Showing posts with label ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ vijaya vittala. Show all posts
Showing posts with label ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ vijaya vittala. Show all posts

Thursday, 17 October 2019

ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ ankita vijaya vittala

ವಿಜಯದಾಸ
ಸಾಕು ಇಹಕೆನ್ನ ನೂಕದಿರು ತಂದೆ
ಪರಾಕು ಮಾಡದೆ
ಸಾಕು ದಯದಿಂದನೇಕ ಮಹಿಮನೆ
ಏಕಾಮೇವಾದ್ವಿತೀಯ ಪ

ಮಂಗಳಾಂಗ ಮಾತಂಗವರದ ವಿ-
ಹಂಗಗಮನ ಭುಜಂಗಶಯನ ತು-
ರಂಗವದನ ಶುಭಾಂಗ ರಿಪುಕುಲ-
ಭಂಗ ಅಸಿತಾಂಗ ಅ.ಪ.
ಶೃಂಗಾರಾಂಬುಧಿ ರಂಗ ನಿನ್ನಯ
ಅಂಗಸಂಗಕ್ಕೆ ಅಂಗೀಕರಿಸಿದ
ಸಂಗಿತರ ಚರಣಂಗಳಬ್ಜಕೆ
ಭೃಂಗನಪ್ಪೆನೆಂತೊ 1

ಮಾನವಾವುದು ಸುಮ್ಮನಿರೆ ಪವ-
ಮಾನವಂದಿತ ನಿನ್ನ ಪೋಲ್ವ ಸ-
ಮಾನರಾರನು ಕಾಣೆ ಎನ್ನಭಿ-
ಮಾನವಾಧೀಶ ಮಾನವಮಾನ-
ಮಾನದಿಂದ ಕ್ರಮಾನುಸಾರನು
ಮಾನಗೊಳಿಸದೆ ಮಾನವಿತ್ತು ದು-
ಮ್ಮಾನವನೆ ಬಿಡಿಸೊ 2

ಬಲ್ಲೆ ನಿನ್ನಯ ಎಲ್ಲ ಪರಿಯಲಿ
ಬಲ್ಲಿದರಿಗತಿ ಬಲ್ಲಿದನು ಸಿರಿ-
ವಲ್ಲಭಾ ನೀನಲ್ಲದಿಲ್ಲೆಂದು
ಎಲ್ಲ ತುತಿಸುತಿದೆ
ಸೊಲ್ಲುವೊಂದನು ನಿಲ್ಲುತಲಿ ಕೇಳು
ಎಲ್ಲು ಬಯಸದೆ ಇಲ್ಲಿಗೇ ಬಂದೆ
ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ
ಬಲ್ಲದನು ಮಾಡೋ3
*******