Showing posts with label ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ prasannavenkata. Show all posts
Showing posts with label ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ prasannavenkata. Show all posts

Wednesday, 13 November 2019

ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ ankita prasannavenkata

 ಶ್ರೀ ಪ್ರಸನ್ನವೇಂಕಟದಾಸರ ಕೃತಿ 

 ರಾಗ ಬೃಂದಾವನ ಸಾರಂಗ     ಖಂಡಛಾಪುತಾಳ 

ನಿನ್ನ ಮಹಿಮೆಗಳೆಲ್ಲ ನೀನೇ ಬಲ್ಲೆಯ್ಯ ॥ ಪ ॥
ಚಿನುಮಯ ಗರುಡಗಿರಿ ಮಾನ್ಯ ತಿಮ್ಮಯ್ಯ ॥ ಅ ಪ ॥

ನಿಜರಾಣಿಗಂಘ್ರಿ ನಖ ನಿಜವು ತಿಳಿಯದ ಮಹಿಮ ।
ವ್ರಜದಿ ವದನದಿ ತಾಯ್ಗೆ ತ್ರಿಜಗ ತೋರಿದ ಮಹಿಮ ॥
ಅಜ ಫಣಿಗಳುಗ್ಗಡಿಸೆ ಅಜಮಿಳ ರಕ್ಷಕ ಮಹಿಮ ।
ಭಜಕರನು ಬಿಡದೆ ಸದಾ ಸಂರಕ್ಷಿಸುವ ಮಹಿಮ ॥ 1 ॥

ನಿಲ್ಲುವ ಮುನಿಮನದಿ ಚೆಲ್ವ ಚರಣದ ಮಹಿಮ ।
ಬಲ್ಲಿದ ಬಲಿಯ ಕೆಳಗೊತ್ತಿದ ಮಹಿಮ ॥
ಖುಲ್ಲರಿಗೆ ದೊರಕದ ಮಹಿಮ ಗೊಲ್ವೆಂಗಳೆರ ।
ಭುಲ್ಲೈಪ ಘನಮಹಿಮೆ ಅಮಿತ ಸದ್ಗುಣಧಾಮ ॥ 2 ॥

ವೈಕುಂಠ ಮಂದಿರದಿ ಮುಕುತರೊಂದಿತ ಮಹಿಮೆ ।
ಗೋಕುಲದಿ ಗೊಲ್ಲರ ಆಕಳಕಾಯ್ದ ಮಹಿಮೆ ಅ - ॥
ನೇಕ ಜಾಂಡದಿ ಪೂರ್ಣನಾಗಿ ತೋರಿದ ಮಹಿಮೆ ।
 ಪ್ರಸನ್ವೆಂಕಟಾದ್ರಿಯ ಮೇಲೆ ಮೆರೆವ ಮಹಿಮೆ ॥ 3 ॥
***********

by ಪ್ರಸನ್ನವೆಂಕಟದಾಸರು
ನಿನ್ನ ಮಹಿಮೆಗಳೆಲ್ಲ ನೀನೆ ಬಲ್ಲೈಯ್ಯ ವರದಚಿನ್ಮಯ ಗರುಡಗಿರಿಯ ಮಾನ್ಯ ತಿಮ್ಮ್ಮಯ್ಯ ಪ.

ನಿಜರಾಣಿಗಂಘ್ರಿನಖನಿಜವು ತಿಳಿಯದ ಮಹಿಮೆವ್ರಜದಿ ವದನದಿ ತಾಯ್ಗೆತ್ರಿಜಗತೋರಿದ ಮಹಿಮೆಅಜಫಣಿಗಳುಗ್ಘಡಿಪ ಮಹಿಮೆಮಂದಅಜಮಿಳ ಬೆದರ್ಯೊದರೆ ಭಜಕನಾದ ಮಹಿಮೆ 1

ನಿಲ್ಲದಾ ಮುನಿಮನದಿ ಚೆಲ್ವ ಚರಣದ ಮಹಿಮೆಬಲ್ವಿಂದ ಉಂಗುಟದಿ ತಳ್ವೆಂಗದ ಮಹಿಮೆದುರ್ಲಭ ಮಮರಿಗೆ ನೋಟ ಮಹಿಮೆ ಆಗೊಲ್ವೆಂಗಳೇರ ನೋಡಿ ಭುಲ್ಲೈಪ ಮಹಿಮೆ 2

ವೈಕುಂಠ ಮಂದಿರದಿ ಮುಕುತರೊಂದಿತ ಮಹಿಮೆಗೋಕುಲದಿ ಗೊಲ್ಲರೊಳು ಆಕಳ ಕಾಯುವ ಮಹಿಮೆ ಅನೇಕಜಾಂಡದಿ ಪೂರ್ಣ ಮಹಿಮೆ ಪ್ರಸನ್ವೆಂಕಟಾದ್ರಿಯ ಮೇಲೆ ಏಕೈಕ ಮಹಿಮೆ 3
*******