Showing posts with label ವೆಂಕಟೇಶನ ನಂಬಿರೊ ನೀವೆಲ್ಲರೂ ವೆಂಕಟೇಶನ vijaya vittala. Show all posts
Showing posts with label ವೆಂಕಟೇಶನ ನಂಬಿರೊ ನೀವೆಲ್ಲರೂ ವೆಂಕಟೇಶನ vijaya vittala. Show all posts

Thursday, 17 October 2019

ವೆಂಕಟೇಶನ ನಂಬಿರೊ ನೀವೆಲ್ಲರೂ ವೆಂಕಟೇಶನ ankita vijaya vittala

ವಿಜಯದಾಸ
ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ ||
ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ |
ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಪ

ಗುಣ ಒಂದು ನೋಡಿದಿಯಾ ಅಜಮಿಳ |
ಗುಣವೇನು ಮಾಡಿದನು |
ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ |
ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ 1

ಕುಲದಲ್ಯಾತರವನು |
ಕುಲಶಿಖಾಮಣಿ |
ನಿಳಗೆ ಪೋಗಿ ಕುಡತಿ ಪಾಲಿಗೆ ಅವನಿಗೊಲಿದು ನಿ |
ಶ್ಚಲ ಭಾಗ್ಯವನಿತ್ತ 2

ಗುಣ ಒಂದು ನೋಡಿದಿಯಾ | ವಾಲ್ಮೀಕಿ |
ಗಣದ ಕೂಟದವನೆ |
ಕ | ರುಣ ಮಾಡಿ ಅವಗೆ ಚ |
ರಣವನ್ನು ತೋರಿ ಆ | ಕ್ಷಣದಲ್ಲಿ ಸಾಕೀದ 3

ಪತಿವ್ರತರ ನೋಡಿದಿಯಾ | ಗೋಪಿಯರು
ಪತಿ ಧರ್ಮದಲ್ಲಿ ಇದ್ದರೇ |
ಪತಿತಪಾವನ ಸಂಗತಿಯಲ್ಲಿ ಆ ನಾರಿಯರಿಗೆ |
ಅತಿಶಯವಾದ ಸದ್ಗತಿಯ ಕರುಣಿಸಿದ4

ಗುಣಿ ಕುಲ ಗಣ ಮಿಕ್ಕಾದ ವ್ರತಂಗಳು |
ದಣಿದು ಮಾಡಲಿಬೇಡಿರೊ |
ಬಣಗುದೈವದ ಗಂಡ ವಿಜಯವಿಠ್ಠಲನ್ನ |
ಮನದೊಳು ನೆನೆದರೆ ನೆನೆಸಿದ ಫಲನೀವಾ 5
********