಲ್ಲಣ helavana katte. Show all posts
Showing posts with label ದ್ವಾರಾವತಿಯಲಿ ದನುಜದಲ್ಲಣ helavana katte. Show all posts

Friday, 27 December 2019

ದ್ವಾರಾವತಿಯಲಿ ದನುಜದಲ್ಲಣ ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ankita helavana katte

krishna parijata.
ಶ್ಲೋಕ : ದ್ವಾರಾವತಿಯಲಿ ದÀನುಜದಲ್ಲಣ ಮುಕುಂದ
ಸಾರೆ ರುಕ್ಮಿಣಿಸಹಿತ ಆನಂದದಿಂದ
ವಾರಿಜಾಂಬಕ ವಾಲಗದೊಳು ಚಂದ
ನಾರಂದಮುನಿ ತಾ ಪಾರಿಜಾತವ ತಂದ 1

ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ಪುಷ್ಪಯಾರಿಗೆ ಎಂದ
ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು ಬಲ್ಲದೆ ಇಂತೆಂದ
ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು ಕೇಳಿದಳಾಕೆ ನಿಂದು
ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು
ಮನದಲ್ಲಿ ಅತಿನೊಂದು 1

ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು
ಮಂದಗಮನೆಯ ಮುಡಿಗೆ ತಾ ಮುಡಿಸಿದನು
ಎಂದು ಎನ್ನೊಳು ಎರವು ಇಲ್ಲವು ಕಾಣಿ
ಇಂದು ಮಾಡಿದ ಕುಹಕವ ಕೃಷ್ಣ ತಾನು 2


ಪದ : ಹರಿಯು ಮಾಡಿದ ಮಾಟವನು ಕಂಡೆನು ನಾನು
ಇನ್ನಾರಿಗೆ ಪೇಳುವೆನು
ಪರಿಮಳದ ಪಾರಿಜಾತದ ಹೂವ ತಂದನು ಭಾಮೆ
ರುಕ್ಮಿಣಿ ತನ್ನ ಜೀವ
ಸರಿ ಬಂದ ಮಡದಿಗೆ ಮುಡಿಸಿದ ಶೃಂಗರಿಸಿದ
ಬಹುಪ್ರೀತಿ ಬಡಿಸಿದ
ಬರಿಯ ಮಾತಿನ ಬನ್ನಣೆಯಿಲ್ಲ ಸ್ನೇಹ ತನಗಲ್ಲಿ
ಠಕ್ಕುಠವಳಿಗಳಿಲ್ಲಿ 2

ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ
ಹಚ್ಚಿರೆ ಮಾತ ಹರಿಯು ತಾ ಕೇಳಿದನೆ
ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ
ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ 3

ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ
ತೋರಿಸೆ ಕೃಷ್ಣನ್ನ ಅಮ್ಮಯ್ಯ ಕೇಳು ದಮ್ಮಯ್ಯ
ಕಂತು ಕಮಲಜನಯ್ಯ
ಬಾರದಿದ್ದರೆ ಪ್ರಾಣ ಉಳಿಯದು ಮತ್ತೆ ಅಳಿವುದು
ಏನೆಂದು ತಿಳಿಯದು
ಸಾರಿದ ಸರಿಬಂದ ಸತಿಯ [ಳ] ಬಹುರತಿಯ[ಳ]
ಬಹು ಪ್ರೀತಿ ಇದ್ದವ[ಳ] 3

ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ
ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ
ಗಿಳಿಇಲ್ಲದ ಗೂಡು ತಾನ್ಯಾತಕಮ್ಮ
ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ 4

