ಮಾರುತೀ ಜ್ಞಾನ ಮೂರುತೀ ಪ
ಬಾರಿಬಾರಿಗೆ ಬಹದುರಿತ ಪರಿಹಸಯ್ಯ ಅ.ಪ
ಜೀವ ಕೃತಕರ್ಮ ಕ್ರಿಯೆಗಳೂ ಹಗಲಿರುಳೊಳು
ಪವಮಾನ ನೀನೆ ನಡೆಸೆ ಸಡೆಸೋರು ತತ್ತ್ವೇಶರು
ಭವಬಂಧ ಹರಿಸಿ ಕಾಪಾಡಯ್ಯ ಬೇಡುವೆ ಜೀಯ
ತವಪಾದದಾಸ್ಯವ ಕೊಡಿಸಯ್ಯ ಯಾಕೆ ನಿರ್ದಯ 1
ಬಹುಜನುಮವನೆತ್ತಿ ಬಂದೆನೊ ಇಲ್ಲಿ ನಿಂದೆನೊ
ಅಹರಹರ ನೀ ನಡೆಸೆ ನಡಿವೆನೊ ನುಡಿಸೆ ನುಡಿವೆನೊ
ಇಹಪರ ಸಾಧನ ನಿನ್ನಿಂದ ಎನ್ನ ಕೈಯಿಂದ
ಬಹುಪರಿ ಮಾಡಿಸಿ ಭವದಿಂದುದ್ಧರಿಸೆಂದೇ 2
ಪಂಕಜೋದ್ಭವ ಪದವ ಪಡೆವಯ್ಯ ಆರೆಣೆಯಯ್ಯ
ಕಿಂಕರರೊಳಗೇಕೆ ನಿರ್ದಯ ನಂಬಿದೆನಯ್ಯ
ಶಂಕರಾನತ ಪೂಜಿತಾಂಘ್ರಿಯ ದಯ ತೋರಯ್ಯ ಶ್ರೀ
ವೇಂಕಟೇಶನ ಮುಂದೆ ನಿಂದಿಹ ಭಕ್ತಿಯಿಂದಿಹ3
****
No comments:
Post a Comment