Monday, 2 August 2021

ತಂಗಿ ಕೊಳಲನೂದುವ ಸುಂದರನಿವನೇತಂಗಿ ಕೊಳಲನೂದುವ ankita indiresha

ತಂಗಿ ಕೊಳಲನೂದುವ ಸುಂದರನಿವನೇತಂಗಿ ಕೊಳಲನೂದುವ ಸುಂದರನಿವನೇಸುಂದರನಿವನೇ ಮಂದರಧರನೇ ಪ

ಪುರುಷರೂಪದಿ ಪಯೋಧಿಯ ಕಡೆದನೆ ತಂಗಿತರುಣಿರೂಪದಿ ಸುಧೆ ಸುರರಿಗಿತ್ತನೆ ತಂಗಿ 1

ಸತಿಯು ಇಲ್ಲದೆ ಸುತರನು ಪಡೆದನೆ ತಂಗಿಪತಿಯು ಇಲ್ಲದೆ ಅಪ್ರತಿಮ ರೂಪನೆ ತಂಗಿ 2

ಅತ್ತೆಯ ಕಾಲಿಲಿಂದಲೆ ಪಡೆದನೆ ತಂಗಿಚಿತ್ರ ಚರಿತ ವೃಜದೊಳಗಾಡಿದನೆ ತಂಗಿ 3

ಮುಂಜಿಯಾಗದೆ ಮಕ್ಕಳ ಪಡೆದನೆ ತಂಗಿಸಂಜೆಯಾಗದೆ ರಾತ್ರಿಯ ಮಾಡಿದನೆ ತಂಗಿ 4

ವಾಸುದೇವನು ಇಂದಿರೇಶನಿಗನೆ ತಂಗಿಕೂಸು ತರುಣನಾಗಿ ಮೋಸಗೊಳಿಪ ತಂಗಿ 5

****


No comments:

Post a Comment