ಕಾಖಂಡಕಿ ಶ್ರೀ ಕೃಷ್ಣದಾಸರು
ಮದ್ದಾನೆ ಗತಿ ಸಖಿ ಬಾರಮ್ಮಾ|| ಮುದ್ದು ಮೊಗದ ರಂಗನ ತಂದು ತೋರಮ್ಮಾ 1
ಇಂದು ಎನ್ನ ಚಿತ್ತ ಸ್ವಸ್ಥವಾಗದೇ| ಒಂದುಗಳಿಗಿ ಕ್ರಮಣವಾಗಿ ಹೋಗದೇ 2
ಬಿಗಿದವೇನೆ ಮಾಯಿ ಫಣಿಗಳು| ವೇಗದಿಂದ ಬರುತಿದೇ ತಂಗಾಳಿಗಳು 3
ಮಂದರಧರನು ಯಾಕೆ ಬಾರನೇ| ಚಂದ್ರ ಕಿರಣ ಝಳಕ ನಿಲ್ಲಲಾರೆನೇ 4
ಮೊದಲೆನ್ನ ಬಿನ್ನಹವ ಹೋಗಿ ನೀನು ಹೇಳಮ್ಮಾ 5
ಮೊದಲೆನ್ನ ಕೈಯ್ಯಾ ತಾ ಹಿಡುವರೇ| ತದನಂತರದಿ ತಪ್ಪ ನೋಡುವರೇ 6
ಆರಿಸಿಬ್ಯಾಡೆಂದು ಹೇಳಿ ಕುಂದೆನ್ನಾ| ಕರೆತಾರೆ ಮಹಿಪತಿ ಸುತ ಜೀವನಾ 7
****