Showing posts with label ಸಿಕ್ಕಿದೆಯೋ ಎಲೆ ಜೀವ ನಿನ್ನ ಕುಕ್ಕಿ ಕೊಲ್ಲದೆ purandara vittala. Show all posts
Showing posts with label ಸಿಕ್ಕಿದೆಯೋ ಎಲೆ ಜೀವ ನಿನ್ನ ಕುಕ್ಕಿ ಕೊಲ್ಲದೆ purandara vittala. Show all posts

Saturday, 7 December 2019

ಸಿಕ್ಕಿದೆಯೋ ಎಲೆ ಜೀವ ನಿನ್ನ ಕುಕ್ಕಿ ಕೊಲ್ಲದೆ purandara vittala

ಪುರಂದರದಾಸರು
ರಾಗ ಶಹಾನ. ಆದಿ ತಾಳ

ಸಿಕ್ಕಿದೆಯೊ ಎಲೋ ಜೀವ
ಕುಕ್ಕಿ ಕೊಲ್ಲದೆ ಬಿಡರು ||ಪ||
ಸೊಕ್ಕಿದ ಹೆಣ್ಣಿಗೆ ನೀ ಮರುಳಾಗಿ
ಉಕ್ಕಿನ ಕಂಭಕ್ಕೆ ನೀ ಗುರಿಯಾದೆ ||ಅ||

ಮನೆಮನೆ ತಪ್ಪದೆ
ಶುನಕನಂದದಿ ಹೋಗಿ
ಘನವಾದ ಕೂಳನೆ ತಿಂದು
ತನುವು ಕೊಬ್ಬಿ ಇಲ್ಲಿಗೆ ಬಂದೆ ||

ಹಾಳುರೂಕೋಳಕ್ಕೆ
ಕಾಲು ಚಾಚಿದ ಹಾಗೆ
ಮೂಳ ಸಂಸಾರಕೆ ನೀ ಗುರಿಯಾಗಿ
ತೇಲುತ್ತ ಮುಳುಗುತ್ತ ಇಲ್ಲಿಗೆ ಬಂದೆ ||

ಸುಣ್ಣವ ತಿಂದ ತಿ-
ಮ್ಮಣ್ಣನಂದದಿ ಬೆದರಿ
ಕಣ್ಣು ಕಾಣದೆ ನೀ ಕುಣಿದಾಡಿ
ದೊಣ್ಣೆ ಪೆಟ್ಟಿಗೆ ನೀ ಗುರಿಯಾದೆ ||

ಕಂಡವರ ಒಡವೆಯನು
ಬಡ್ಡಿಯ ಧನವನ್ನು
ಕಂಡು ಕಾಣದೆ ನೀ ತಿಂದ್ಯಲ್ಲೊ
ಮಿಂಡೇರ ಒಡನೆ ಮುಂಡೆಮಗನೆ ||

ಸತಿಸುತರೆಂಬುವರೆ
ಗತಿಯೆಂದು ನಂಬಿದೆಲೊ
ಯತಿಗಳತಿಥಿಗಳು ಬಂದರೆ ಮನೆಗೆ
ಗತಿಯಿಲ್ಲವೆಂದು ಖತಿಗೊಂಬ್ಯಲ್ಲೊ ||

ಬಣ್ಣಿಸಲೆನ್ನಳವೆ
ಅನುದಿನ ಪಾಪವ ಮಾಡಿ
ಬೆಣ್ಣೆಯ ತಿಂದ ಬೆಕ್ಕಿನ ಹಾಗೆ
ಕಣ್ಣು ಬಿಡುತ ಇಲ್ಲಿಗೆ ಬಂದೆ ||

ಗೋಪಾಲಕೃಷ್ಣಯ್ಯ
ತಾಪತ್ರಯಂಗಳ ಕಳೆವ
ಆಪತ್ತೆಲ್ಲ ಪರಿಹಾರ ಮಾಡುವ
ಶ್ರೀಪತಿಪುರಂದರವಿಠಲನ ಭಜಿಸೆಲೋ ||
***

pallavi

sikkideyo elO jIva kukki kollade biDaru

anupallavi

sokkida heNNige nI maruLAgi ukkina kambhakke nI guriyAde

caraNam 1

mane mane tappade shunakanandadi hOgi ghanavAda kULane tindu tanuvu kobbi illige bande

caraNam 2

hALurukOLakke kAlu cAcida hAge mULa samsArake nI guriyAgi tElutta muLugutta illige bande

caraNam 3

suNNava tinda timmaNNanandadi bedari kaNNu kANade nI kuNidADidoNNe peTTige nI guriyAde

caraNam 4

kaNDavara oDaveyanu paNDiya dhanavannu kaNDu kANade nI tindayallo miNDEra oDane muNDemagane

caraNam 5

satisuta rembuvara gatiyendu nmbidelo yatigaLa tithigaLu bandare manege gatiyillavendu gatigombyallo

caraNam 6

baNNIsalennaLave anudina pApava mADi beNNeya tinda bekkina hAge kaNNu biDuta illige bande

caraNam 7

gOpAlakrSNayya tApatrayangaLa kaLeva Apattella parihAra mADuva shrIpati purandara viTTalana bhajiselO
***

ಸಿಕ್ಕಿದೆಯೋ ಎಲೆ ಜೀವ ನಿನ್ನ ಕುಕ್ಕಿ ಕೊಲ್ಲದೆ ಬಿಡರು ಪ

ಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪ

ಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1

ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2

ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3

ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4

ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
**********