..
kruti by Nidaguruki Jeevubai
ಯಾಕೆ ಕರುಣ ಬಾರದ್ಹರಿಯೆ
ಲೋಕನಾಯಕ ನಿನಗೆ ಸರಿಯೆ ಪ
ವ್ಯಾಕುಲದಲಿ ಮುಳುಗಿ ಬಹಳ
ಶೋಕಪಡುವ ಜನರ ಕಂಡು ಅ.ಪ
ತಂದೆ ತಾಯಿ ಬಂಧು ಬಳಗ
ಇಂದು ಮುಂದು ಗತಿ ನೀನೆಂದು
ಪೊಂದಿ ನಿನ್ನ ಭಜಿಸದಿರುವ
ಮಂದ ಮತಿಗಳನ್ನೆ ಕಂಡು 1
ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರದಿ ಮುಳುಗಿ ಮುಳುಗಿ
ಕಾಮಜನಕ ನಿನ್ನ ಮರೆತ
ತಾಮಸ ಜನರುಗಳ ಕಂಡು 2
e್ಞÁನಿಗಳನೆ ಕಂಡು ಪರಮ
ಸಾನುರಾಗದಿಂದ ಪೊರೆವೆ
e್ಞÁನ ಶೂನ್ಯರಾದ ಪರಮ ಅ-
e್ಞÁನಿ ಜನರುಗಳನೆ ಕಂಡು 3
ಪರಮಪುರಷ ನಿನ್ನ ಮಹಿಮೆ
ನಿರುತ ಧ್ಯಾನಿಸುವವರ ಸಂಗ
ಕರುಣದಿಂದ ಪಾಲಿಸಯ್ಯ
ಪರಮ ಕರುಣಾನಿಧಿಯೆ ದೇವ4
ನೊಂದೆ ಭವದ ಬಂಧನದೊಳು
ತಂದೆ ಕಮಲನಾಭ ವಿಠ್ಠಲ
ಬಂಧನಗಳ ಬಿಡಿಸಿ ಸಲಹೊ
ಮುಂದೆ ಶ್ರಮವ ಹರಿಸೊ ಬೇಗ5
***