Showing posts with label ಆವ ಜನುಮದ ಪಾಪ ವೊದಗಿತೋ ಎನಗಿಂದು vijaya vittala. Show all posts
Showing posts with label ಆವ ಜನುಮದ ಪಾಪ ವೊದಗಿತೋ ಎನಗಿಂದು vijaya vittala. Show all posts

Thursday, 17 October 2019

ಆವ ಜನುಮದ ಪಾಪ ವೊದಗಿತೋ ಎನಗಿಂದು ankita vijaya vittala

ವಿಜಯದಾಸ
ಆವ ಜನುಮದ ಪಾಪ ವೊದಗಿತೋ ಎನಗಿಂದು |
ದೇವ ಗಂಗೆಯ ನೋಡಿದೆ ಪ

ದೇವಕೀಸುತ ಒಲಿದು ಕರೆತಂದು ಎನ್ನನು |
ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ
ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ-
ತ್ತರ ಪೇಳಿಸಾಗಿದ್ದನೊ |
ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ |
ಸರಿಯೆಂದು ಸ್ಥಾಪಿಸಿದೆನೊ |
ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ |
ಮರಳಿ ಪೂರ್ತಿಸಿ ಇದ್ದೆನೊ |
ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ |
ಪರಿಹರಿಸಿ ಬಂದಿದ್ದನೋ ಏನೋ 1

ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ
ಕರ್ಮ ಮಾಡಿದ್ದೆನೊ |
ಜನಪತಿಗಳ ಮಾತು ಕೇಳದೆ ಧರ್ಮಕ್ಕೆ |
ಅನುಕೂಲನಾಗಿದ್ದೆನೊ |
ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ |
ಉಣಿಸಿ ಸುಖಪಡಿಸಿದ್ದೆನೊ |
ವನಗಳನು ಕಡಿದು ದೇವಾಲಯವ ಕಟ್ಟಿಸಿ |
ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ 2

ಉತ್ತಮನು ಮನೆಗೆ ಬಂದಾಗ ಮಾಡುವಂಥ |
ಸತ್ಕರ್ಮ ತೊರೆದಿದ್ದೆನೋ |
ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ |
ಹತ್ತೆಂಟು ಕಟ್ಟಿಸಿದೆನೊ |
ದತ್ತಾಪಹಾರವನು ಮಾಡಿ ಅದರಿಂದನಗ್ನಿ-
ಹೋತ್ರವನು ಸಾಧಿಸೆದೆನೊ |
ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ-
ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ3
*********