ಪದ :ಯಾಕೆನ್ನ ಬ್ರಹ್ಮ ಪುಟ್ಟಿಸಿದನೊ ಸೃಷ್ಟಿಸಿದನೊ
ಮಾತೆನ್ನ್ಯಾಕ ಪಡೆದಳೊ
ಸಾಕಿನ್ನು ಹೆಣ್ಣು ಜನ್ಮದ ಬಾಳು ಯಾತಕೆ ಹೇಳು
ತಾಕಲೆನ್ನಯ ಗೋಳು
ಕುಹಕ ಪೇಳ್ದು ನಾರದ ಸಿದ್ಧ ಎಂಬುದು ಬದ್ಧ
ಮೂರುಲೋಕ ಪ್ರಸಿದ್ಧ
ಶ್ರೀಕೃಷ್ಣಂಗೆ ಎನಗೆ ಭೇದವ ಮಾಡಿ ಹೋದನು
ಓಡಿ ತನಗ್ಯಾಕಿದು ಬ್ಯಾಡಿ 4

ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು
ವಶವಾದನೆ ಒಲಿದು ರುಕ್ಮಿಣಿಗೆ ತಾನು
ಶಶಿಮುಖಿಯಳೆ ಸವತಿ ಅಟ್ಟುಳಿ ಇದೇನು
ಆಸೆಬಟ್ಟೆನೆ ಬಹಳ ವಸುದೇವ ಸುತಗೆ 5

ಪದ : ಸಿಟ್ಟಿನಿಂದತಿ ಘುಡಘುಡಿಸುತ ಆರ್ಭಟಿಸುತ
ಎಲ್ಲರೊಡನೆ ಕೋಪಿಸುತ
ತೊಟ್ಟತೊಡಿಗೆ ಈಡಾಡುತ ಬಿಸಾಡುವ
ನನಗ್ಯಾಕಿದು ಎಂದು
ಪಟ್ಟೆ ಮಂಚದ ಮೇಲೆ ಒರುಗುತ ತಾ ಎರಗುತ
ಮನದೊಳು ಮರುಗುತ
ಇಷ್ಟು ಮಾಡುವುದಿದು ನೀತವೆ ಪ್ರಖ್ಯಾತವೆ
ಸುರಪಾರಿಜಾತವೆ 5

ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ
ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ
ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ
ಜೀವದೊಲ್ಲಭೆಯೊಡನೆ ಪಂಥವು ಸಲ್ಲ 6
ಪದ : ಮಂದಗಮನೆ ಮುನಿದಿಹಳೊ ಎನ್ನ ಪ್ರಿಯೆಳೊ
ಎನ್ನೊಡನೆ ನುಡಿಯಳೊ
ಇಂದು ಅಲ್ಲಿಗೆ ಹೋಗದಿದ್ದರೆ ಇಲ್ಲಿದ್ದರೆ
ಅಪ್ರಬುದ್ಧನಾದರೆ
ಕುಂದು ಎನ್ನ ಮ್ಯಾಲಿಡುವಳೋ ಸ್ನೇಹ ಬಿಡುವಳೊ
ಕೋಪವನು ತಾಳುವಳೊ ಇಂ
ತೆಂದು ನುಡಿದ ಮುಕುಂದ ನಿತ್ಯಾನಂದನು
ಬಾಗಿಲೊಳು ನಿಂದನು 6

ಶ್ಲೋಕ :ಚಿತ್ತದೊಲ್ಲಭೆ ಚದÀುರೆ ಮೋಹನಾಕಾರೆ
ಮುತ್ತುರತ್ನವ ಮನೆಯೊಳಗೆಲ್ಲ ಬೀರಿ
ಎತ್ತ ಹೋದಳೊ ಎನ್ನ ಪ್ರಾಣದ ನಾರಿ
ಸತ್ಯಭಾಮೆಯ ಸುಳುಹು ಕಾಣೆನು ತೋರಿ 7

ಪದ : ಕನ್ನಡಿ ಕದಪಿನ ಜಾಣೆಯ ಸುಪ್ರವೀಣೆಯ
ಕೋಕಿಲವಾಣಿಯ
ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು
ಹಾರೈಸಿ ನಿಂತವರು ಕಣ್ಣು
ಸನ್ನೆಯ ಮಾಡಿ ತೋರ್ವದು ನೋಡಿ ಮೆಲ್ಲಗೆ
ಮಾ[ತಾ]ಡಿ 7

ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು
ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು
ಸೂಸು ಪರಿಮಳ[ದ] ಪಾರಿಜಾತದ ಹೂವ ಹಾ-
ರÉೈಸಿ ಕಂಗಳು ತೀರ[ವು] ನೋಡಿದಳು ಕಾಂತೆ 8

ಪದ : ಕಂಡಳು ಕಾರುಣ್ಯಮೂರ್ತಿಯ ಸತ್ಕೀರ್ತಿಯ
ಫಲ್ಗುಣನ ಸಾರಥಿಯ
ಇಲ್ಲಿಗ್ಯಾತಕೆ ಬಂದೆ ಹೋಗೆಂದು ಅತ್ತ ಸಾಗೆಂದು
ಇದು ಏನು ಸೋಗೆಂದು
ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ
ಮುನಿಸ್ಯಾತಕೆನ್ನೊಡನೆ
ಕಂಡ ಕನಸು ಎಂದÀು ಭಾವಿಸೆ ಎನ್ನ ಜೀವಿಸೆ
ಅಪರಾಧವ ಕ್ಷಮಿಸೆ 8

ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ
ಮಿಕ್ಕ ಸತಿಯರಿಗ್ಯಾತಕೆಂಬ ಭಾವ
ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ
ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ 9

ಪದ : ಮಲಯಜಗಂಧಿ ಮರನ ತಂದು ನಿಲಿಸುವೆನಿಂದು
ಮನ್ನಿಸೆ ಕೃಪಾಸಿಂಧು
ಬಲರಾಮ ನಂದಗೋಪನಾಣೆ ತಪ್ಪೆನು ಕಾಣೆ
ಕೋಕಿಲಸ್ವರಗಾನೆ
ಛಲವ್ಯಾತಕೆಂದು ತಕ್ಕೈಸಿದ ಸಂತೈಸಿದ ತೊಡೆಯಲ್ಲಿ
ಕುಳ್ಳಿರಿಸಿದ
ಹೆಳವನಕಟ್ಟೆಯ ರಂಗನು ಕೃಪಾಂಗನು
ದೇವೋತ್ತುಂಗ ವಿಕ್ರಮನು 9
****

ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದ
ಸಾರೆ ರುಕ್ಮಿಣಿಸಹಿತ ಆನಂದದಿಂದ
ವಾರಿಜಾಂಬಕ ವಾಲಗದೊಳು ಚಂದ
ನಾರಂದಮುನಿ ತಾ ಪಾರಿಜಾತವ ತಂದ ||1||

ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ
ಪುಷ್ಪಯಾರಿಗೆ ಎಂದ
ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ
ನೀನು ಬಲ್ಲದೆ ಇಂತೆಂದ
ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು
ಕೇಳಿದಳಾಕೆ ನಿಂದು
ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು
ಮನದಲ್ಲಿ ಅತಿನೊಂದು ||1||

ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು
ಮಂದಗಮನೆಯ ಮುಡಿಗೆ ತಾ ಮುಡಿಸಿದನು
ಎಂದು ಎನ್ನೊಳು ಎರವು ಇಲ್ಲವು ಕಾಣಿ
ಇಂದು ಮಾಡಿದ ಕುಹಕವ ಕೃಷ್ಣ ತಾನು ||2||

ಪದ : ಹರಿಯು ಮಾಡಿದ ಮಾಟವನು ಕಂಡೆನು ನಾನು
ಇನ್ನಾರಿಗೆ ಪೇಳುವೆನು
ಪರಿಮಳದ ಪಾರಿಜಾತದ ಹೂವ ತಂದನು ಭಾಮೆ
ರುಕ್ಮಿಣಿ ತನ್ನ ಜೀವ
ಸರಿ ಬಂದ ಮಡದಿಗೆ ಮುಡಿಸಿದ ಶೃಂಗರಿಸಿದ
ಬಹುಪ್ರೀತಿ ಬಡಿಸಿದ
ಬರಿಯ ಮಾತಿನ ಬನ್ನಣೆಯಿಲ್ಲ ಸ್ನೇಹ ತನಗಲ್ಲಿ
ಠಕ್ಕುಠವಳಿಗಳಿಲ್ಲಿ ||2||

ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ
ಹಚ್ಚಿರೆ ಮಾತ ಹರಿಯು ತಾ ಕೇಳಿದನೆ
ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ
ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ ||3||

ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ
ತೋರಿಸೆ ಕೃಷ್ಣನ್ನ ಅಮ್ಮಯ್ಯ ಕೇಳು ದಮ್ಮಯ್ಯ
ಕಂತು ಕಮಲಜನಯ್ಯ
ಬಾರದಿದ್ದರೆ ಪ್ರಾಣ ಉಳಿಯದು ಮತ್ತೆ ಅಳಿವುದು
ಏನೆಂದು ತಿಳಿಯದು
ಸಾರಿದ ಸರಿಬಂದ ಸತಿಯ ಬಹುರತಿಯ
ಬಹು ಪ್ರೀತಿ ಇದ್ದವ[ಳ] ||3||

ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ
ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ
ಗಿಳಿಇಲ್ಲದ ಗೂಡು ತಾನ್ಯಾತಕಮ್ಮ
ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ ||4||

ಪದ :ಯಾಕೆನ್ನ ಬ್ರಹ್ಮ ಪುಟ್ಟಿಸಿದನೊ ಸೃಷ್ಟಿಸಿದನೊ
ಮಾತೆನ್ನ್ಯಾಕ ಪಡೆದಳೊ
ಸಾಕಿನ್ನು ಹೆಣ್ಣು ಜನ್ಮದ ಬಾಳು ಯಾತಕೆ ಹೇಳು
ತಾಕಲೆನ್ನಯ ಗೋಳು
ಕುಹಕ ಪೇಳ್ದು ನಾರದ ಸಿದ್ಧ ಎಂಬುದು ಬದ್ಧ
ಮೂರುಲೋಕ ಪ್ರಸಿದ್ಧ
ಶ್ರೀಕೃಷ್ಣಂಗೆ ಎನಗೆ ಭೇದವ ಮಾಡಿ ಹೋದನು
ಓಡಿ ತನಗ್ಯಾಕಿದು ಬ್ಯಾಡಿ ||4||

ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು
ವಶವಾದನೆ ಒಲಿದು ರುಕ್ಮಿಣಿಗೆ ತಾನು
ಶಶಿಮುಖಿಯಳೆ ಸವತಿ ಅಟ್ಟುಳಿ ಇದೇನು
ಆಸೆಬಟ್ಟೆನೆ ಬಹಳ ವಸುದೇವ ಸುತಗೆ ||5||

ಪದ : ಸಿಟ್ಟಿನಿಂದತಿ ಘುಡಘುಡಿಸುತ ಆರ್ಭಟಿಸುತ
ಎಲ್ಲರೊಡನೆ ಕೋಪಿಸುತ
ತೊಟ್ಟತೊಡಿಗೆ ಈಡಾಡುತ ಬಿಸಾಡುವ
ನನಗ್ಯಾಕಿದು ಎಂದು
ಪಟ್ಟೆ ಮಂಚದ ಮೇಲೆ ಒರುಗುತ ತಾ ಎರಗುತ
ಮನದೊಳು ಮರುಗುತ
ಇಷ್ಟು ಮಾಡುವುದಿದು ನೀತವೆ ಪ್ರಖ್ಯಾತವೆ
ಸುರಪಾರಿಜಾತವೆ ||5||

ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ
ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ
ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ
ಜೀವದೊಲ್ಲಭೆಯೊಡನೆ ಪಂಥವು ಸಲ್ಲ ||6||

