Showing posts with label ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ramesha. Show all posts
Showing posts with label ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ramesha. Show all posts

Monday, 18 November 2019

ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ankita ramesha

by ಗಲಗಲಿಅವ್ವನವರು
ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ಸಿದೆಯೊ ಕೃಷ್ಣಗೆಜ್ಜೆಕಟ್ಟಿಸಿದ್ಯೊಗೋವಳ ಹೆಜ್ಜೆನಿಕ್ಕಿಸಿದ್ಯೊ ಪ.

ಅರಿಷಿಣ ಕುಂಕುಮ ಗಂಧಧರಿಸಿ ಸೀರೆ ಕುಪ್ಪುಸ ಕ್ಯಾದಿಗೆಸರಸದ ಭೂಷಣಗಳಿಟ್ಟುಅರಸೆಯರು ಬಂದಾರೊ ಕುಣಿಯಲು 1

ನಾನಾ ಪುಷ್ಪ ಬಳ್ಳಿಯೊಳಗೆಮೀನಾಕ್ಷಿಯರ ಕೂಡಿ ರಮಿಸಿಮಾನವಕಳೆದುಕೊಂಡ್ಯೊಎನುತ ತಾನು ಪಾರ್ಥನಗುತ 2

ಇಬ್ಬರಿಬ್ಬರ ನಡುವೆನೀನುಒಬ್ಬನೊಬ್ಬನಾಗಿ ನಿಂತುಕಬ್ಬು ಬಿಲ್ಲಿನಯ್ಯ ಕುಣಿಸಿದಿನಿರ್ಭಯದಿಂದಲೆ ಕೃಷ್ಣ 3

ಮಿತ್ರೆಯರಹೆಗಲಲ್ಲೆ ಪರಸ್ಪರಹಸ್ತನಿಟ್ಟು ಹರುಷದಿಂದನರ್ತನ ಮಾಡಿಸಿದವಿಚಿತ್ರ ಪುರುಷನೆ ಕೃಷ್ಣ 4

ಕಕ್ಕಸಕುಚದ ಬಾಲೆಯರಚಕ್ರದಂತೆ ನಿಲಿಸಿ ನೀನುಢಕ್ಕಡ ಢಕ್ಕಡ ತಾಥಾಎನುತಲೆ ಧಿಕ್ಕಿಡಿ ಧಿಮಿಕಿಡಿ ಕೃಷ್ಣ 5

ಬಗರಿ ಕುಚದ ಬಾಲೆಯರ ಕೂಡನಗಧರÀ ನೀ ಕುಣಿಯಲುನಗಗೀಡಾದಿತಯ್ಯ ಜಗದಿಹಗರಣಪುರುಷನೆ ಕೃಷ್ಣ6

ಪುಂಡರಿಕಾಕ್ಷನು ಕೂಡಿಕೊಂಡುಅವರಕುಣಿಸುವಾಗಗಂಡರು ಬಂದರು ತಮ್ಮಹೆಂಡಿರ ನೋಡಲು ಕೃಷ್ಣ 7

ಭಾಳಗೋವಳರಿಂದ ಕೂಡಿತಾಳನ್ಹಾಕಿಸಿದಿಯಯ್ಯಾಹೀಂಗೆಭಾಳರೌಸವಕೇಳಿ ಜನರುಮೇಳವಾದರೊ ಗಡನೆ 8

ಶ್ರೀಶ ರಾಸಕ್ರೀಡೆ ಮಾಡಿಸೋಸಿಲೆಸುರರೆಲ್ಲ ನೋಡಿಸೂಸಿದರು ಪುಷ್ಪ ಮಳೆಯಆಸಮಯದಲಿ ಕೃಷ್ಣ 9

ಚಲುವ ರಾಮೇಶ ತಾನುಜಲಕ್ರೀಡೆಯನ್ನಾಡಿಲಲನೆಯರ ಸಹಿತಾಗಿ ತಾನುಬಲು ಬಲು ಹರುಷದಲೆ ಕೃಷ್ಣ 10
*******