Thursday, 17 October 2019

ಸಾಕು ಇಹಕೆನ್ನ ನೂಕದಿರು ತಂದೆ ಪರಾಕು ಮಾಡದೆ ankita vijaya vittala

ವಿಜಯದಾಸ
ಸಾಕು ಇಹಕೆನ್ನ ನೂಕದಿರು ತಂದೆ
ಪರಾಕು ಮಾಡದೆ
ಸಾಕು ದಯದಿಂದನೇಕ ಮಹಿಮನೆ
ಏಕಾಮೇವಾದ್ವಿತೀಯ ಪ

ಮಂಗಳಾಂಗ ಮಾತಂಗವರದ ವಿ-
ಹಂಗಗಮನ ಭುಜಂಗಶಯನ ತು-
ರಂಗವದನ ಶುಭಾಂಗ ರಿಪುಕುಲ-
ಭಂಗ ಅಸಿತಾಂಗ ಅ.ಪ.
ಶೃಂಗಾರಾಂಬುಧಿ ರಂಗ ನಿನ್ನಯ
ಅಂಗಸಂಗಕ್ಕೆ ಅಂಗೀಕರಿಸಿದ
ಸಂಗಿತರ ಚರಣಂಗಳಬ್ಜಕೆ
ಭೃಂಗನಪ್ಪೆನೆಂತೊ 1

ಮಾನವಾವುದು ಸುಮ್ಮನಿರೆ ಪವ-
ಮಾನವಂದಿತ ನಿನ್ನ ಪೋಲ್ವ ಸ-
ಮಾನರಾರನು ಕಾಣೆ ಎನ್ನಭಿ-
ಮಾನವಾಧೀಶ ಮಾನವಮಾನ-
ಮಾನದಿಂದ ಕ್ರಮಾನುಸಾರನು
ಮಾನಗೊಳಿಸದೆ ಮಾನವಿತ್ತು ದು-
ಮ್ಮಾನವನೆ ಬಿಡಿಸೊ 2

ಬಲ್ಲೆ ನಿನ್ನಯ ಎಲ್ಲ ಪರಿಯಲಿ
ಬಲ್ಲಿದರಿಗತಿ ಬಲ್ಲಿದನು ಸಿರಿ-
ವಲ್ಲಭಾ ನೀನಲ್ಲದಿಲ್ಲೆಂದು
ಎಲ್ಲ ತುತಿಸುತಿದೆ
ಸೊಲ್ಲುವೊಂದನು ನಿಲ್ಲುತಲಿ ಕೇಳು
ಎಲ್ಲು ಬಯಸದೆ ಇಲ್ಲಿಗೇ ಬಂದೆ
ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ
ಬಲ್ಲದನು ಮಾಡೋ3
*******

No comments:

Post a Comment