Showing posts with label ವೃಂದಾವನದೊಡೆಯ ಸ್ವಾಮಿ ಮಂತ್ರಾಲಯ ramavallabha vittala. Show all posts
Showing posts with label ವೃಂದಾವನದೊಡೆಯ ಸ್ವಾಮಿ ಮಂತ್ರಾಲಯ ramavallabha vittala. Show all posts

Friday, 27 December 2019

ವೃಂದಾವನದೊಡೆಯ ಸ್ವಾಮಿ ಮಂತ್ರಾಲಯ ankita ramavallabha vittala

ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ
ಚಂದದಿ ಬಂದು ದರುಶನವಿತ್ತರು ಸ್ವಾಮಿ ಯತಿರಾಯ ಪ.

ಮೂಢಮತಿಯು ನಾನು ಎನ್ನಗಾಢ ನಿದ್ರೆಯಲಿ
ಮಾಡುತ ಪೂಜೆಯ ಎನಗಾನಂದ ಪಡಿಸಿದನು 1

ಗುರುನಾರದ ದಿನದಿ ಸ್ವಾಮಿ ಹರಿದಾಸರ ಗೃಹದಿ
ಕರುಣ ತೋರಿ ದರುಶನವಿತ್ತು ಎನಗಾನಂದ ಪಡಿಸಿದರು 2

ಕರಿರಾಜವರದಾ ಗುರುರಾಜರಿಗೊಲಿದು
ಪರಮಭಕ್ತರ ಮಂದಿರದಿ ಎನಗಾನಂದ ಪಡಿಸಿದರು 3

ತುಂಗಾತೀರದಲಿ ತಾವು ಚಂದದಿ ನಿಂತು
ಮಂಗಳ ರಾಮನ ಪೂಜೆಯ ಮಾಡಿ
ಎನಗಾನಂದ ಪಡಿಸಿದರು 4

ರಾಮ ಪೂಜೆಯ ಮಾಡಿ ರಾಮಧ್ಯಾನದಿ ನಿರಂತರ
ರಮಾವಲ್ಲಭವಿಠಲ ಭಜಿಸುವ ಪ್ರಿಯರಿವರು 5
*************