ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಕೃಪಾಲ ಕರುಣಾದಾಯಕ ಕರುಣಾದಾಯಕ ದುಷ್ಟಮರ್ದನ ಶಿಷ್ಟಜನಪಾಲಕ ಪ
ಮಾಧವ ಮಧುಸೂದನ ಮಧುಸೂದನ ಪಂಕಜನಾಭ ಪತಿತಪಾವನ ಶಂಖಚಕ್ರಧರ ಸಂಕರುಷಣ ಸಂಕುರಷಣ ಪತಿ ರಾಜೀವನಯನ 1
ಕಸ್ತೂರಿತಿಲಕ ಕೌಸ್ತುಭಭೂಷಣ ಕೌಸ್ತುಭಭೂಷಣ ಮಸ್ತಕ ಮುಗುಟ ಮದನಮೋಹನ ಭಕ್ತವತ್ಸಲ ಹರಿ ನಾರಾಯಣ ನಾರಾಯಣ ವಸ್ತುಪರಾತ್ಪರ ನಿಜನಿರ್ಗುಣ 2
ಗರುಡಗಮನ ಉರಗಶಯನ ಉರಗಶಯನ ಸುರಬ್ರಹ್ಮಾದಿ ವಂದಿತಚರಣ ಕರುಣಾನಂದ ಪರಿಪೂರಣ ಪರಿಪೂರಣ ತರಳ ಮಹಿಪತಿ ಜೀವಜೀವನ 3
****