ರಾಗ ನಾದನಾಮಕ್ರಿಯೆ ಅಟತಾಳ
ಜನರ ನಡತೆ ಕೇಳಿರಯ್ಯ ||ಪ||
ಇಂಥ ಜನರ ನೋಡಿ ನೀವು ಏನನಂಬಿರಯ್ಯ ||ಅ.ಪ||
ತಾಯಿಗನ್ನವನಿಕ್ಕರಯ್ಯ , ಬಲು
ಮಾಯ ಮಾತಿಗೆ ಮರುಳಾಗುವರಯ್ಯ
ನ್ಯಾಯವೆಂಬುದು ಇಲ್ಲವಯ್ಯ , ಅ-
ನ್ಯಾಯವೇ ಗತಿಯೆಂದು ಸಾಧಿಪರಯ್ಯ ||
ಉತ್ತಮ ಸ್ತ್ರೀಯಳ ಬಿಟ್ಟು , ತನ್ನ
ವೃತ್ತಿಗಳೆಲ್ಲ ಸೂಳೆಗೆ ಕೊಟ್ಟು
ಮತ್ತರೊಳಗೆ ಕೂಡಿ ಕೆಟ್ಟು , ಇಹ
ಉತ್ತಮರೆಂಬರೀ ಜಗದೊಳು ಮುಟ್ಟು ||
ಗಂಡನ್ನ ತಾ ಬಿಡುತಿಹಳು , ಪರ-
ಮಿಂಡನ್ನ ಕೂಡಿ ಲೋಲಾಡುತಿಹಳು
ಮುಂಡೇರು ಹೆಚ್ಚು ಜಗದೊಳು , ಭೂ-
ಮಂಡಲದೊಳಗಿಂಥ ನಡತೆಲ್ಲ ಬಹಳ ||
ಹೊನ್ನುಳ್ಳ ಹೊಲೆಯರುತ್ತಮರು , ಅವರ
ಬಣ್ಣಿಸಿ ಬಾರೆಂದು ಮನೆಗೆ ಕರೆವರು
ಕನಕಾಂಬರವನು ಕೊಡುವರು , ಅವರಿಗೆ
ಬಿನ್ನಣದಲಿ ಬಲು ಉಪಚರಿಸುವರು ||
ಬಡವನ್ನ ಬಾರೆನ್ನರಯ್ಯ , ಏನು
ನಡತೆಯಿದ್ದರು ಪ್ರಯೋಜನವಿಲ್ಲವಯ್ಯ
ಕಡುಮೂರ್ಖರಿಗೆ ಕಾಲವಯ್ಯ , ಎ-
ನ್ನೊಡೆಯ ಪುರಂದರವಿಠಲ ಕೇಳಯ್ಯ ||
********
ಜನರ ನಡತೆ ಕೇಳಿರಯ್ಯ ||ಪ||
ಇಂಥ ಜನರ ನೋಡಿ ನೀವು ಏನನಂಬಿರಯ್ಯ ||ಅ.ಪ||
ತಾಯಿಗನ್ನವನಿಕ್ಕರಯ್ಯ , ಬಲು
ಮಾಯ ಮಾತಿಗೆ ಮರುಳಾಗುವರಯ್ಯ
ನ್ಯಾಯವೆಂಬುದು ಇಲ್ಲವಯ್ಯ , ಅ-
ನ್ಯಾಯವೇ ಗತಿಯೆಂದು ಸಾಧಿಪರಯ್ಯ ||
ಉತ್ತಮ ಸ್ತ್ರೀಯಳ ಬಿಟ್ಟು , ತನ್ನ
ವೃತ್ತಿಗಳೆಲ್ಲ ಸೂಳೆಗೆ ಕೊಟ್ಟು
ಮತ್ತರೊಳಗೆ ಕೂಡಿ ಕೆಟ್ಟು , ಇಹ
ಉತ್ತಮರೆಂಬರೀ ಜಗದೊಳು ಮುಟ್ಟು ||
ಗಂಡನ್ನ ತಾ ಬಿಡುತಿಹಳು , ಪರ-
ಮಿಂಡನ್ನ ಕೂಡಿ ಲೋಲಾಡುತಿಹಳು
ಮುಂಡೇರು ಹೆಚ್ಚು ಜಗದೊಳು , ಭೂ-
ಮಂಡಲದೊಳಗಿಂಥ ನಡತೆಲ್ಲ ಬಹಳ ||
ಹೊನ್ನುಳ್ಳ ಹೊಲೆಯರುತ್ತಮರು , ಅವರ
ಬಣ್ಣಿಸಿ ಬಾರೆಂದು ಮನೆಗೆ ಕರೆವರು
ಕನಕಾಂಬರವನು ಕೊಡುವರು , ಅವರಿಗೆ
ಬಿನ್ನಣದಲಿ ಬಲು ಉಪಚರಿಸುವರು ||
ಬಡವನ್ನ ಬಾರೆನ್ನರಯ್ಯ , ಏನು
ನಡತೆಯಿದ್ದರು ಪ್ರಯೋಜನವಿಲ್ಲವಯ್ಯ
ಕಡುಮೂರ್ಖರಿಗೆ ಕಾಲವಯ್ಯ , ಎ-
ನ್ನೊಡೆಯ ಪುರಂದರವಿಠಲ ಕೇಳಯ್ಯ ||
********