ಪದ : ಮಂದಗಮನೆ ಮುನಿದಿಹಳೊ ಎನ್ನ ಪ್ರಿಯೆಳೊ
ಎನ್ನೊಡನೆ ನುಡಿಯಳೊ
ಇಂದು ಅಲ್ಲಿಗೆ ಹೋಗದಿದ್ದರೆ ಇಲ್ಲಿದ್ದರೆ
ಅಪ್ರಬುದ್ಧನಾದರೆ
ಕುಂದು ಎನ್ನ ಮ್ಯಾಲಿಡುವಳೋ ಸ್ನೇಹ ಬಿಡುವಳೊ
ಕೋಪವನು ತಾಳುವಳೊ ಇಂ
ತೆಂದು ನುಡಿದ ಮುಕುಂದ ನಿತ್ಯಾನಂದನು
ಬಾಗಿಲೊಳು ನಿಂದನು ||6||

ಶ್ಲೋಕ :ಚಿತ್ತದೊಲ್ಲಭೆ ಚದುರೆ ಮೋಹನಾಕಾರೆ
ಮುತ್ತುರತ್ನವ ಮನೆಯೊಳಗೆಲ್ಲ ಬೀರಿ
ಎತ್ತ ಹೋದಳೊ ಎನ್ನ ಪ್ರಾಣದ ನಾರಿ
ಸತ್ಯಭಾಮೆಯ ಸುಳುಹು ಕಾಣೆನು ತೋರಿ ||7||

ಪದ : ಕನ್ನಡಿ ಕದಪಿನ ಜಾಣೆಯ ಸುಪ್ರವೀಣೆಯ
ಕೋಕಿಲವಾಣಿಯ
ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು
ಹಾರೈಸಿ ನಿಂತವರು ಕಣ್ಣು
ಸನ್ನೆಯ ಮಾಡಿ ತೋರ್ವದು ನೋಡಿ ಮೆಲ್ಲಗೆ
ಮಾತಾಡಿ ||7||

ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು
ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು
ಸೂಸು ಪರಿಮಳ ಪಾರಿಜಾತದ ಹೂವ ಹಾ-
ರೈಸಿ ಕಂಗಳು ತೀರ ನೋಡಿದಳು ಕಾಂತೆ ||8||

ಪದ : ಕಂಡಳು ಕಾರುಣ್ಯಮೂರ್ತಿಯ ಸತ್ಕೀರ್ತಿಯ
ಫಲ್ಗುಣನ ಸಾರಥಿಯ
ಇಲ್ಲಿಗ್ಯಾತಕೆ ಬಂದೆ ಹೋಗೆಂದು ಅತ್ತ ಸಾಗೆಂದು
ಇದು ಏನು ಸೋಗೆಂದು
ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ
ಮುನಿಸ್ಯಾತಕೆನ್ನೊಡನೆ
ಕಂಡ ಕನಸು ಎಂದು ಭಾವಿಸೆ ಎನ್ನ ಜೀವಿಸೆ
ಅಪರಾಧವ ಕ್ಷಮಿಸೆ ||8||

ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ
ಮಿಕ್ಕ ಸತಿಯರಿಗ್ಯಾತಕೆಂಬ ಭಾವ
ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ
ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ ||9||

ಪದ : ಮಲಯಜಗಂಧಿ ಮರನ ತಂದು ನಿಲಿಸುವೆನಿಂದು
ಮನ್ನಿಸೆ ಕೃಪಾಸಿಂಧು
ಬಲರಾಮ ನಂದಗೋಪನಾಣೆ ತಪ್ಪೆನು ಕಾಣೆ
ಕೋಕಿಲಸ್ವರಗಾನೆ
ಛಲವ್ಯಾತಕೆಂದು ತಕ್ಕೈಸಿದ ಸಂತೈಸಿದ ತೊಡೆಯಲ್ಲಿ
ಕುಳ್ಳಿರಿಸಿದ
ಹೆಳವನಕಟ್ಟೆಯ ರಂಗನು ಕೃಪಾಂಗನು
ದೇವೋತ್ತುಂಗ ವಿಕ್ರಮನು ||9||
*******