ತಂಗಿ ಕೊಳಲನೂದುವ ಸುಂದರನಿವನೇತಂಗಿ ಕೊಳಲನೂದುವ ಸುಂದರನಿವನೇಸುಂದರನಿವನೇ ಮಂದರಧರನೇ ಪ
ಪುರುಷರೂಪದಿ ಪಯೋಧಿಯ ಕಡೆದನೆ ತಂಗಿತರುಣಿರೂಪದಿ ಸುಧೆ ಸುರರಿಗಿತ್ತನೆ ತಂಗಿ 1
ಸತಿಯು ಇಲ್ಲದೆ ಸುತರನು ಪಡೆದನೆ ತಂಗಿಪತಿಯು ಇಲ್ಲದೆ ಅಪ್ರತಿಮ ರೂಪನೆ ತಂಗಿ 2
ಅತ್ತೆಯ ಕಾಲಿಲಿಂದಲೆ ಪಡೆದನೆ ತಂಗಿಚಿತ್ರ ಚರಿತ ವೃಜದೊಳಗಾಡಿದನೆ ತಂಗಿ 3
ಮುಂಜಿಯಾಗದೆ ಮಕ್ಕಳ ಪಡೆದನೆ ತಂಗಿಸಂಜೆಯಾಗದೆ ರಾತ್ರಿಯ ಮಾಡಿದನೆ ತಂಗಿ 4
ವಾಸುದೇವನು ಇಂದಿರೇಶನಿಗನೆ ತಂಗಿಕೂಸು ತರುಣನಾಗಿ ಮೋಸಗೊಳಿಪ ತಂಗಿ 5
****