Showing posts with label ನಿನ್ನ ನಂಬಿ ನಷ್ಟವಾದೆನೋ ನರಹರಿ tandepradyumna vittala. Show all posts
Showing posts with label ನಿನ್ನ ನಂಬಿ ನಷ್ಟವಾದೆನೋ ನರಹರಿ tandepradyumna vittala. Show all posts

Thursday, 11 March 2021

ನಿನ್ನ ನಂಬಿ ನಷ್ಟವಾದೆನೋ ನರಹರಿ ankita tandepradyumna vittala

 ರಾಗ – ನೀಲಾಂಬರಿ : ತಾಳ -


ನಿನ್ನ ನಂಬಿ ನಷ್ಟವಾದೆನೋ ನರಹರಿ l

ಎನ್ನ ಕಷ್ಟ ನೋಡಬಾರದೆ ನರಹರಿ ll ಪ ll


ತರಳತನದಿ ದಿವ್ಯ ನಾಮವಾ ನರಹರೆ l

ನಿರತದಿಂದ ಸ್ಮರಿಸುತಿರುವೆನೊ ನರಹರೆ l

ಅರಿಯು ಬಂದು ಎರಡು ನಯನವೂ ನರಹರೆ l

ದ್ಯರಿಯದಂತೆ ಪರೆಯೆಗೈದೆವೆ ನರಹರೆ ll 1 ll


ನರರ ನಿಂತು ಪಾಡಿ ಪೊಗಳಲು ನರಹರೆ l

ಮರುಗಿ ಮನಸು ಕರುಣ ಮಾಳ್ಪರೊ 

ನರಹರೆ l

ಸರಿ ನೀ ಚತುರದಶಭುವನಕೆ ನರಹರೆ l

ಅರಸುಯೆನಿಸಿ ಕೊಳಲೆದೇನಯ್ಯ ನರಹರೆ ll 2 ll


ಇಂದೇನಾದದ್ದಾಗಿ ಹೋಗಲಿ ನರಹರೆ l

ಮುಂದೆ ಆದರು ಮುಕುತಿ ಪಾಲಿಸೊ ನರಹರೆ l

ತಂದೆ ಪ್ರದ್ಯುಮ್ನವಿಟ್ಟಠಲರೇಯ ನೀ ನರಹರೆ l

ಅಂದಮಾತಿಗೆ ಅಂಗೀಕರಿಸಯ್ಯಾ ನರಹರೆ ll 3 ll

***