Showing posts with label ಕೆಟ್ಟು ನೆಂಟರ ಸೇರೋದು ಬಹಳ ಕಠಿಣ purandara vittala. Show all posts
Showing posts with label ಕೆಟ್ಟು ನೆಂಟರ ಸೇರೋದು ಬಹಳ ಕಠಿಣ purandara vittala. Show all posts

Thursday, 5 December 2019

ಕೆಟ್ಟು ನೆಂಟರ ಸೇರೋದು ಬಹಳ ಕಠಿಣ purandara vittala

ರಾಗ ಕಾಂಭೋಜ ಛಾಪುತಾಳ

ಕೆಟ್ಟು ನೆಂಟರ ಸೇರೋದು ಬಹಳ ಕಠಿಣ ||ಪ||
ಇನ್ನು , ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ||ಅ||

ವಿಷವ ಕುಡಿಯಲುಬಹುದು, ಎಸೆದ ಶೂಲದ ಮುಂದೆ
ಒಸಗಿ ಬಹುವೇಗದಿಂ ಹಾಯಬಹುದು
ವಿಷದ ಕುಂಡದ ಒಳಗೆ ಮುಳುಗಿಕೊಂಡಿರಬಹುದು
ಎಸೆವ ಅಂಬಿಗೆ ಎದೆಯ ಗುರಿಮಾಡಬಹುದು ||

ಶರಧಿ ಧುಮುಕಲುಬಹುದು , ಉರಗನಪ್ಪಲುಬಹುದು
ಧರೆ ತುಂಬ ಗ್ರಾಸಕೊಡಬಹುದು
ಮರದ ಕೊಂಬಿನ ಮೃಗಕೆ ಇರಿಯಲು ಕೊಡಬಹುದು
ಗರಗಸದಲಿ ಕೊರಳ ಕೊಯಿಸಿಕೊಳಬಹುದು ||

ಕುಡುಗೋಲ ಪಿಡಿದು ಕೊರಳನು ಕೊಯ್ದುಕೊಳಬಹುದು
ಒಡಲಿಗಾಗಿ ಹುಡಿಯ ಮುಕ್ಕಬಹುದು
ಪೊಡವಿಯೊಳು ಪುರಂದರವಿಠಲರಾಯನ
ಕಡುಹರುಷದಿ ಭಜಿಸಿ ಸುಖಿಯಾಗಬಹುದು ||
***

pallavi

keTTu neNTara sEruvudu bahuLa kaSTa huTTELu janmakke bara bEDa hariye

caraNam 1

viSava kuDiyalu bahudu iridu koLLalu bahudu basiva shulake biddu sAyalu bahudu
hasageTTu neNTara maneya bAgilali bAyihalla kisiyalA koraLa koikoLa bahudu hariye

caraNam 2

uriyanappalu bahudu dhareya dhumukalu bahudu mereva mArige grAsavAgalU bahudu
suriva keNDada maLege bari maiyoLira bahudu baruva shastrada monege guriyAga bahudu

caraNam 3

kuDugOla piDidu kUliya mADi uNa bahudu oDaligAginnobbarALAga bahudu
jagadoDeya siri purandara viTTalana nAmavanu aDigaDige nene nenedu sukhiyAgu manave
***