Showing posts with label ಸಾಧುರು ದೊಡ್ಡವರು ಭವ ಬಂಧನದೊಳಗವರೆಂದಿಗೂ ಸಿಗರು jnanabodha. Show all posts
Showing posts with label ಸಾಧುರು ದೊಡ್ಡವರು ಭವ ಬಂಧನದೊಳಗವರೆಂದಿಗೂ ಸಿಗರು jnanabodha. Show all posts

Thursday, 5 August 2021

ಸಾಧುರು ದೊಡ್ಡವರು ಭವ ಬಂಧನದೊಳಗವರೆಂದಿಗೂ ಸಿಗರು ankita jnanabodha

 ..

ಸಾಧುರು ದೊಡ್ಡವರು ಭವ ಬಂಧನ-ದೊಳಗವರೆಂದಿಗೂ ಸಿಗರು ಪ

ಪದ್ಮ ಪತ್ರದಂತೆ ಅಲಿಪ್ತ ಇಲ್ಲಿರುವರು | ನಮ್ಹಾಂಗತೋರರು ಜಗದೊಳಗ ಹಮ್ಮುನಳಿದು ಬೇಗ | ಶರಣು ಹೊಕ್ಕವರಿಗೆ ಸುಮ್ಮನೆ ಚನ್ನಾಗಿ ದಯ ಮಾಡುವರು1

ಎಳ್ಳಿನೊಳಗೆ ಎಣ್ಣೆ ಇಂತಿಹರಂಥ ಬಲ್ಲವರಿವರು ಭುವನದಲ್ಲಿ | ಬಲಸ್ತನದ ಬಡಿವಾರವ ಮಿಗಿವಲ್ಲೆ ಸ್ವಾನಂದ ಸುಖದಿಂದ ಲೋಲ್ಯಾಡುವರು 2

ಏನನರಿಯದೆ ಮರುಳರಂತೆ ಜಗದೊಳು |ತನುವಿನ ಹಂಬಲ ಹರಿದಿಹರು |ಅನುದಿನದಲ್ಲಿ ಜ್ಞಾನಬೋಧನ ಪ್ರಿಯರುಚಿನುಮಯ ರೂಪದಲಿ ಎಲ್ಲ ಬೆರೆದ ದೊರೆಯರು 3

***