Showing posts with label ಭಾವ ಭಕುತಿಗೆ ವಲಿವ ನೋಡಿರೋ ದೇವ ದೇವ ಮುಕುಂದನು gurumahipati. Show all posts
Showing posts with label ಭಾವ ಭಕುತಿಗೆ ವಲಿವ ನೋಡಿರೋ ದೇವ ದೇವ ಮುಕುಂದನು gurumahipati. Show all posts

Wednesday, 1 September 2021

ಭಾವ ಭಕುತಿಗೆ ವಲಿವ ನೋಡಿರೋ ದೇವ ದೇವ ಮುಕುಂದನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಭಾವ ಭಕುತಿಗೆ ವಲಿವ ನೋಡಿರೋ| ದೇವ ದೇವ ಮುಕುಂದನು| ಆವನಾಗಲಿ ತನ್ನ ನಂಬಿದ| ಸೇವಕರನು ದ್ಬರಿಸಿ ಪೊರೆವನು ಪ 


ಆಚರಣೆ ನೋಡಿದನೆ ವ್ಯಾಧನ| ನೀಚನೆಂದನೆ ವಿದುರನ| ಯೋಚಿಸಿದನೇ ಧ್ರುವನ ವಯಸನು| ನಾಚಿದನೇ ಕುಬ್ಜೆಯನು ಕೂಡಲು1 

ಏನು ವಿದ್ಯೆ ಗಜೇಂದ್ರದೋರಿದ| ಏನು ಕೊಟ್ಟ ಸುಧಾಮನು| ಏನು ಪೌರುಷ ಉಗ್ರಸೇನನ| ಏನುಣಿಸಿದಳು ಹರಿಗೆ ದ್ರೌಪದಿ2 

ಆವಶೇವೆಯೋ ನರನ ಬಂಡಿಯ| ಬೋವತನವನು ಮಾಡಲು| ಭಾವಿಸಲು ಗುರುಮಹಿಪತಿ ಪ್ರಭು| ಕಾವಕರುಣಿಯೋ ಮಹಿಮೆ ತಿಳಿಯದು3

****