Showing posts with label ಮಾರುತೀ ಜ್ಞಾನ ಮೂರುತೀ ಬಾರಿಬಾರಿಗೆ ಬಹದುರಿತ ಪರಿಹಸಯ್ಯ uragadrivasa vittala. Show all posts
Showing posts with label ಮಾರುತೀ ಜ್ಞಾನ ಮೂರುತೀ ಬಾರಿಬಾರಿಗೆ ಬಹದುರಿತ ಪರಿಹಸಯ್ಯ uragadrivasa vittala. Show all posts

Monday, 2 August 2021

ಮಾರುತೀ ಜ್ಞಾನ ಮೂರುತೀ ಬಾರಿಬಾರಿಗೆ ಬಹದುರಿತ ಪರಿಹಸಯ್ಯ ankita uragadrivasa vittala

ಮಾರುತೀ ಜ್ಞಾನ ಮೂರುತೀ ಪ


ಬಾರಿಬಾರಿಗೆ ಬಹದುರಿತ ಪರಿಹಸಯ್ಯ ಅ.ಪ


ಜೀವ ಕೃತಕರ್ಮ ಕ್ರಿಯೆಗಳೂ ಹಗಲಿರುಳೊಳು

ಪವಮಾನ ನೀನೆ ನಡೆಸೆ ಸಡೆಸೋರು ತತ್ತ್ವೇಶರು

ಭವಬಂಧ ಹರಿಸಿ ಕಾಪಾಡಯ್ಯ ಬೇಡುವೆ ಜೀಯ

ತವಪಾದದಾಸ್ಯವ ಕೊಡಿಸಯ್ಯ ಯಾಕೆ ನಿರ್ದಯ 1


ಬಹುಜನುಮವನೆತ್ತಿ ಬಂದೆನೊ ಇಲ್ಲಿ ನಿಂದೆನೊ

ಅಹರಹರ ನೀ ನಡೆಸೆ ನಡಿವೆನೊ ನುಡಿಸೆ ನುಡಿವೆನೊ

ಇಹಪರ ಸಾಧನ ನಿನ್ನಿಂದ ಎನ್ನ ಕೈಯಿಂದ

ಬಹುಪರಿ ಮಾಡಿಸಿ ಭವದಿಂದುದ್ಧರಿಸೆಂದೇ 2


ಪಂಕಜೋದ್ಭವ ಪದವ ಪಡೆವಯ್ಯ ಆರೆಣೆಯಯ್ಯ

ಕಿಂಕರರೊಳಗೇಕೆ ನಿರ್ದಯ ನಂಬಿದೆನಯ್ಯ

ಶಂಕರಾನತ ಪೂಜಿತಾಂಘ್ರಿಯ ದಯ ತೋರಯ್ಯ ಶ್ರೀ

ವೇಂಕಟೇಶನ ಮುಂದೆ ನಿಂದಿಹ ಭಕ್ತಿಯಿಂದಿಹ3

****