Showing posts with label ನಲ್ಲ ಕೃಷ್ಣನ ಬರಹೇಳಿಂದುಮುಖಿಯೇ ನಿಲ್ಲದೇ govinda. Show all posts
Showing posts with label ನಲ್ಲ ಕೃಷ್ಣನ ಬರಹೇಳಿಂದುಮುಖಿಯೇ ನಿಲ್ಲದೇ govinda. Show all posts

Wednesday, 13 November 2019

ನಲ್ಲ ಕೃಷ್ಣನ ಬರಹೇಳಿಂದುಮುಖಿಯೇ ನಿಲ್ಲದೇ ankita govinda

by ಗೋವಿಂದದಾಸ
ನಲ್ಲ ಕೃಷ್ಣನ ಬರಹೇಳಿಂದುಮುಖಿಯೇ ನಿಲ್ಲದೇ ಕರೆತಾರೆ ಪೋಗಿಂದು ಸಖಿಯೇ ಪ

ಗುಲ್ಲು ಮಾಡದೇ ನೀನು ಗುಟ್ಟಾಗಿ ಪೇಳಿನ್ನುಸುಳ್ಳಲ್ಲ ಕಬ್ಬಿಲ್ಲನುರುಬೆ ಸೈರಿಸಲಾರೆ ಅ.ಪತೊಂದರೆ ಏನಿಂದು ಪರ್ವ ದಿವಸವಲ್ಲಸುಂದರ ಮೇಷ ಸಂಕ್ರಾಂತಿ ಏನಲ್ಲಾ ||ಹಿಂದು ಮತದ ಎಳ್ಳಮಾವಾಸೆಯಲ್ಲಾಚಂದಿರ ಮುಖಿ ಯುಗಾದಿಯ ಪಾಡ್ಯವಲ್ಲಾ 1

ಭಾನುಬಿದಿಗೆ ಅಕ್ಷತ್ತದಿಗೆ ಏನಲ್ಲಾವಿನಾಯಕನ ಚೌತಿ ನಾಗರಪಂಚಮಿಯಲ್ಲಾ ||ಸಾನುರಾಗದ ಚಂಪಾ ಷಷ್ಠಿ ರಥಸಪ್ತಮಿಗೋಕುಲಾಷ್ಟಮಿಯಲ್ಲಾ ಮಹಾ ನವಮಿಯಲ್ಲ 2

ಎತ್ತಿದ ದಶಮಿ ಪ್ರಥಮೈಕಾದಶಿಯಲ್ಲಾಉತ್ಥಾನ ದ್ವಾದಶಿಶನಿತ್ರಯೋದಶಿಯಲ್ಲಾ ||ಉತ್ತಮನಂತ ವ್ರತ ನೂಲಹುಣ್ಣಿಮೆಯಲ್ಲಾಚಿತ್ತಜನಾಟಕ್ಕೆ ಗೋವಿಂದ ಬರಲಿಲ್ಲಾ 3
******