ಕಾಯೋ ಕರುಣಾಕರನೆ... ಕಡು ಪಾಪಿ ನಾನೂ
ನ್ಯಾಯವೆಂಬುದು ಎನ್ನೊಳ ಎಳ್ಳಿನಿತು ಇಲ್ಲ.... ||
ಎಣ್ಣೆ ಕೊಪ್ಪರಿಗೆಯೊಳು ಬಿದ್ದು ಸ್ತುತಿಸಿದವನಲ್ಲ
ಚಿನ್ನಕಶಿಪು ಬಾಧೆ ಒದರಿದವನಲ್ಲ
ಬಣ್ಣಗೆಟ್ಟರಣ್ಯ ತಿರುಗುವನು ನಾನಲ್ಲ
ಹೆಣ್ಣಿನ ಆಸೆಯ ಬಿಡುವ ಹನುಮನಲ್ಲವೋ ಸ್ವಾಮಿ.....|| ೧ ||
ಬಳುಬೇಡಿದುದನೀವ ಬಲಿಚಕ್ರವರ್ತಿಯಲ್ಲ
ನಲಿನಲಿದು ಅರ್ಪಿಸಲು ವಿದುರನಲ್ಲ
ಕಲಿಯೊಳು ದ್ರೋಣ ಫಲುಗುಣ ಭೀಷ್ಮ ನಾನಲ್ಲ
ನಳಿನಮುಖಿ ದ್ರೌಪತಿಯಹಲ್ಯೆಯಲ್ಲವು ನಾನು.... || ೨ ||
ಉರಗನಂದದಿ ಮಂಚವಾಗುವನು ನಾನಲ್ಲ
ಗರುಡನಮ್ದಡಿ ಬೆನ್ನ ಕೊಡುವವನು ಅಲ್ಲ
ಸಿರಿಧರನೆ ಕಾಗಿನೆಲೆಯಾದಿ ಕೇಶವನೆ ನಿನ್ನ
ಪರಮ ಡಿಂಗರಿಗರ ಪಂಕ್ತಿಗೆ ಸೇರಿಸೋ ನನ್ನ....... || ೩ ||
*********