RAO COLLECTIONS SONGS refer remember refresh render DEVARANAMA
ಜಗತ್ಪಾಲಾ ಸದ್ಗುಣಶೀಲಾ ರಮಾಲೋಲಾ ಪ
ದಶರಥಬಾಲಾ ಗಾನ ವಿಲೋಲಾ ನಿತ್ಯ ವಿಮಲಾ
ಬಹುಗುಣ ಶೀಲಾ ಪಾಹಿ ಕೃಪಾಲಾ1
ನಿತ್ಯಾನಂದಾ ದೇವಕಿಕಂದಾ ಕಂಸನ ಕೊಂದಾ
ಬಾಲ ಗೋವಿಂದ ನೀ ದಯದಿಂದಾ ಪಾಹಿ ಮುಕುಂದಾ 2
ಅಮರಾಧೀಶಾ ಅಸುರನಾಶಾ ಪರಮ ಪ್ರಕಾಶಾ
ಗೋಕುಲವಾಸಾ ಭಕ್ತಪೋಷಾ ಶ್ರೀಹನುಮೇಶವಿಠಲ 3
****