Showing posts with label ಎಲ್ಲ ದೇವರ ಗಂಡ ಕೃಷ್ಣ ಚಿಲ್ಲರೆ ದೈವರ ಮಿಂಡ jayesha vittala. Show all posts
Showing posts with label ಎಲ್ಲ ದೇವರ ಗಂಡ ಕೃಷ್ಣ ಚಿಲ್ಲರೆ ದೈವರ ಮಿಂಡ jayesha vittala. Show all posts

Thursday, 5 August 2021

ಎಲ್ಲ ದೇವರ ಗಂಡ ಕೃಷ್ಣ ಚಿಲ್ಲರೆ ದೈವರ ಮಿಂಡ ankita jayesha vittala

     ..

ಎಲ್ಲ ದೇವರ ಗಂಡ | ಕೃಷ್ಣ

ಚಿಲ್ಲರೆ ದೈವರ ಮಿಂಡ ಪ


ಪಾದದಿ ನದಿಯನು ಪೆತ್ತ | ಅದನು

ರುದ್ರನು ಶಿರದಲಿ ಪೊತ್ತ

ಮಾಧವನ್ಹೊಕ್ಕಳ ಜಾತ | ಶತ

ಮೋದನು ಲೋಕ ಪ್ರಖ್ಯಾತ 1


ಸೃಷ್ಟಿ ಸಂಹಾರಗೈದ | ಪರ

ಮೇಷ್ಟಿ ರುದ್ರರನಾಳ್ದ

ಯೆಟ್ಟ ದೈತ್ಯರ ಶಿರ ಮುರಿದ | ದುರಿತ-

ದೃಷ್ಟಿಸಿ ನಾಶಗೈದ 2


ಬಂಟರ ಪಾಲಕನೀತ | ವೈ-

ಕುಂಠದ ಒಡೆಯನು ದಾತ

ತುಂಟರ ಮಡಹುವ ಸತತ | ನಮಗೆ

ನಂಟನು ಗೋಕುಲನಾಥ 3


ಮನಸಿಗೆ ಬಂದುದು ಸಿದ್ಧ | ಪ್ರತಿ

ಯೆಣಿಸುವ ಜೀವನೆ ಬದ್ಧ

ನೆನೆಸುವರಲಿ ತಾನಿದ್ದ | ದಯ

ವನಧಿಯು ಬೆಣ್ಣೆಯ | ಕದ್ದ 4


ದುರಿತ ದುರುಳರ ಭಂಗ | ತಾ

ನಿರುತ ಮಾಡುವ ರಂಗ

ಜಯೇಶವಿಠಲ ತುಂಗ | ಮಹಿ

ಮಾ ರಕ್ಷಿಸು ದಯಾಪಾಂಗ

****