Showing posts with label ಹಾಲು ಮಾರಲು ಪೋದೇವಮ್ಮ ಗೋಕುಲದೊಳ bheemesha krishna HAALU MAARALU PODEVAMMA GOKULADOLA. Show all posts
Showing posts with label ಹಾಲು ಮಾರಲು ಪೋದೇವಮ್ಮ ಗೋಕುಲದೊಳ bheemesha krishna HAALU MAARALU PODEVAMMA GOKULADOLA. Show all posts

Tuesday, 5 October 2021

ಹಾಲು ಮಾರಲು ಪೋದೇವಮ್ಮ ಗೋಕುಲದೊಳ ankita bheemesha krishna HAALU MAARALU PODEVAMMA GOKULADOLA

 


ಹಾಲು ಮಾರಲು ಪೋದೇವಮ್ಮ ಗೋಕುಲದೊಳ-

ಗ್ಹಾಲು ಮಾರಲು ಪೋದೆವಮ್ಮ

ಹಾಲು ಮಾರುವ ಧ್ವನಿ ಆಲಿಸಿ ಕೇಳುತ

ಬಾಲಕೃಷ್ಣ ಬಹು ಲೀಲೆ ಮಾಡುತ ಬಂದಪ

ಹಸಿರು ಜರದ ಸೀರೆಯನುಟ್ಟು ಕುಸುರಿಕಂಕಣ

ಎಸೆವೊ ಹವಳದ ಹಿಂಬಳೆ ಕಟ್ಟು ಮೊಸರಿನ ಕುಂಭ

ಕÀುಸುಮ ಮಲ್ಲಿಗೆಯ ಮುಡಿಯಲ್ಲಿಟ್ಟು

ಶಶಿವದನೆಯರೆಲ್ಲ ಚೆಂದದಿ ಬರುತಿರೆ

ಕುಸುಮನಾಭ ಮುಸುಗೆಳೆದು ಮೊಸರು ಸುರಿದ1


ಬಣ್ಣ ಬಣ್ಣದ ಸೀರೆಯನುಟ್ಟು ಮುತ್ತಿನ ಬಟ್ಟು

ಹೊಳೆವೊ ಕಸ್ತೂರಿ ತಿಲಕವನಿಟ್ಟು ಹಾಲಿನಕುಂಭ

ಸಣ್ಣಮಲ್ಲಿಗೆ ಮುಡಿಯಲಿಟ್ಟು

ಚೆನ್ನಾರ ಚೆಲುವೇರು ಚೆಂದದಿ ಬರುತಿರೆ

ಕಣ್ಣು ಸನ್ನೆಮಾಡಿ ಕರೆದು ಮುದ್ದಿಡುವ 2


ಮುಂದೆ ಮುಂದಾಗಿ ಹೋಗುತಿರಲು ಹಿಂದ್ಹಾಲಿನ್ಹರವಿ-

ಗೊಂದೊಂದ್ಹರಳು ಮೀಟುತಿರಲು ಧಾರೆಗೆ ಬಾಯಾ-

ನಂದದಿಂದೊಡ್ಡಿ ಕುಡಿಯುತಿರಲು

ಸÀಂದಣಿಯೊಳು ನಾವು ಒಂದರಿಯದಲೆ

ಬಂದಿಳುಹಲು ಬರೀ ಗಡಿಗೆ ಕಾಣಮ್ಮ 3


ಕಡಗೋಲಿಂದೊಡೆದÀು ಗಡಿಗೆಯನು ಬಡವರ ಬೆಣ್ಣೆ

ಒಡಲಿಗೆ ಕದ್ದು ತಿಂಬುವುದೇನು ಕಂಡರೆನಗಂಡ

ಬಡಿದÀರಿನ್ನೇನು ಮಾಡುವೆ ನೀನು

ಗಡಿಬಿಡಿ ಮಾಡುತ ಕತ್ತಲ ಮನೆಯೊಳು

ತÀುಡುಗನಂತೆ ತಿರುಗಾಡುವ ತಾನು 4


ಸಿಟ್ಟು ಮಾಡುವುದ್ಯಾತಕಮ್ಮ ಶ್ರೀ ರಮಣನ

ಬಿಟ್ಟು ಬಾಹುವುದೆ ಲೇಸಮ್ಮ ಭೀಮೇಶಕೃಷ್ಣನ

ಕಟ್ಟಿ ಹಾಕುವುದೆ ಲೇಸಮ್ಮ

ಪಟ್ಟುಮಾಡಿ ಪರಹೆಂಗಳೇರೊಳು ಕ-

ಣ್ಣಿಟ್ಟ ಮ್ಯಾಲೆ ಒಂದಿಷ್ಟಾದರು ಬಿಡ5

***