Showing posts with label ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ jayesha vittala. Show all posts
Showing posts with label ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ jayesha vittala. Show all posts

Thursday, 5 August 2021

ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ ankita jayesha vittala

 ..

ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ

ಘನ್ನ ಭೂ ಭಾರನವ ಭವನಮಿತ್ರ ಪ


ಬನ್ನಬಟ್ಟೆನೊ ಬಹಳ ಬಲುಹೀನ ವೃತ್ತಿಯಲಿ

ಮಾನ್ಯರಲಿ ತಲೆಯೆತ್ತಿ ಇರುವಂತೆ ಎಂದಿಡುವಿ ಅ.ಪ.


ಏನು ಕೊಟ್ಟರು ಕೊಡು ದಾನವಂತಕ ಎನ್ನ

e್ಞÁನದಲಿ ನೀನಿತ್ಯ ನೆಲಸಿ ನಲಿಯೊ

ಧೇನುವತ್ಸದ ತೆರದಿ ನೀನೆನಗೆ ಹಿತತೋರು

ನಾನೊಲ್ಲೆ ಸುರಲೋಕ ನಿನ್ನೊಲಿಮೆ ಇಲ್ಲದಿರೆ 1


ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ

ಸುರಿ ನಿನ್ನ ಕರುಣರಸ ಪ್ರಾಣನಾಥ

ಸರ್ವೇಶ ನೀನೆಂದು ಪರತಂತ್ರ ನಾ ಸತತ

ಶರಣನ್ನ ದಣಿಸುವದು ಘನವೇನೊ ಹರಿಯೆ 2


ಕೋಟಿಕಾಲ ನರಕವಾಸಿಯಾದರು ಎನಗೆ

ನೀಟುಗತಿ ದೊರೆವುದೇ ನೀನೊಲಿಯದಿರಲು

ಸಾಟಿಯಿಲ್ಲದ ದೈವ ಜಯೇಶವಿಠಲ

ನಾಟಿ ಹಿರಿಯರ ಕರುಣ ನೀನಾಗಿ ಕೃಪೆಮಾಡು 3

***