Showing posts with label ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು shyamasundara. Show all posts
Showing posts with label ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು shyamasundara. Show all posts

Wednesday 1 September 2021

ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು ankita shyamasundara

 ..


ಶ್ರೀನಾಥ ಸಲಹೊ ಸತತ ನಿನ್ನ ಪದ

ಧ್ಯಾನಾನಂದವಿತ್ತು ಪ


ತಂದೆ ನಿನ್ನನುಗ್ರಹದಿ | ಜಗದೊಳಗೆ

ಬಂದೆ ಭೂಸುರ ಜನ್ಮದಿ

ಪೊಂದಿ ತ್ವತ್ವದ ಭಜಿಸದೆ ಭವದೊಳಗೆ

ಬೆಂದು ಬೆಂಡಾದೆನು ನಾ1


ಪಗೆಯಾರುಖಳರು ಎನ್ನ | ಪಾಶದಲಿ

ಬಿಗಿದು ಬಂಧಿನಿ ಎಳೆಯುತ ||

ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ

ಹಗರಣವ ಮಾಡುತಿಹರೋ 2


ಪರಸ್ವತಿಯರ ರೂಪನೋಡಿ | ಮರಳಾಗಿ

ಬೆರೆತವಳ ಕ್ರೀಡಿಸುತಲಿ

ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ

ನರಕಕ್ಕೆ ಗುರಿಯಾದೆನೋ 3


ಧನದಾಪೇಕ್ಷೆಯಿಂದ | ಧನಿಕರ

ಮನೆಗ್ಹೋಗಿ ಲಜ್ಜೆ ತ್ಯಜಿಸಿ

ಘನದಾತರೆಂದವರನು | ಬಲು ತುತಿಸಿ

ದಿನಗಳೆದೆ ಶುನಕನಂತೆ 4


ಹರಿನಿನ್ನವಾಸರದಿ | ಉಪವಾಸ

ಇರುಳು ಜಾಗರವ ಜರಿದು

ಬರಿದೆ ಕಾಲವ ಕಳೆದೆನೋ ರವಿಸುತಗೆ |

ಅರುಹಲು ಬಾಯಿಲ್ಲವೋ 5


ಪವಮಾನ ಕೃತಸುಶಾಸ್ತ್ರ | ಪ್ರವಚನವ

ಕಿವಿಗೊಟ್ಟು ಕೇಳಲಿಲ್ಲ

ಅವನಿ ದ್ವಿಜರ ಪಾದವ ಸೇವಿಸದೆ

ಭುವಿ ಭಾರ ನಾನಾದೆನೊ 6


ಬಾಯೆಂದು ಕೂಗಿ ಕರೆವೆ | ಸರ್ವೇಶ

ಓಯೆಂದು ಬೇಗ ಬಾರೋ ||

ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ

ತೋಯಜಧ್ಯಾನವನಿತ್ತು 7


ಶಿಲೆಯಾದ ಸಲಹಿದ ತೆರದಿಲಿ

ತುಳಿದು ಸಲಹಿದ ತೆರದಲಿ

ಇಳಿಸುರನ ಮಹತ್ಪಾಪ ಕಳೆದವಗೆ

ಸಲೆಮುಕ್ತಿ ಸಲಿಸಿದಂತೆ 8


ಇಂದಿನಾರಭ್ಯವಾಗಿ | ಎನ್ನಿಂದ

ನಿಂದ್ಯಕರ್ಮವ ನಡೆಸದೆ

ಮಂದರೋದ್ಮರನೆ ನಿನ್ನ |ಸದ್ಭಕ್ತ

ವೃಂದದೊಳು ಕೂಡಿಸಯ್ಯ 9


ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ

ಕೃಪಣವತ್ಸಲ ಕಾಣೆ

ಕೃಪೆಯಿಂದ ಕರಪಿಡಿಯೊ ಕರಿವರದ

ಕಪಿಲ ಕೌಸ್ತುಭ ಕೃಷ್ಣ 10


ನಿನ್ನ ನಾಮದ ಭೂಸುರ ಕುಲಹೀನ

ಕನ್ಯೆಯಳ ಸಂಗ ಮಾಡಿ

ನಿನ್ನ ಪರ್ವತ ಮೆಟ್ಟಿಲು ಅವಗೊಲಿದು

ನಿನ್ನಾಪ್ತನೆನಿಸಿದಂತೆ 11


ನಿನ್ನೊಲುಮೆ ಪಾತ್ರರಾದ ಗುರು

ಜಗನ್ನಾಥಾಖ್ಯ ದಾಸಾರ್ಯರ

ಸನ್ನಿಧಾನದಲಿ ಇಪ್ಪ | ಇವನೆಂದು

ಮನ್ನಿಸೊ ಮಹಮಹಿನೆ 12


ನಾ ಮಾಡ್ದ ದುರಿತ ರಾಶಿ | ಪೇಳಲ್ಕೆ

ಭೂಮಿಧರಗಳವಲ್ಲವೋ

ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ

ಶಾಮಸುಂದರ ದಯಾಳು 13

***